ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುವಾಗ ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ಅವರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ನೇತಾಜಿ ನಿಧನದ ದಿನಾಂಕವನ್ನು ಕೂಡಾ ಉಲ್ಲೇಖಿಸಿದ್ದರು. ಈ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಭಾನುವಾರ ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸ್ವಯಂ ಘೋಷಿತ ಹಿಂದುತ್ವ ಗುಂಪು ಅಖಿಲ ಭಾರತೀಯ ಹಿಂದೂ ಮಹಾಸಭಾ ದಕ್ಷಿಣ ಕೋಲ್ಕತ್ತಾದ ಭವಾನಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ಎಫ್‌ಐಆರ್ ದಾಖಲಿಸಿದ ನಂತರ, ದಕ್ಷಿಣ ಕೋಲ್ಕತ್ತಾದ ಎಲ್ಗಿನ್ ರಸ್ತೆಯಲ್ಲಿರುವ ನೇತಾಜಿಯ ಪೂರ್ವಜರ ಮನೆಯ ಬಳಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಕಾರ್ಯಕರ್ತರು ರಾಹುಲ್ ಗಾಂಧಿ ಪೋಸ್ಟ್ ವಿರುದ್ಧ ಪ್ರತಿಭಟನೆ ನಡೆಸಿದರು.
ಇದನ್ನು ಓದಿದ್ದೀರಾ? ಕೊಪ್ಪಳ | ನೇತಾಜಿ ಕನಸಿನ ಭಾರತ ನಿರ್ಮಾಣ ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿ; ಗಂಗರಾಜ್ ಅಳ್ಳಳಿ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಜ್ಯ ಅಧ್ಯಕ್ಷ ಚಂದ್ರಚೂಡ್ ಗೋಸ್ವಾಮಿ ಅವರು, “ರಾಹುಲ್ ಗಾಂಧಿಯವರು ನೇತಾಜಿಯನ್ನು ಮೊದಲು ಕಾಂಗ್ರೆಸ್ ತೊರೆಯುವಂತೆ ಮತ್ತು ನಂತರ ದೇಶ ತೊರೆಯುವಂತೆ ಒತ್ತಡ ಹೇರಿದ ಅದೇ ಪರಂಪರೆಯನ್ನು ಹೊಂದಿದ್ದಾರೆ” ಎಂದು ಟೀಕಿಸಿದರು.
“ರಾಹುಲ್ ಗಾಂಧಿ ಮತ್ತು ಅವರ ಪೂರ್ವಜರು ಯಾವಾಗಲೂ ಭಾರತದ ಜನರ ನೆನಪಿನಿಂದ ನೇತಾಜಿಯ ನೆನಪುಗಳನ್ನು ಅಳಿಸಿಹಾಕಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಭಾರತದ ಜನರೇ ಅವರಿಗೆ ಶಿಕ್ಷೆ ನೀಡುತ್ತಾರೆ. ಯಾರಾದರೂ ನೇತಾಜಿಯ ಬಗ್ಗೆ ಮಾಹಿತಿಯನ್ನು ವಿರೂಪಗೊಳಿಸಲು ಪ್ರಯತ್ನಿಸಿದರೆ ನಾವು ಯಾವಾಗಲೂ ಪ್ರತಿಭಟಿಸುತ್ತೇವೆ” ಎಂದು ಗೋಸ್ವಾಮಿ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ನೇತಾಜಿ ದೇಶವನ್ನು ಸ್ವತಂತ್ರಗೊಳಿಸಲು ಹೋರಾಡಿದ ಅಪ್ರತಿಮ ದೇಶಭಕ್ತ: ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ವಾರದ ಆರಂಭದಲ್ಲಿ ರಾಹುಲ್ ಗಾಂಧಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 1945ರ ಆಗಸ್ಟ್ 18 ಅನ್ನು ನೇತಾಜಿ ನಿಧನದ ದಿನಾಂಕವಾಗಿ ಉಲ್ಲೇಖಿಸಿದ್ದಾರೆ. ನೇತಾಜಿ ವಿಮಾನದಲ್ಲಿ ಹೋಗುತ್ತಿದ್ದ ವಿಮಾನ ಅಪಘಾತವಾದ ದಿನಾಂಕ ಇದಾಗಿದೆ. ಆದರೆ ನೇತಾಜಿ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ.
महान क्रांतिकारी, आज़ाद हिंद फौज के संस्थापक नेताजी सुभाष चंद्र बोस जी की जयंती पर उन्हें भावपूर्ण श्रद्धांजलि।
— Rahul Gandhi (@RahulGandhi) January 23, 2025
नेताजी का नेतृत्व, साहस, सामाजिक न्याय के लिए उनका संघर्ष, सहिष्णुता और समावेशिता के प्रति उनका योगदान आज भी हर भारतीय को प्रेरित करता है।
भारत माता के अमर सपूत को… pic.twitter.com/Fa2CTUu9BL
ನೇತಾಜಿ ಈ ಅಪಘಾತದ ಬಳಿಕ ಕಣ್ಮರೆಯಾಗಿದ್ದು, ಈ ಕಾರಣದಿಂದಾಗಿ ಯಾವುದೇ ಆಯೋಗವು 1945ರ ಆಗಸ್ಟ್ 18 ಅನ್ನು ಅವರ ಸಾವಿನ ದಿನಾಂಕವಾಗಿ ದೃಢಪಡಿಸಿಲ್ಲ. ಇಂದಿಗೂ ನೇತಾಜಿ ಸಾವಿನ ದಿನಾಂಕ ಮತ್ತು ಭವಿಷ್ಯದ ಬಗ್ಗೆ ಸಾಕಷ್ಟು ನಿಗೂಢತೆ ಉಳಿದಿದೆ. ಆದರೆ ಗೂಗಲ್‌ನಲ್ಲಿ ನಾವು ಹುಡುಕಿದಾಗ ನೇತಾಜಿ ಸಾವಿನ ದಿನಾಂಕವನ್ನು ಆಗಸ್ಟ್ 18, 1945 ಎಂದೇ ಉಲ್ಲೇಖಿಸಲಾಗುತ್ತದೆ. ಜೊತೆಗೆ ಕೆಲವು ಊಹಾಪೋಹಗಳನ್ನು ವಿವರಿಸಲಾಗಿದೆ.
ನೇತಾಜಿ ಸಾವಿನ ಬಗ್ಗೆ ರಾಹುಲ್ ಗಾಂಧಿ ಪೋಸ್ಟ್ ಮಾಡಿದ ಬಳಿಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ಸಾಕಷ್ಟು ಟೀಕೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ನೇತಾಜಿ ಸ್ವತಃ ಸ್ಥಾಪಿಸಿದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಕೂಡಾ ರಾಹುಲ್ ಗಾಂಧಿ ಪೋಸ್ಟ್ ಅನ್ನು ಖಂಡಿಸಿದೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಎರಡೂ ಪಕ್ಷದ ನಾಯಕರು ರಾಹುಲ್ ಗಾಂಧಿಯವರ ಈ ಪೋಸ್ಟ್ ಬಗ್ಗೆ ಟೀಕಿಸಿದ್ದಾರೆ.
