ವಿಮಾನದಲ್ಲಿ ಕುಡಿಯಲು ನೀರು ನೀಡಲಿಲ್ಲ, ಶೌಚಕ್ಕೂ ಬಿಡಲಿಲ್ಲ, ಕೈಗೆ ಬೇಡಿ: ಅಮಾನವೀಯವಾಗಿ ವಲಸಿಗರನ್ನು ಹೊರದಬ್ಬಿದ ಅಮೆರಿಕ

Date:

ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಅಮೆರಿಕ ಸರ್ಕಾರದ ನೀತಿಯ ಬಗ್ಗೆ ಬ್ರೆಜಿಲ್‌ ಆಡಳಿತ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದಿಂದ ಹತ್ತಾರು ಮಂದಿಯನ್ನು ಗಡಿಪಾರು ಮಾಡಿದ ನಂತರ ಬ್ರೆಜಿಲ್ ಸರ್ಕಾರವು ಡೊನಾಲ್ಡ್‌ ಟ್ರಂಪ್‌ ಆಡಳಿತದಿಂದ ವಿವರಣೆಯನ್ನು ಕೋರುವುದಾಗಿ ತಿಳಿಸಿದೆ.

- Advertisement -

ಅಮೆರಿಕದ ಈ ಕೃತ್ಯದ ಬಗ್ಗೆ ಬ್ರೆಜಿಲ್‌ನ ವಿದೇಶಾಂಗ ಸಚಿವಾಲಯವು ವಲಸಿಗರನ್ನು ನಡೆಸಿಕೊಳ್ಳುತ್ತಿರುವ ಬಗೆಯು “ಮಾನವ ಹಕ್ಕುಗಳ ಘೋರ ನಿರ್ಲಕ್ಷ್ಯ” ಎಂದು ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣವಾದ ವಲಸೆ ವಿರೋಧಿ ಕಾರ್ಯಸೂಚಿಯೊಂದಿಗೆ ಲ್ಯಾಟಿನ್ ಅಮೆರಿಕದ ದೇಶಗಳ ವಿರುದ್ಧ ಹಿಡಿತ ಸಾಧಿಸುತ್ತಿರುವಾಗ ಈ ಬೆಳವಣಿಗೆ ನಡೆದಿದೆ. ಡೊನಾಲ್ಡ್‌ ಟ್ರಂಪ್ ಒಂದು ವಾರದ ಹಿಂದೆ ಅಧಿಕಾರಕ್ಕೆ ಮರಳಿದ ನಂತರ, ಗ್ವಾಟೆಮಾಲಾ ಮತ್ತು ಬ್ರೆಜಿಲ್‌ನಂತಹ ವಿವಿಧ ದೇಶಗಳ ಅಕ್ರಮ ವಲಸಿಗರನ್ನು ವಿಮಾನಗಳ ಮೂಲಕ ಸಾಮೂಹಿಕ ಗಡಿಪಾರು ಮಾಡುವ ಮೂಲಕ ದಮನಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 

ಒಂದು ದಿನದ ಹಿಂದೆ ವಿಮಾನವೊಂದು ಬ್ರೆಜಿಲ್‌ನ ಉತ್ತರದ ನಗರವಾದ ಮನೌಸ್‌ನಲ್ಲಿ ಬಂದಿಳಿದಾಗ, ವಿಮಾನದಲ್ಲಿದ್ದ 88 ಬ್ರೆಜಿಲಿಯನ್ನರು ಕೈಕೋಳದಲ್ಲಿ ಇರುವುದನ್ನು ಅಲ್ಲಿನ ಅಧಿಕಾರಿಗಳು ಗಮನಿಸಿದರು. ತಕ್ಷಣ ಕೈಕೋಳವನ್ನು ಬಿಡಿಸಲು ಅಮೆರಿಕದ ಅಧಿಕಾರಿಗಳಿಗೆ ಆದೇಶಿಸಿದರು ಎಂದು ಬ್ರೆಜಿಲ್‌ನ ನ್ಯಾಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?

ಬ್ರೆಜಿಲ್‌ನ ನ್ಯಾಯ ಸಚಿವ ರಿಕಾರ್ಡೊ ಲೆವಾಂಡೋವ್ಸ್ಕಿ ಅವರು ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ “ನಮ್ಮ ದೇಶದ ನಾಗರಿಕರನ್ನು ಮೂಲಭೂತ ಹಕ್ಕುಗಳಿಂದ ಸ್ಪಷ್ಟವಾಗಿ ನಿರ್ಲಕ್ಷಿಸಿದ್ದಾರೆ” ಎಂದು ವಿವರಣೆ ನೀಡಿದ್ದಾರೆ.

ಶುಕ್ರವಾರ ರಾತ್ರಿ ವಿಮಾನದಲ್ಲಿ ಆಗಮಿಸಿದ ಬ್ರೆಜಿಲ್ ಪ್ರಯಾಣಿಕರನ್ನು ನಡೆಸಿಕೊಂಡ ಬಗ್ಗೆ ಅಲ್ಲಿನ ವಿದೇಶಾಂಗ ಸಚಿವಾಲಯವು ಅಮೆರಿಕ ಸರ್ಕಾರದಿಂದ ವಿವರಣೆಯನ್ನು ಕೋರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಮೆರಿಕದ ವಿಮಾನದಿಂದ ಆಗಮಿಸಿದ ಬ್ರೆಜಿಲ್‌ನ 31 ವರ್ಷದ ಕಂಪ್ಯೂಟರ್‌ ತಂತ್ರಜ್ಞ ಎಡ್ಗರ್ ಡಾ ಸಿಲ್ವಾ ಮೌರಾ ತಮಗಾದ ಕಿರುಕುಳವನ್ನು ವಿವರಿಸಿದರು. ಗಡಿಪಾರು ಮಾಡುವ ಮೊದಲು ಅವರನ್ನು 7 ತಿಂಗಳುಗಳ ಕಾಲ ಅಮೆರಿಕದಲ್ಲಿ ಬಂಧನದಲ್ಲಿಡಲಾಗಿತ್ತು. ವಿಮಾನದಲ್ಲಿ ಅಧಿಕಾರಿಗಳು ನಮಗೆ ನೀರು ನೀಡಲಿಲ್ಲ, ನಮ್ಮ ಕೈಕಾಲುಗಳನ್ನು ಬಂಧಿಸಲಾಗಿತ್ತು. ಶೌಚಕ್ಕೂ ಹೋಗಲು ಬಿಡಲಿಲ್ಲ. ಈ ರೀತಿ ನಡೆಸಿಕೊಂಡ ಕಾರಣದಿಂದ ಕೆಲವರು ಮೂರ್ಛೆ ಹೋದರು ಎಂದು ತಿಳಿಸಿದರು.

ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಎಸಿ ಹಾಕದೆ 4 ಗಂಟೆಗಳ ಕಾಲ ಕರೆದುಕೊಂಡು ಬಂದ ಕಾರಣ ನಮಗೆ ಉಸಿರಾಟದ ತೊಂದರೆ ಉಂಟಾಯಿತು. ವಲಸಿಗರನ್ನು ಟ್ರಂಪ್‌ ಸರ್ಕಾರ ಅಪರಾಧಿಗಳು ಎಂದು ಪರಿಗಣಿಸಿದೆ ಎಂದು ಮತ್ತೊಬ್ಬ ಪ್ರಯಾಣಿಕರು ತಮ್ಮ ನೋವನ್ನು ವಿವರಿಸಿದರು.

ಈ ವಾರ ಗ್ವಾಟೆಮಾಲಾಕ್ಕೆ ಅಮೆರಿಕ 265 ವಲಸಿಗರನ್ನು ವಾಪಸ್‌ ಕಳಿಸಿದೆ. ವಲಸಿಗರನ್ನು ಕಳುಹಿಸಲು ಟ್ರಂಪ್‌ ಸರ್ಕಾರ ಮಿಲಿಟರಿ ವಿಮಾನಗಳನ್ನು ಬಳಸುತ್ತಿದೆ.

ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಅಂಕಿಅಂಶಗಳ ಪ್ರಕಾರ, ಅಮೆರಿಕದಲ್ಲಿ ಅಂದಾಜು 1.1 ಕೋಟಿ ದಾಖಲೆರಹಿತ ವಲಸಿಗರು ಇದ್ದಾರೆ ಎನ್ನಲಾಗಿದೆ.

https://twitter.com/MarioNawfal/status/1883359205538861501

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...