ನಮ್ಮ ಮುಂದಿನ ಗುರಿ ‘ಜಾತಿ ಗಣತಿ’ ಜಾರಿ ಮಾಡುವಂತೆ ಮಾಡುವುದು: ರಾಹುಲ್‌ ಗಾಂಧಿ

Date:

ನಮ್ಮ ಮುಂದಿನ ಗುರಿ ದೇಶದಲ್ಲಿ ‘ಜಾತಿ ಗಣತಿ’ ಜಾರಿಯಾಗುವಂತೆ ಮಾಡುವುದು. ಜಾತಿ ಗಣತಿಯ ಆಧಾರದ ಮೇಲೆ ಮೀಸಲಾತಿಗೆ ಹಾಕಲಾಗಿರುವ 50%ನ ಮಿತಿಯನ್ನು ವಿಸ್ತರಿಸಬೇಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

- Advertisement -

ಶನಿವಾರ, ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್‌ ಗಾಂಧಿ, “ಬಿಜೆಪಿ ಮನುಸ್ಮೃತಿಯನ್ನು ಸಂವಿಧಾನಕ್ಕಿಂತ ಉನ್ನತ ಸ್ಥಾಯಿಯಲ್ಲಿ ಇರಿಸಿಕೊಂಡಿದೆ. ಮಹಾಭಾರತದಲ್ಲೂ ಜಾತಿ ಪದ್ಧತಿ ಇತ್ತು, ದ್ರೋಣಾಚಾರ್ಯ ಗುರು ದಕ್ಷಿಣೆಗಾಗಿ ಏಕಲವ್ಯ ಬೆರಳು ಕತ್ತರಿಸಿಕೊಡುವಂತೆ ಮಾಡಿದರು. ಈಗ ಕೇಂದ್ರ ಸರ್ಕಾರ ಕೂಡ ದೇಶದ ಯುವಜನರ ಹೆಬ್ಬೆರಳನ್ನು ಕತ್ತರಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Quockerwodger’: ಶಶಿ ತರೂರ್ ಸೂಚಿಸಿದ ಹೊಸ ರಾಜಕೀಯ ಪದ!

ಇದು 19ನೇ ಶತಮಾನದ ಇಂಗ್ಲಿಷ್ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಪರೂಪದ ಪದ. ಮೂಲತಃ ದಾರಗಳ ಮೂಲಕ ನಿಯಂತ್ರಿಸಲ್ಪಡುವ ಮರದ ಗೊಂಬೆಯನ್ನು ಸೂಚಿಸುತ್ತಿತ್ತು. ಗೊಂಬೆಯಾಟದಲ್ಲಿ ಸೂತ್ರಧಾರ ದಾರ ಎಳೆದಂತೆ ಗೊಂಬೆ ಕೈಕಾಲು ಆಡಿಸುತ್ತದೆ. ಗೊಂಬೆ ಚಲಿಸುತ್ತದೆಯೇ...

ರಾಷ್ಟ್ರೀಯವಾದ ಹೊಟ್ಟೆ ತುಂಬಿಸುವುದಿಲ್ಲ; ಟ್ರಂಪ್‌ಗೆ ಅಮೆರಿಕನ್ನರು ಕಲಿಸಿದ ಪಾಠ...

ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ...

ಕ್ಯಾಂಪಸ್ ರಾಜಕಾರಣದ ಹರಣ: ಎಎಂಯು, ಜಾಮಿಯಾದಲ್ಲಿ ಸೊಲ್ಲಡಗಿದ್ದರ ಆಂತರ್ಯವೇನು?

ಸ್ವಾತಂತ್ರ್ಯ ಸಂಗ್ರಾಮದ ಗರಡಿಯಾಗಿ, ದೇಶಕ್ಕೆ ಕ್ರಾಂತಿಕಾರಿ ನಾಯಕರನ್ನು ನೀಡಿದ್ದ ಅಲೀಗಢ ಮತ್ತು ಜಾಮಿಯಾ ಅಂಗಳಗಳು ಇಂದು ಮೌನಕ್ಕೆ ಜಾರಿವೆ. 2006ರ ನಿರ್ಬಂಧಗಳಿಂದ ಹಿಡಿದು ಮೋದಿ ಸರ್ಕಾರದ ಅವಧಿಯ ತನಿಖೆಗಳವರೆಗೆ - ಮುಸ್ಲಿಂ ವಿಶ್ವವಿದ್ಯಾಲಯಗಳ...

“ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದಂತೆಯೇ, ನೀವು (ಸರ್ಕಾರ) ದೇಶದ ಯುವಕರ ಹೆಬ್ಬೆರಳನ್ನು ಕತ್ತರಿಸಿದ್ದೀರಿ. ಎಲ್ಲವನ್ನೂ ಅದಾನಿ ಹಾಗೂ ಇನ್ನಿತರ ಕೈಗಾರಿಕೋದ್ಯಮಿಗಳ ಕೈಯಲ್ಲಿ ಇಡುತ್ತಿದ್ದೀರಿ” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರಲು.

ಸಂವಿಧಾನದ ವಿಚಾರವಾಗಿ ಮಾತನಾಡಿದ ರಾಹುಲ್‌, “ಸಾವರ್ಕರ್ ಅವರು ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂದಿದ್ದರು. ಸಾವರ್ಕರ್‌ ಅವರ ಆ ನಿಲುವಿಗೆ ಬಿಜೆಪಿಯೂ ಬದ್ಧವಾಗಿದೆಯೇ? ಆ ನಿಲುವಿಗೆ ಬದ್ದವಾಗಿರುವುದೇ ಆದಲ್ಲಿ, ನೀವು (ಬಿಜೆಪಿ) ಸಂವಿಧಾನವನ್ನು ರಕ್ಷಿಸುವ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಾಗ, ಸಾವರ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದೀರಿ. ಸಾವರ್ಕರ್ ಅವರ ಮಾನಹಾನಿ ಮಾಡುತ್ತಿದ್ದೀರಿ” ಎಂದು ಬಿಜೆಪಿಯನ್ನು ಗೇಲಿ ಮಾಡಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಸ್ಟಡಿ ಹೆಸರಿನಲ್ಲಿ ಕಾಲಹರಣಕ್ಕಿಲ್ಲ ಅವಕಾಶ: ಸುಪ್ರೀಂ ಮಹತ್ವದ ತೀರ್ಪು

ಪೊಲೀಸ್ ಅಥವಾ ತನಿಖಾ ಸಂಸ್ಥೆಗಳು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ...

ಹೆಂಡತಿ ಬೇರೆ ಗಂಡಸಿನೊಂದಿಗೆ ಮಾತನಾಡಿದರೆ ವಿವಾಹೇತರ ಸಂಬಂಧದ ಆರೋಪ ಮಾಡುವುದು ಕ್ರೌರ್ಯ: ಜಾರ್ಖಂಡ್ ಹೈಕೋರ್ಟ್

ಹೆಂಡತಿ ತನ್ನ ಗಂಡನ ಮೊಬೈಲ್ ಫೋನ್ ಬಳಸಿ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದ್ದಾಳೆ...

ಕಾವೇರಿ ವಿವಾದ: ಕರ್ನಾಟಕ ವಿರುದ್ಧ ಸುಪ್ರೀಂನಲ್ಲಿ ತಮಿಳುನಾಡು ಮೌಖಿಕ ವಾದ ಮಂಡನೆ!

ಕಳೆದ ಅಕ್ಟೋಬರ್ 23ರಿಂದ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ಬಿಡುಗಡೆ ಮಾಡುತ್ತಿಲ್ಲ...

ಮೆಟಾ ಇಂಡಿಯಾ ವಿರುದ್ಧ ದೆಹಲಿ ಪೊಲೀಸರಿಂದ ಎಫ್‌ಐಆರ್ ದಾಖಲು: NHRC ನಿರ್ದೇಶನದಂತೆ ಕ್ರಮ

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆಯಾದ 'ಮೆಟಾ' ಒಡೆತನದ ಪ್ಲಾಟ್‌ಫಾರ್ಮ್‌ಗಳಲ್ಲಿ ಮಕ್ಕಳ ಮೇಲಿನ...