ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನಡೆಸಿದ ಜಾತಿ ಸಮೀಕ್ಷೆಯನ್ನು ‘ನಕಲಿ’ ಎಂದು ಕರೆದಿರುವ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಗಣತಿ ನಡೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ 2022-2023ರಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಲಾಗಿದೆ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಹೇಗಾದರೂ ದೇಶಾದ್ಯಂತ ಜಾತಿ ಗಣತಿ ನಡೆಸಲು ಕಾಂಗ್ರೆಸ್ ಸಕಲ ಪ್ರಯತ್ನವನ್ನು ನಡೆಸಲಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ನಮ್ಮ ಮುಂದಿನ ಗುರಿ ‘ಜಾತಿ ಗಣತಿ’ ಜಾರಿ ಮಾಡುವಂತೆ ಮಾಡುವುದು: ರಾಹುಲ್ ಗಾಂಧಿ
“ರಾಜಕೀಯವಾಗಿ ನಾವು ನಷ್ಟವನ್ನು ಅನುಭವಿಸಬೇಕಾದ ಸ್ಥಿತಿ ಎದುರಾದರೂ ಕೂಡಾ ನಾವು ಜಾತಿ ಗಣತಿ ಮಾಡಿಸುತ್ತೇವೆ. ಇದು ಬಿಹಾರದಲ್ಲಿ ನಡೆಸಿದ ನಕಲಿ ಜಾತಿ ಸಮೀಕ್ಷೆಯಂತೆ ಇರಲಾರದು. ಬಿಹಾರದ ಜನರನ್ನು ಜಾತಿ ಸಮೀಕ್ಷೆ ಹೆಸರಲ್ಲಿ ಜನರನ್ನು ಮುರ್ಖರನ್ನಾಗಿಸಲಾಗುತ್ತಿದೆ” ಎಂದು ಹೇಳಿದರು.
ಇನ್ನು ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂಬ ತನ್ನ ಬೇಡಿಕೆಯನ್ನು ರಾಹುಲ್ ಗಾಂಧಿ ಪುನರುಚ್ಛರಿಸಿದರು. ಹಾಗೆಯೇ ದಲಿತ, ಹಿಂದುಳಿದ ವರ್ಗ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಿತಾಸಕ್ತಿಯಿಂದ ದೇಶಾದ್ಯಂತ ಜಾತಿ ಗಣತಿ ನಡೆಸಬೇಕು” ಎಂದು ರಾಹುಲ್ ಆಗ್ರಹಿಸಿದರು.
LIVE: संविधान सुरक्षा सम्मेलन | पटना, बिहार https://t.co/LQ2Lzwop81
— Rahul Gandhi (@RahulGandhi) January 18, 2025
“ಈ ಎಲ್ಲಾ ಸಮುದಾಯಗಳ ಜನಸಂಖ್ಯೆ, ಶಾಸಕಾಂಗದಲ್ಲಿ ಅವರ ಭಾಗಿತ್ವ, ಶೈಕ್ಷಣಿಕ ಕ್ಷೇತ್ರದಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಈ ಸಮುದಾಯದ ಭಾಗಿತ್ವವನ್ನು ಕೂಡಾ ಈ ಜಾತಿ ಗಣತಿ ಅಥವಾ ಸಮೀಕ್ಷೆ ಒಳಗೊಂಡಿರುತ್ತದೆ” ಎಂದು ಕಾಂಗ್ರೆಸ್ ಸಂಸದ ತಿಳಿಸಿದರು.
ಇದನ್ನು ಓದಿದ್ದೀರಾ? ಬಿಹಾರದ ಜಾತಿ ಗಣತಿಯನ್ನು ಸ್ವಾಗತಿಸಿದ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’
ಇನ್ನು ಈ ಸಮುದಾಯಗಳ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯ ಆಧಾರದಲ್ಲಿ ಅಭಿವೃದ್ಧಿ ನೀತಿಗಳನ್ನು ರೂಪಿಸಬೇಕು. ದೇಶದ ಸಂಪತ್ತು ಕೆಲವೇ ಜನರ ಕೈಯಲ್ಲಿದೆ. ಬಡವರು ಮತ್ತು ರೈತರು ಅತೀ ಕೆಟ್ಟ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಹೇಳಿದರು.
ಖಾಸಗಿ ಕ್ಷೇತ್ರದಲ್ಲಿ ದಲಿತ ಸಮುದಾಯದ ಸಹಭಾಗಿತ್ವದ ಬಗ್ಗೆಯೂ ಕಾಂಗ್ರೆಸ್ ಸಂಸದ ಮಾತನಾಡಿದ್ದಾರೆ. “500 ಖಾಸಗಿ ಸಂಸ್ಥೆಗಳ ಪಟ್ಟಿಯನ್ನು ಮಾಡಿದರೆ ಆ ಸಂಸ್ಥೆಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದವರು ಇರುವುದು ಅತೀ ಕಡಿಮೆ” ಎಂದು ಅಭಿಪ್ರಾಯಿಸಿದರು.
