ಸುಮ್ಮನಿದ್ದರೆ ಐನ್‌ಸ್ಟೈನ್‌ ಪಠ್ಯವನ್ನೂ ಕಿತ್ತೆಸೆಯುತ್ತಾರೆ ; ʼಎನ್‌ಸಿಆರ್‌ಟಿʼ ನಡೆಗೆ ನಾಸೀರುದ್ದೀನ್‌ ಶಾ ಆಕ್ರೋಶ

Date:

Advertisements

10ನೇ ತರಗತಿಯ ಪಠ್ಯಕ್ರಮದಿಂದ ಪ್ರಮುಖ ವಿಷಯಗಳನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರದ ನಡೆಯನ್ನು ಬಾಲಿವುಡ್‌ನ ಹಿರಿಯ ನಟ ನಾಸೀರುದ್ದೀನ್‌ ಶಾ ವಿರೋಧಿಸಿದ್ದಾರೆ. ಜೊತೆಗೆ ʼಇಸ್ರೋʼ ಮುಖ್ಯಸ್ಥರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಸೀರುದ್ದೀನ್‌ ಶಾ, “ದಿನ ಕಳೆಯುತ್ತಾ ನಮ್ಮ ದೇಶದ ಜನರಲ್ಲಿ ವಿಜ್ಞಾನದ ಕುರಿತ ಕುತೂಹಲ ಕ್ಷೀಣಿಸುತ್ತಿದೆ. ಜನ ವಿಜ್ಞಾನದಿಂದ ವಿಮುಖರಾಗಿ ಮೂಡನಂಬಿಕೆಯತ್ತ ವಾಲಿಕೊಳ್ಳುತ್ತಿದ್ದಾರೆ. 10ನೇ ತರಗತಿಯ ಪಠ್ಯಪುಸ್ತಕದಿಂದ ವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ಅವರ ʼದಿ ಎವಲ್ಯೂಷನ್‌ ಥಿಯರಿʼ ವಿಷಯವನ್ನು ತೆಗೆದು ಹಾಕಲಾಗಿದೆ. ಹಾಗೇ ಬಿಟ್ಟರೆ ಅಲ್ಬರ್ಟ್‌ ಐನ್‌ಸ್ಟೈನ್‌ ಕುರಿತ ವಿಷಯಗಳನ್ನು ಕಿತ್ತೆಸೆಯುತ್ತಾರೆ. ಇಂತಹ ಮಹಾನ್‌ ಚೇತನಗಳ ವಿಚಾರಗಳಿಲ್ಲದ ನಮ್ಮ ಪಠ್ಯಪುಸ್ತಕಗಳು ಹೇಗಿರಲಿವೆ ಎಂದು ಊಹಿಸಿದ್ದೀರಾ” ಎಂದು ಸಾರ್ವಜನಿಕರಿಗೆ ಪ್ರಶ್ನೆ ಹಾಕಿದ್ದಾರೆ.

ಇದೇ ವೇಳೆ ಇಸ್ರೋ ಮುಖ್ಯಸ್ಥರ ಬಗ್ಗೆ ಕೂಡ ನಾಸೀರುದ್ದೀನ್‌ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಸ್ರೋ ಮುಖ್ಯಸ್ಥೆ ಬಹುಶಃ ಮಹಿಳೆ ಎಂದುಕೊಳ್ಳುತ್ತೇನೆ. ಆಕೆ, ʼಎಲ್ಲ ವೈಜ್ಞಾನಿಕ ಆವಿಶ್ಕಾರಗಳು ಪುರಾಣಗಳಲ್ಲಿವೆ. ಪುರಾಣದಲ್ಲಿ ಹಿಂದೆಯೇ ದಾಖಲಾಗಿದ್ದ ಆವಿಶ್ಕಾರಗಳನ್ನು ತಮ್ಮದು ಎನ್ನುವಂತೆ ಯುರೋಪಿಯನ್ನರು ಬಿಂಬಿಸುತ್ತಿದ್ದಾರೆʼ ಎಂದು ತಪ್ಪು ಹೇಳಿಕೆ ನೀಡಿದ್ದಾರೆ. ಈ ರೀತಿ ಮಾತನಾಡುವವರ ಜೊತೆಗೆ ವಾದ ಮಾಡಿಯಾದರೂ ಏನು ಪ್ರಯೋಜನ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಇಳಯರಾಜ ಜನುಮದಿನ | ಸಂಗೀತ ಮಾಂತ್ರಿಕನ ಹೆಜ್ಜೆ ಗುರುತುಗಳು

ಮಕ್ಕಳ ವಿದ್ಯಾಭ್ಯಾಸಕ್ಕೆ ಹೊರೆಯಾಗಲಿವೆ ಎಂಬ ಕಾರಣ ನೀಡಿ 10ನೇ ತರಗತಿಯ ಪಠ್ಯಕ್ರಮದಿಂದ ʼಪೀರಿಯಾಡಿಕ್‌ ಟೇಬಲ್‌ʼ, ʼದಿ ಎವಲ್ಯೂಷನ್‌ ಥಿಯರಿʼ ಸೇರಿದಂತೆ 6 ಪ್ರಮುಖ ವಿಷಯಗಳನ್ನು ʼಎನ್‌ಸಿಇಆರ್‌ಟಿʼ ಇತ್ತೀಚೆಗಷ್ಟೇ ತೆಗೆದು ಹಾಕಿತ್ತು. ಸಂಸ್ಥೆಯ ಈ ನಡೆಗೆ ದೇಶವ್ಯಾಪಿಯಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X