ಅನ್ನ ದಾಸೋಹ, ಜ್ಞಾನ ದಾಸೋಹ, ಅಕ್ಷರ ದಾಸೋಹದ ಮೂಲಕ ಧಾರವಾಡ ಮುರುಘಾಮಠವು ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದು, ಇಡೀ ಕರ್ನಾಟಕದಲ್ಲಿ ದಾಸೋಹದ ಮೂಲಕ ಪ್ರಸಿದ್ಧಿ ಪಡೆದಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಮುರುಘಾಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಠಕ್ಕೆ ಭೇಟಿ ನೀಡಿದ ಅವರು ಮಾತನಾಡುತ್ತ, ಮಠದಲ್ಲಿ ಸಮಯಕ್ಕೆ ತಕ್ಕಂತೆ ಬದಲಾಗಬೇಕಿದ್ದ ಕೆಲವು ವ್ಯವಸ್ಥೆಗಳು ಬದಲಾಗಬೇಕಿದೆ. ಮಠದ ಮೂಲಕ ಇನ್ನೂ ದೊಡ್ಡ ಪ್ರಮಾಣದಲ್ಲಿ ಜ್ಞಾನಾರ್ಜನೆ ಮತ್ತು ದಾಸೋಹ ಕಾರ್ಯ ಮುಂದುವರೆಯಲಿ ಎಂಬುದು ಎಲ್ಲರ ಅಭಿಲಾಷೆಯಾಗಿದ್ದು, ಆ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಮಠವನ್ನು ಇನ್ನೂ ಉಚ್ಛ್ರಾಯ ಸ್ಥಿತಿಗೆ ತಲುಪಿಸುವಲ್ಲಿ ಮುಂದಾಗಬೇಕಿದೆ ಎಂದರು.
ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಮುರುಘಾಠಕ್ಕೆ ಒಂದು ಒಳ್ಳೆಯ ಇತಿಹಾಸವಿದೆ. ಈ ಇತಿಹಾಸವನ್ನು ಮುಂದುವರೆಸುವ ಕಾರ್ಯ ಹೆಚ್ಚಾಗಲಿ. ಇವತ್ತು ಬಹುತೇಕರು ದೇಶದ ಉನ್ನತ ಸ್ಥಾನದಲ್ಲಿ ಇದ್ದಾರೆಂದರೆ; ಅದು ಮುರುಘಾಮಠವೇ ಕಾರಣವಾಗಿದೆ. ನಾನು ಶ್ರೀಮಠಕ್ಕೆ ಬಂದರೆ ಸಾಮಾನ್ಯ ಭಕ್ತನಾಗಿ ಬರುತ್ತೇನೆಯೇ ಹೊರತು ರಾಜಕೀಯ ವ್ಯಕ್ತಿಯಾಗಿ ಬರುವುದಿಲ್ಲ ಎಂದು ಹೇಳಿದರು.
ಈ ವರದಿ ಓದಿದ್ದೀರಾ? ಧಾರವಾಡ | ಪಿಂಜಾರ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ: ಡಾ. ಟಿ ಟಿ ಬಸನಗೌಡರ
ಈ ಸಂದರ್ಭದಲ್ಲಿ ಪತ್ರಕರ್ತರನ್ನು ಸನ್ಮಾನಿಸಿದರು. ಹೊನವಾಡದ ಸಂಚಾರಿ ಶರಣ ಬಾಬು ಮಹಾರಾಜರು ಉಪನ್ಯಾಸ ನೀಡಿದರು. ನಿಡಸೋಸಿಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪಾವನಸಾನಿದ್ಯ ವಹಿಸಿದ್ದರು. ದುರುದಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಸಾನಿದಗಯ ವಹಿಸಿದ್ದರು. ದೊಡ್ಡಹುಣಸೆಮಠದ ಚನ್ನಬಸವ ಸ್ವಾಮೀಜಿ, ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ ಸಮ್ಮುಖದಲ್ಲಿದ್ದರು. ಗಡಹಿಂಗ್ಲಜ ಮಠದ ಮಹಾಂತ ಸಿದ್ದೇಶ್ವರ ಸ್ವಾಮೀಜಿ ಗುರುವಂದನೆ ಸ್ವೀಕರಿಸಿದರು. ಮಠದ ಭಕ್ತರು, ವಿದ್ಯಾರ್ಥಿಗಳು ಇದ್ದರು. ಪ್ರಾಚಾರ್ಯ ಎಮ್ ಎಸ್ ಗಾಣಿಗೇರ ನಿರೂಪಿಸಿದರು.