ಧಾರವಾಡ | ಪಿಂಜಾರ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ: ಡಾ. ಟಿ ಟಿ ಬಸನಗೌಡರ

Date:

ಪಿಂಜಾರ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಆ ಹಿನ್ನೆಲೆಯಲ್ಲಿ ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರ ಮುಂದಾಗಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ ಟಿ ಬಸನಗೌಡ್ರ ಹೇಳಿದರು.

- Advertisement -

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕವಾಗಿ ಅತ್ಯಂತ ಹಿಂದುಳಿದ ಪಿಂಜಾರ ಸಮುದಾಯದ ಕುರಿತು ಕುಲಶಾಸ್ತ್ರ ಅಧ್ಯಯನ ಮಾಡಲು ರಾಜ್ಯ ಸರ್ಕಾರವು ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ ಟಿ ಬಸನಗೌಡ್ರ ಅವರನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ವತಿಯಿಂದ ಧಾರವಾಡದ ನಿವೃತ್ತ ನೌಕರರ ಭವನದಲ್ಲಿ ಕ್ಯಾಲೆಂಡರ್ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಪಿ ಬಿ ನದಾಫ, ರುಬೀನಾ ನದಾಫ, ರಜೀಯಾ ಕೊಟಬಾಗಿ, ಗೀತಾ ಇನ್ನಿತರರನ್ನು ಸನ್ಮಾನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಈ ವೇಳೆ ಮಾತನಾಡಿದ ಅವರು, ಪಿಂಜಾರ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಡೆಯಬೇಕಾದರೆ ಜನಸಂಖ್ಯೆ ಮತ್ತು ವೃತ್ತಿಯ ಬಗ್ಗೆ ಅಧ್ಯಯನ ನಡೆಯುತ್ತದೆ. ಯಾವುದೇ ಜನಾಂಗವಿರಲಿ ಗುರುತಿಸುವಿಕೆ ಬಹಳ ಮುಖ್ಯವಾಗುತ್ತದೆ. ಜನಾಂಗದ ಮೂಲದ ಕುರಿತು ಅರ್ಥಾತ್ ವೃತ್ತಿ, ಆಚಾರ-ವಿಚಾರ, ಸಂಪ್ರದಾಯ ಇತ್ಯಾದಿ ಕುರಿತಾಗಿ ಸಂಶೋಧನಾತ್ಮಕವಾಗಿ ಹುಡುಕುವುದೇ ಮಾನವಶಾಸ್ತ್ರದ ಉದ್ದೇಶವಾಗಿದೆ. ಅಸಲಿಗೆ ಹೆಣ್ಣು-ಗಂಡು ಎರಡೇ ಜಾತಿಗಳು.‌ ಆದರೆ; ಸರ್ಕಾರ ಯೋಜನೆಗಳನ್ನು ರೂಪಿಸುವ ಮೂಲಕ ಹಿಂದುಳಿದ ಸಮುದಾಯಗಳನ್ನು ಹುಡುಕಿ ಸಮಾಜದ ಮುಖ್ಯ ವಾಹಿನಿಗೆ ತರುವ ಸಲುವಾಗಿ ಈ ರೀತಿಯ ಅಧ್ಯಯನ ನಡೆಸುತ್ತದೆ.

ಆ ಹಿನ್ನೆಲೆಯಲ್ಲಿ ಪಿಂಜಾರ/ನದಾಫ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ಸರ್ಕಾರ ನನ್ನನ್ನು ನೇಮಿಸಿದೆ. ಮಂಡ್ಯ, ಮಂಗಳೂರು ಭಾಗಗಳಲ್ಲಿ ಪಿಂಜಾರ ಕುಟುಂಬಗಳು ಬಹುತೇಕ ಸಿಗುವುದಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಪಿಂಜಾರರು ಹೆಚ್ಚಾಗಿ ಕಾಣಸಿಗುತ್ತಾರೆ. ಸಮುದಾಯದ ಬಗ್ಗೆ ಅಧ್ಯಯನ ಮಾಡುವವರು ಆ ಸಮುದಾಯದವರೇ ಅರ್ಥಾತ್ ಆ ಕುಟುಂಬದವರಲ್ಲಿ ಒಬ್ಬರಂತೆ ಅಧ್ಯಯನ‌ ನಡೆಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಂಶೋಧಕರು ಸಹಭಾಗಿತ್ವ ಅವಲೋಕನ ಮಾಡಬೇಕು. ಈ ರೀತಿಯಲ್ಲಿ ಅಧ್ಯಯನ ನಡೆಸಿದಾಗ ಸರ್ಕಾರಕ್ಕೆ ನೈಜ ಸ್ಥಿತಿ ತಲುಪುತ್ತದೆ ಎಂದರು.

ಪಿ ಬಿ ನದಾಫ್ ಮಾತನಾಡಿ, ಬಸವಣ್ಣ ಸಮಾಜದಲ್ಲಿ ಸಾಮರಸ್ಯವನ್ನು ಬಿತ್ತಿದ್ದಾರೆ. ಬಸವಣ್ಣನವರ ಹೆಸರಿನ ಬಸನಗೌಡರಿಂದ ಪಿಂಜಾರ್ ಕ್ರಾಂತಿಯಾಗಲಿ. ಒಂದು ಕಾಲದಲ್ಲಿ‌ ನಾವು ಪಿಂಜಾರ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದೆವು. ಉತ್ತರ ಕರ್ನಾಟಕದ ಭಾಗದಲ್ಲಿ‌ ನದಾಫ್ ಸಮುದಾಯದ ಸಾಂದ್ರತೆ ಇದೆ. ಇಲ್ಲಿಂದ ವಲಸೆ ಹೋದಂತ ಪಿಂಜಾರರು ಮಂಡ್ಯ, ಶ್ರೀರಂಗಪಟ್ಟಣ, ಬೆಂಗಳೂರು ಆಸುಪಾಸಿನಲ್ಲಿ ಕಾಣಸಿಗುತ್ತಾರೆ. ಅವರಿಗೆ ಪಿಂಜಾರ ಜಾತಿ ಪ್ರಮಾಣಪತ್ರ ಇನ್ನೂ ಸಿಗುತ್ತಿಲ್ಲ. ಪಿಂಜಾರ್ ಸಮುದಾಯವು ರೈತರೊಂದಿಗೆ ಅತ್ಯಂತ ಬಾಂದ್ಯವ ಬೆಸೆದುಕೊಂಡಿದೆ. ಪಿಂಜಾರರು ಸಮಾಜದಲ್ಲಿ ಸಾಮರಸ್ಯದಿಂದ ಬದುಕುತ್ತ ಬಂದಿದ್ದಾರೆ ಎಂದರು.

ಸಂಘದ ಮಾಜಿ ರಾಜ್ಯಾಧ್ಯಕ್ಷ ಹಜರತ್ಅಲಿ ದೊಡಮನಿ ಮಾತನಾಡಿ, ಪಿಂಜಾರ ಕುಲಶಾಸ್ತ್ರ ಅಧ್ಯಯನಕ್ಕೆ ಸರ್ಕಾರವು ಕೇವಲ 45ಲಕ್ಷ ರೂ ನೀಡಿದರೆ ಸಾಲದು. ಇಡೀ ರಾಜ್ಯಾದ್ಯಂತ ಅಧ್ಯಯನ ನಡೆಸಬೇಕಾದರೆ 1 ಕೋಟಿ ರೂ. ನೀಡಿ ಪಿಂಜಾರ ಕುಲಶಾಸ್ತ್ರ ಅಧ್ಯಯನಕ್ಕೆ ಸಿದ್ದರಾಮಯ್ಯ ಸರ್ಕಾರ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

ಸಮಾಜ ಸೇವಕಿ ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತೆ ರಜಿಯಾಬೇಗಂ ಕೊಟಬಾಗಿ ಮಾತನಾಡಿ, ದೇವಸ್ಥಾನಕ್ಕೂ ಹೋಗುತ್ತೇವೆ. ಪಿಂಜಾರಾದ ನಾವು ನಮಾಜ್ ಅನ್ನೂ ಮಾಡುತ್ತೇವೆ. ಸಮಾಜದಲ್ಲಿ ಪಿಂಜಾರರು ಯಾರೊಂದಿಗೂ ಧ್ವೇಷ ಕಟ್ಟಿಕೊಳ್ಳದೆ ಸಾಮರಸ್ಯದಿಂದಲೇ ಬದುಕುತ್ತ ಬಂದಿದ್ದಾರೆ.‌ ಮುಂದುವರೆದು ಜಿಲ್ಲೆಗೆ ಒಂದಾದರೂ ಶಾದಿ ಮಹಲ್ ಆಗಬೇಕು ಮತ್ತು ಪಿಂಜಾರ್ ಸಮಾಜದಲ್ಲಿ ನಿರ್ಗತಿಕ ಹೆಣ್ಣು ಮಕ್ಕಳ ಸಂಖ್ಯೆ ಹೇರಳವಾಗಿದೆ ಈ ಕುರಿತು ಸರ್ಕಾರವು ಗಮನಹರಿಸಬೇಕು ಎಂದರು.

ಈ ವರದಿ ಓದಿದ್ದೀರಾ? ಧಾರವಾಡ | ಕನ್ನಡ ಮಾತನಾಡುವುದು ಮನೆಯಿಂದಲೇ ಪ್ರಾರಂಭವಾಗಲಿ: ಸತೀಶ್ ತುರಮರಿ

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಪ್ ಎಮ್ ನದಾಫ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಎ ಎಚ್ ನದಾಫ, ಹನೀಫ ನದಾಫ, ಗೌಸುಸಾಬ ನದಾಫ, ಪಿಂಜಾರ ಸಮುದಾಯದ ಪದಾಧಿಕಾರಿಗಳು, ಮಹಿಳೆಯರು, ಹಿರಿಯರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ನೂರಜಾನ ನದಾಫ ಕುರಹಾನ ಪಠಣ ಮಾಡಿದರು. ಆರ್ ಕೆ ಪಿಂಜಾರ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...