ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಕೂಡ ಅಪರಾಧ. ಭ್ರಷ್ಟಾಚಾರದ ಮೂಲವೇ ಲಂಚ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಕಾನೂನುಗಳು ಜಾರಿಯಲ್ಲಿದ್ದರೂ, ಲಂಚದ ಹಾವಳಿ ಎಲ್ಲೆಡೆ ಜೀವಂತವಾಗಿದೆ. ಇತ್ತೀಚೆಗೆ, ಸರ್ಕಾರಿ ಸೇವೆಗಳನ್ನು ಒದಗಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಯ ಮೇಲೆ ಜನರು ಹಣವನ್ನು ಎಸೆದು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರ್ಕಾರಿ ಕಚೇರಿಗೆ ನುಗ್ಗಿದ್ದ ಜನರ ಗುಂಪು ಅಧಿಕಾರಯೊಬ್ಬರ ಮೇಲೆ ಹಣದ ನೋಟುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಸರ್ಕಾರಿ ಅಧಿಕಾರಿ ಕೈಗಳನ್ನು ಮಡಚಿಕೊಂಡು ಕುರ್ಚಿಯ ಮೇಲೆ ಕುಳಿತಿದ್ದಾರೆ. ಅವರ ಮೇಲೆ ಜನರು ನೋಟುಗಳನ್ನು ಎಸೆಯುತ್ತ, ಗುಜರಾತಿ ಭಾಷೆಯನ್ನು ಬೈಯುತ್ತಿರುವ, ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಅಧಿಕಾರಿಯ ಮೇಲೆ ನೋಟುಗಳನ್ನು ಎಸೆದು ತಮ್ಮ ಕೋಪ ಮತ್ತು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ले खा ! कितनी हराम की कमाई खायेगा, जनता ने दिया उसी भाषा में जवाब
— कलम की चोट (@kalamkeechot) January 12, 2025
अब अधिकारी भी क्या करे उन्हें जॉब पाने के लिए कितनी रिश्वत दी होगी ? अब अपने आका(उच्च अधिकारियों) को दे रहा होगा ? इसका अंदाजा भी लगाना जरूरी है #viralvideo गुजरात का बताया जा रहा है। pic.twitter.com/Zru5e2TYZk
ವಿಡಿಯೋವನ್ನು ಹಂಚಿಕೊಂಡಿರುವ ನೆಟ್ಟಿಗರು, “ಭ್ರಷ್ಟಾಚಾರದ ಕ್ಯಾನ್ಸರ್ ಈಗ ಸಾಂಕ್ರಾಮಿಕ ರೋಗದಂತೆ ಹರಡಿದೆ. ಈ ಕ್ಯಾನ್ಸರ್ಅನ್ನು ತೊಡೆದುಹಾಕುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ, ಭ್ರಷ್ಟಾಚಾರವನ್ನು ತಡೆಯಲು ಅವರು ಏನನ್ನೂ ಮಾಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತೆಗೆದುಕೊಳ್ಳಿ. ನೀವು ಎಷ್ಟು ಲಂಚದ ಹಣ ತಿನ್ನುತ್ತೀರಿ? ಸಾರ್ವಜನಿಕರು ನಿಮಗೆ ತಕ್ಕ ಪಾಠ ಕಲಿಸಿದ್ದಾರೆ. ಸಾರ್ವನಿಕರು ಸೇವೆಗಳನ್ನು ಪಡೆಯಲು ಅವರು ಎಷ್ಟು ಲಂಚ ನೀಡುತ್ತಿದ್ದರು? ಈ ಅಧಿಕಾರಿಗಳು ಲಂಚವನ್ನು ತಮ್ಮ ಮೇಲಧಿಕಾರಿಗಳಿಗೂ ನೀಡುತ್ತಿರಬೇಕು?ಇದನ್ನು ಪತ್ತೆ ಹಚ್ಚುವುದು ಮುಖ್ಯ” ಎಂದು ನೆಟ್ಟಿಗರು ಹೇಳಿದ್ದಾರೆ.
“ಭಾರತದಲ್ಲಿ, ಬಿಜೆಪಿ ಅಥವಾ ಬಿಜೆಪಿಯೇತರ ಸರ್ಕಾರ, ಸರ್ಕಾರಿ ನೌಕರರು, ಪಿಯೋನ್‌ಗಳಿಂದ ಹಿಡಿದು ಉನ್ನತ ಐಎಎಸ್ ಅಧಿಕಾರಿಗಳವರೆಗೆ ಎಲ್ಲರೂ ಭ್ರಷ್ಟರಾಗಿದ್ದಾರೆ. ಅವರ ಆದಾಯ, ಆಸ್ತಿ ವೇಗವಾಗಿ ಬೆಳೆಯುತ್ತಿದೆ” ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.