ಶಾಲಾ-ಕಾಲೇಜುಗಳಲ್ಲಿ ರ‍್ಯಾಗಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಅಲ್ಲಲ್ಲಿ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಹೆಸರಿನಲ್ಲಿ ಕಿರಿಯರ ಮೇಲೆ ದೌರ್ಜನ್ಯ ಎಸಗುವ ಘಟನೆಗಳು ವರದಿಯಾಗುತ್ತಲೇ ಇವೆ. ಅಂಥದ್ದೇ ಘಟನೆಯೊಂದರಲ್ಲಿ, ಕಿರಿಯ ವಿದ್ಯಾರ್ಥಿಯೊಬ್ಬನಿಗೆ ಹಿರಿಯ ವಿದ್ಯಾರ್ಥಿಗಳು ಬೆದರಿಕೆ ಹಾಕುತ್ತಿರುವ ಮತ್ತು ಬೆಲ್ಟ್‌ನಿಂದ ಥಳಿಸಿ, ಹಲ್ಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ.
ಗುಜರಾತ್‌ನ ಸೂರತ್‌ನಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಕಾಲೇಜು ವಿದ್ಯಾರ್ಥಿಯೊಬ್ಬ ಕಿರಿಯ ವಿದ್ಯಾರ್ಥಿಯನ್ನು ಬೆಲ್ಟ್‌ನಿಂದ ಥಳಿಸುತ್ತಿರುವುದು. ಕೆಲ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಯನ್ನು ಸುತ್ತುವರೆದಿದ್ದು, ಮೌನವಾಗಿ ನೋಡುತ್ತಿರುವುದು ಕಂಡುಬಂದಿದೆ.
This clip is from NIT Surat, CSE department. This psychopath with glasses bullies juniors and beats them up after hitting the gym – r/JEENEETards pic.twitter.com/oQQIdugtFj
— Tejuuu (@tejuuuop) February 4, 2025
ನಿಖರವಾಗಿ ಘಟನೆಯ ಯಾವಾಗ ನಡೆಯಿತು, ಅವರು ಯಾವ ಕಾಲೇಜಿನ ವಿದ್ಯಾರ್ಥಿಗಳು ಎಂಬುದು ಗೊತ್ತಾಗಿಲ್ಲ.
“ಇದು ಬೆದರಿಸುವಿಕೆ ಅಲ್ಲ. ಇದು ಅಹಂಕಾರವನ್ನು ಸೂಚಿಸುತ್ತದೆ. ಥಳಿತಕ್ಕೊಳಗಾದ ವಿದ್ಯಾರ್ಥಿ ತನ್ನ ಮೇಲಿನ ದಾಳಿಯನ್ನು ಸಮ್ಯಮದಿಂದ ವಿರೋಧಿಸಿದ್ದಾನೆ. ಆತನ ತಾಳ್ಮೆ ಮತ್ತು ಪ್ರತಿರೋಧವನ್ನು ಶ್ಲಾಘಿಸಬೇಕು. ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕ್ರಮ ಜರುಗಿಸಬೇಕು” ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.