ಅಕ್ರಮ ಭೂ ಕಬಳಿಕೆ ಮತ್ತು ಸರಕಾರಿ ಜಮೀನಲ್ಲಿ ಗಣಪು ಶೆಡ್ತಿ ಮತ್ತು ಮಂಜುಳ ಶೆಟ್ಟಿಯವರು ಅಶೋಕ ಶೆಟ್ಟಿ ಎಂಬ ಪಂಚಾಯತ್ ಸದಸ್ಯ ಪ್ರಚೋದನೆ ಮೇರೆಗೆ ಸರಕಾರಿ ಜಮೀನಲ್ಲಿ ಮನೆ ನಿರ್ಮಾಣದ ವಿರುದ್ದ ದಲಿತ ಹೋರಾಟಗಾರ್ತಿ ನಾಗರತ್ನ ಕಾನೂನಾತ್ಮಕವಾಗಿ ಹೋರಾಟ ನಡೆಸಿದ್ದೆ ಮುಳುವಾಯಿತೇ? ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕರು, ಸ್ಥಳ ಪರಿಶೀಲನೆ ಮಾಡಿ ವರದಿಯಾನುಸಾರ ತಹಸೀಲ್ದಾರ್ ರವರು ಜಂಟಿ ಸರ್ವೇಗೆ ಆದೇಶ ನೀಡಿ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು, ಒಂದು ವೇಳೆ ಅದೇಶ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈ ಗೊಳ್ಳುತ್ತೇವೆ ಎಂದು ಆದೇಶ ಮಾಡಿದರು ಕ್ಯಾರೇ ಮಾಡದೇ ಮನೆ ನಿರ್ಮಾಣ ಮಾಡಿದ್ದು, ತದನಂತರ ಮತ್ತೆ ಹೋರಾಟಗಾರ್ತಿ ದೂರು ನೀಡಿದ ನಂತರ, ತಹಸೀಲ್ದಾರ್ ರವರು ಜಂಟಿ ಸರ್ವೇ ನಡೆಸಲು ಅದೇಶ ಮಾಡಿದ್ದರು. ಸರ್ವೇ ಅಲ್ಲಿ ಸರಕಾರಿ ಜಾಗ ಎಂದು ದೃಢಪಟ್ಟಿದ್ದು ಅಶೋಕ್ ಮತ್ತು ಪಟಾಲಂಗೆ ಹಿನ್ನಡೆಯಾಗಿದ್ದು ಮುಂದೆ ಸರಕಾರ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎನ್ನುವುದನ್ನು ಅರಿತು ನಾಗರತ್ನ ವಿರುದ್ದ ಪೂರ್ವ ನಿಯೋಜಿತ ಷಡಯಂತ್ರ ರೂಪಿಸಿತ್ತೆ?
ಪ್ರಕರಣದ ಸಾರಾಂಶ : ದಿನಾಂಕ 03/02/2025 ರಂದು ತನ್ನ ಮಗನ ಸರಕಾರದಿಂದ ಸಿಗುವ ಸೌಲಭ್ಯಕ್ಕಾಗಿ ಮನೆಯಿಂದ ವಂಡ್ಸೆಗೆ ಹೋಗಲು ನಡೆದುಕೊಂಡು ಬರುವಾಗ, ಸರಿಸುಮಾರು ಬೆಳಿಗ್ಗೆ 9:30 ಗಂಟೆಗೆ ಕುಂದಾಪುರ ತಾಲೂಕು ಹೊಸೂರು ಗ್ರಾಮದ ಮರ್ಡಿ ಹೆಂಚಿನಮನೆ ಎಂಬಲ್ಲಿಯ ಮಂಜುಳ ಎಂಬುವವರ ಮನೆಯ ಬಳಿ ದಾರಿಯಲ್ಲಿ ಹೋಗುವ ಸಮಯ ಆಪಾದಿತರಾದ ಮಂಜುಳ ಹಾಗೂ ಚಂದ್ರ ಶೇಖರ ಎಂಬುವವರು ಪಿರ್ಯಾದಿದಾರರ ಬಳಿಗೆ ಬಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ,ಆಪಾದಿತೆ ಮಂಜುಳಾ ಮತ್ತು ಚಂದ್ರ ಶೇಖರ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದು ಈ ಘಟನೆ ಸಮಯ ಸ್ಥಳದಲ್ಲಿದ್ದ ಆಪಾದಿತ ಸುಬ್ಬಣ್ಣ ಪ್ರಚೋದನೆ ಮಾಡಿರುತ್ತಾನೆ. ಆಪಾದಿತ ಅಶೋಕ ಪೋನ್ ಮಾಡಿ ಹೆದರಿಸಿದ್ದು, ಅಶೋಕ ಎಂಬಾತನ ಪ್ರಚೋದನೆಯಿಂದ ಆಪಾದಿತರು ಈ ಕೃತ್ಯ ಏಸಗಿರುತ್ತಾರೆ. ಪಿರ್ಯಾದಿದಾರರು ಈ ಘಟನೆಯಿಂದ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎನ್ನಲಾಗಿದೆ.
ಈ ಪ್ರಕರಣ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2025 ಕಲಂ: 3 (1) , (r), (s), 3(2), (v-a) SCc/ST act 2015, 115 (2), 352, 351 (2), 54, 49, R/w 3 (5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
