ಉಡುಪಿ | ದಲಿತಪರ ಹೋರಾಟಗಾರ್ತಿ ಮೇಲೆ ಹಲ್ಲೆ! ಪ್ರಕರಣ ದಾಖಲು

Date:

ಅಕ್ರಮ ಭೂ ಕಬಳಿಕೆ ಮತ್ತು ಸರಕಾರಿ ಜಮೀನಲ್ಲಿ ಗಣಪು ಶೆಡ್ತಿ ಮತ್ತು ಮಂಜುಳ ಶೆಟ್ಟಿಯವರು ಅಶೋಕ ಶೆಟ್ಟಿ ಎಂಬ ಪಂಚಾಯತ್ ಸದಸ್ಯ ಪ್ರಚೋದನೆ ಮೇರೆಗೆ ಸರಕಾರಿ ಜಮೀನಲ್ಲಿ ಮನೆ ನಿರ್ಮಾಣದ ವಿರುದ್ದ ದಲಿತ ಹೋರಾಟಗಾರ್ತಿ ನಾಗರತ್ನ ಕಾನೂನಾತ್ಮಕವಾಗಿ ಹೋರಾಟ ನಡೆಸಿದ್ದೆ ಮುಳುವಾಯಿತೇ? ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀಕ್ಷಕರು, ಸ್ಥಳ ಪರಿಶೀಲನೆ ಮಾಡಿ ವರದಿಯಾನುಸಾರ ತಹಸೀಲ್ದಾರ್ ರವರು ಜಂಟಿ ಸರ್ವೇಗೆ ಆದೇಶ ನೀಡಿ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು, ಒಂದು ವೇಳೆ ಅದೇಶ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈ ಗೊಳ್ಳುತ್ತೇವೆ ಎಂದು ಆದೇಶ ಮಾಡಿದರು ಕ್ಯಾರೇ ಮಾಡದೇ ಮನೆ ನಿರ್ಮಾಣ ಮಾಡಿದ್ದು, ತದನಂತರ ಮತ್ತೆ ಹೋರಾಟಗಾರ್ತಿ ದೂರು ನೀಡಿದ ನಂತರ, ತಹಸೀಲ್ದಾರ್ ರವರು ಜಂಟಿ ಸರ್ವೇ ನಡೆಸಲು ಅದೇಶ ಮಾಡಿದ್ದರು. ಸರ್ವೇ ಅಲ್ಲಿ ಸರಕಾರಿ ಜಾಗ ಎಂದು ದೃಢಪಟ್ಟಿದ್ದು ಅಶೋಕ್ ಮತ್ತು ಪಟಾಲಂಗೆ ಹಿನ್ನಡೆಯಾಗಿದ್ದು ಮುಂದೆ ಸರಕಾರ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎನ್ನುವುದನ್ನು ಅರಿತು ನಾಗರತ್ನ ವಿರುದ್ದ ಪೂರ್ವ ನಿಯೋಜಿತ ಷಡಯಂತ್ರ ರೂಪಿಸಿತ್ತೆ?

- Advertisement -

ಪ್ರಕರಣದ ಸಾರಾಂಶ : ದಿನಾಂಕ 03/02/2025 ರಂದು ತನ್ನ ಮಗನ ಸರಕಾರದಿಂದ ಸಿಗುವ ಸೌಲಭ್ಯಕ್ಕಾಗಿ ಮನೆಯಿಂದ ವಂಡ್ಸೆಗೆ ಹೋಗಲು ನಡೆದುಕೊಂಡು ಬರುವಾಗ, ಸರಿಸುಮಾರು ಬೆಳಿಗ್ಗೆ 9:30 ಗಂಟೆಗೆ ಕುಂದಾಪುರ ತಾಲೂಕು ಹೊಸೂರು ಗ್ರಾಮದ ಮರ್ಡಿ ಹೆಂಚಿನಮನೆ ಎಂಬಲ್ಲಿಯ ಮಂಜುಳ ಎಂಬುವವರ ಮನೆಯ ಬಳಿ ದಾರಿಯಲ್ಲಿ ಹೋಗುವ ಸಮಯ ಆಪಾದಿತರಾದ ಮಂಜುಳ ಹಾಗೂ ಚಂದ್ರ ಶೇಖರ ಎಂಬುವವರು ಪಿರ್ಯಾದಿದಾರರ ಬಳಿಗೆ ಬಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ,ಆಪಾದಿತೆ ಮಂಜುಳಾ ಮತ್ತು ಚಂದ್ರ ಶೇಖರ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ್ದು ಈ ಘಟನೆ ಸಮಯ ಸ್ಥಳದಲ್ಲಿದ್ದ ಆಪಾದಿತ ಸುಬ್ಬಣ್ಣ ಪ್ರಚೋದನೆ ಮಾಡಿರುತ್ತಾನೆ. ಆಪಾದಿತ ಅಶೋಕ ಪೋನ್‌ ಮಾಡಿ ಹೆದರಿಸಿದ್ದು, ಅಶೋಕ ಎಂಬಾತನ ಪ್ರಚೋದನೆಯಿಂದ ಆಪಾದಿತರು ಈ ಕೃತ್ಯ ಏಸಗಿರುತ್ತಾರೆ. ಪಿರ್ಯಾದಿದಾರರು ಈ ಘಟನೆಯಿಂದ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಈ ಪ್ರಕರಣ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2025 ಕಲಂ: 3 (1) , (r), (s), 3(2), (v-a) SCc/ST act 2015, 115 (2), 352, 351 (2), 54, 49, R/w 3 (5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎಸ್‌ಐಆರ್ ವಿರೋಧಿಸಿ ಧರಣಿ; ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಿಲ್ಲಿಸುವುದು, ಪಟ್ಟಿಯಿಂದ...

ಗದಗ | ಸಾರಿಗೆ ಬಸ್ ಟಾಯರ್ ಸ್ಪೋಟ ಪರಿಣಾಮ ಕಂಡಕ್ಟರ್ ಕಾಲಿಗೆ ಗಾಯ

ಲಕ್ಷ್ಮೇಶ್ವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ (ಸಂಖ್ಯೆ:...

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...