ಮೈಸೂರು | ಅಜ್ಜಿಯನ್ನು ಕೊಂದು ‘ಮಿಸ್ಸಿಂಗ್‌ ಕಂಪ್ಲೇಂಟ್‌’ ನೀಡಿದ ಮೊಮ್ಮಗ; ತನಿಖೆ ಬಳಿಕ ಸತ್ಯ ಬಯಲು

Date:

Advertisements

ಕೆಆರ್‌ಎಸ್ ಹಿನ್ನಿರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಸಿಕ್ಕಿದ ಪ್ರಕರಣವನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ. ಸ್ವಂತ ಅಜ್ಜಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನ (75) ಮೃತ ವೃದ್ಧೆ. ಸುಪ್ರೀತ್ (23) ಎಂಬಾತ ತನ್ನ ಅಜ್ಜಿಯನ್ನು ಹತ್ಯೆ ಮಾಡಿದ್ದಾನೆ. ಮೈಸೂರು ತಾಲೂಕಿನ ಸಾಗರಕಟ್ಟೆ ಗ್ರಾಮದ ಬಳಿ ಮೇ 30ರಂದು ಶವ ಪತ್ತೆಯಾಗುವ ಮೂಲಕ ಘಟನೆ ತನಿಖೆಗೆ ಚಾಲನೆ ನೀಡಲಾಗಿತ್ತು. ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು.

ಮೃತ ದೇಹದ ತಲೆ ಕೂದಲು ಹಾಗೂ ಕನ್ನಡಕದಿಂದ ಮೈಸೂರು ದಕ್ಷಿಣ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕಂಪ್ಲೇಂಟ್ ಜೊತೆಗೆ ಸಾಮ್ಯತೆ ಕಂಡುಬಂದಿತ್ತು. ಹತ್ಯೆ ಮಾಡಿದ ಮೊಮ್ಮಗನೇ ಮಿಸ್ಸಿಂಗ್‌ ಕಂಪ್ಲೇಂಟ್‌ ಕೂಡ ನೀಡಿದ್ದ. ಆತನನ್ನು ವಿವರವಾದ ತನಿಖೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.

Advertisements

ಘಟನೆ ಹಿನ್ನೆಲೆ

ಅಜ್ಜಿ ಬೈಯುತ್ತಿದ್ದರು, ಹಾಗಾಗಿ ಕೊಲೆ ಮಾಡಿದೆ ಎಂದು ಆರೋಪಿ ಸುಪ್ರೀತ್ ಹೇಳಿದ್ದಾನೆ. ಮೇ 28ರಂದು ಮನೆಯಲ್ಲಿ ಮಾತಿಗೆ ಮಾತು ಬೆಳೆದು, ಬೈದ ಅಜ್ಜಿ ಸುಲೋಚನ ಅವರನ್ನು ಸುಪ್ರೀತ್‌ ತಳ್ಳಿದ್ದಾನೆ. ಹೊಡೆದು ಬೀಳಿಸಿದ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ರಟ್ಟಿನ ಬಾಕ್ಸ್‌ನಲ್ಲಿ ಹಾಕಿದ್ದ. ಶವವನ್ನು ಏನು ಮಾಡುವುದು ಎಂಬುದಕ್ಕೆ ಕೊರಿಯನ್ ವೆಬ್ ಸೀರಿಸ್ ನೋಡಿ ಪ್ರೇರಣೆ ಪಡೆದಿದ್ದಾನೆ. ಹೆಣ ಸುಟ್ಟು ಬಚಾವಾಗಲು ಯತ್ನಿಸಿದ್ದಾನೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತನ ಜತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಪ್ರಿಯಕರ

ಕಾರಿನಲ್ಲಿ ಕೆಆರ್‌ಎಸ್ ಹಿನ್ನೀರು ಪ್ರದೇಶಕ್ಕೆ ಶವ ಕೊಂಡೊಯ್ದು ಗುಂಡಿಯಲ್ಲಿ ಹಾಕಿ ಶವವನ್ನು ಸುಟ್ಟು ಹಾಕಿದ್ದಾನೆ. ಅದಕ್ಕೂ ಮುನ್ನ ಹೆಣವನ್ನು ಪ್ಯಾಕ್ ಮಾಡಿ ಕಾರಿನಲ್ಲಿಟ್ಟುಕೊಂಡು ದಿನವಿಡೀ ಓಡಾಡಿದ್ದು, ಹಾಗೇ ಪೊಲೀಸ್‌ ಠಾಣೆಗೂ ಹೋಗಿ ಕಂಪ್ಲೇಂಟ್‌ ನೀಡಿದ್ದಾನೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X