ನೈತಿಕವಾಗಿ, ನಿರ್ಭಯವಾಗಿ ಮತದಾನದ ಅಧಿಕಾರವನ್ನು ಚಲಾಯಿಸಿದಾಗ ಮಾತ್ರ ಉತ್ತಮ ಸರ್ಕಾರ ರಚಿಸಿ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಕಲಬುರಗಿಯ ಎ ವಿ ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್ ಎಸ್ ಹೊಸಮನಿ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಮತದಾನದ ಹಕ್ಕು ಕೇವಲ ಪದವೀಧರರಿಗೆ, ತೆರಿಗೆ ಕಟ್ಟುವವರಿಗೆ, ಜಮೀನ್ದಾರರಿಗೆ ಮಾತ್ರ ನೀಡಬೇಕೆಂದು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಡಾ.ಬಾಬಾಸಾಹೇಬರು ಅದನ್ನು ವಿರೋಧಿಸಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ಸಂವಿಧಾನದ ಮೂಲಕ ನಮಗೆ ನೀಡಿದ್ದಾರೆ. ಮತದಾನ ಎನ್ನುವುದು ನಮ್ಮೆಲ್ಲರಿಗೆ ಸಿಕ್ಕಂತಹ ದೈತ್ಯ ಶಕ್ತಿ. ಆ ಹಕ್ಕನ್ನು ದುರ್ಬಳಕೆ ಮಾಡಿಕೊಳ್ಳದೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಮ್ಮ ಪ್ರತಿನಿಧಿಯಾಗಿ ಕಳಿಸುವ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು. ಯಾವ ಸಮಾಜ ಮತಗಳನ್ನು ಮಾರಾಟ ಮಾಡಿಕೊಳ್ಳುತ್ತದೆಯೋ ಆ ಸಮಾಜದಲ್ಲಿ ಮಾರಾಟವಾಗುವ ನಾಯಕನೇ ಹುಟ್ಟುತ್ತಾನೆ” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ| ಬಸವಣ್ಣನವರ ಭಾವಚಿತ್ರ ಹರಿದ ಕಿಡಿಗೇಡಿಗಳು : ಸ್ಥಳೀಯರಿಂದ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಡಾ. ರಮೇಶ ಮಸರೂಬ, ಪ್ರೊ. ಎಸ್ ಎಸ್ ಕಮ್ಮಾರ, ಡಾ. ರಾಜಶೇಖರ ಬಾಬನೂರ, ಡಾ. ಟೀಕಪ್ಪ,
ಡಾ. ವೆಂಕಟೇಶ ಪೂಜಾರಿ, ಸಿದ್ದರಾಮ ಬಿಜಾಪುರ, ಡಾ. ಜೈಪ್ರಕಾಶ, ಬಾವಿಮನಿ, ಬಸವರಾಜ ಶೃಂಗೇರಿ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
