ರಮಾಬಾಯಿ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು. ರಮಾಬಾಯಿ ಅಂಬೇಡ್ಕರ್ ಅವರು ತಮ್ಮ ಅನಾರೋಗ್ಯದ ನಿಮಿತ್ತ ಕರ್ನಾಟಕಕ್ಕೆ ಬಂದಿದ್ದು, ಧಾರವಾಡದ ಹಾಸ್ಟೆಲ್‌ನಲ್ಲಿ ನೆಲೆಸಿದ್ದರು. ಆ ಸಂದರ್ಭದಲ್ಲಿ ಯಾವುದೇ ಭೇದಭಾವವಿಲ್ಲದೆ ತನ್ನ ಬಂಗಾರದ ಬಳೆಗಳನ್ನು ಮಾರಿ ಹಸಿದ ಮಕ್ಕಳಿಗೆ ಅನ್ನ ಹಾಕಿದ ಭಾರತದ ಮಹಾನ್ ತ್ಯಾಗಮಯಿ ಎಂದು ನಾರಿಶಕ್ತಿ ಕರ್ನಾಟಕ ಮಹಿಳಾ ಸಂಘಟನೆಯ ಸಂಸ್ಥಾಪಕಿ ಅಶ್ವಿನಿ ಮದನಕರ್ ಸ್ಮರಿಸಿದರು.
ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದಲ್ಲಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ “ರಮಾಬಾಯಿ ಅಂಬೇಡ್ಕರ್ ಅರಿವಿನ ರಥಯಾತ್ರೆ” ಕಾರ್ಯಕ್ರಮದಲ್ಲಿ ಮಾತನಾಡಿದರು.
“ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗವನ್ನು ಸ್ಮರಿಸಬೇಕೆಂದರೆ ರಮಾಮಾಯಿಯವರನ್ನು ಜನಮಾನಸದಲ್ಲಿ ಪ್ರಚಾರಪಡಿಸಬೇಕು. ಜತೆಗೆ ರಮಾಬಾಯಿ ಅಂಬೇಡ್ಕರ್ ಅವರ ಸ್ಮರಣಾರ್ಥವಾಗಿ ಕರ್ನಾಟಕದಲ್ಲಿರುವ ಮಹಿಳಾ ಹಾಸ್ಟೆಲಗಳಿಗೆ ರಮಾಬಾಯಿ ಅಂಬೇಡ್ಕರ್ ಹೆಸರಿಡುವುದಕ್ಕಾಗಿ ನಾವು ಸರ್ಕಾರಕ್ಕೆ ಒತ್ತಾಯಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಮರ್ಯಾದೆಗೇಡು ಹತ್ಯೆ: ಮಗಳನ್ನೇ ಕೊಂದಿದ್ದ ನಾಲ್ವರು ಹಂತಕರಿಗೆ ಮರಣದಂಡನೆ
ರಮಾಬಾಯಿ ಅಂಬೇಡ್ಕರ್ ಅರಿವಿನ ರಥಯಾತ್ರೆ ಕಾರ್ಯಕ್ರಮಕ್ಕೆ ಖ್ಯಾತ ಉದ್ಯಮಿ ಮಲ್ಲಿಕಾರ್ಜುನ್ ಗಾಯಕವಾಡ್ ಚಾಲನೆ ನೀಡಿದರು.
ರಮಾಬಾಯಿ ಅಂಬೇಡ್ಕರ್ ರಥಯಾತ್ರೆಯಲ್ಲಿ ಅತಿಥಿಗಳಾಗಿ ಎಸ್‌ಸಿ/ಎಸ್‌ಟಿ ವಕೀಲರ ಸಂಘದ ಅಧ್ಯಕ್ಷ ಮಸ್ತಾನ್ ದಂಡೆ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರಾಗಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶರಣು ಅಂಬರಾಯ, ಚಿಂಚೋಳಿ ಈಶ್ವರ್ ಪ್ರಹ್ಲಾದ್ ಡಾಂಗೆ, ಸೈಯದ್ ಪಟೇಲ್, ಅಭಿಷೇಕ್ ಪೂಜಾರಿ ಹಾಗೂ ಸಮಸ್ತ ಗ್ರಾಮದ ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಹುಲ್ ಡಾಂಗೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.