ಕಲಬುರಗಿ | ಪಿಯು ವಿದ್ಯಾರ್ಥಿಗಳ ತಾಲೂಕು ರಸಪ್ರಶ್ನೆ ಸ್ಪರ್ಧೆ ಸಾಧನೆಗೆ ಸತತ ಅಧ್ಯಯನ ಅಗತ್ಯ: ಡಾ. ಅಜೀಜ್

Date:

Advertisements

ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ, ಪ್ರಗತಿ ಸಾಧಿಸಲು ಹಾಗೂ ರಸಪ್ರಶ್ನೆ ಸ್ಪರ್ಧೆ ಸಾಧನೆಗೆ ಮುಖ್ಯವಾಗಿ ಸತತ ಅಧ್ಯಯನ ಹಾಗೂ ಕಲಿಕೆಯಲ್ಲಿ ಶ್ರದ್ಧೆಯು ಅಗತ್ಯವಾಗಿದೆ ಎಂದು ವಿ ಕೆ ಸಲಗರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಡಾ. ಅಜೀಜ್‌ ಹಿತ್ತಲ ಶಿರೂರು ಅಭಿಪ್ರಾಯವಟ್ಟರು.

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ತಾಲೂಕು ಮಟ್ಟದ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪಿಯು ಶಿಕ್ಷಣ ಹಂತವು ವಿದ್ಯಾರ್ಥಿಗಳ ಬದುಕಿನ ದಿಕ್ಸೂಚಿಯಾಗಿದೆ. ವಿಶೇಷವಾಗಿ ವೃತ್ತಿಪರ ಕೋರ್ಸ್‌ಗಳ ಅವಕಾಶ ಪಡೆಯಲು ಹಾಗೂ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಲು ಕಠಿಣ ಪರಿಶ್ರಮ ಅವಶ್ಯಕವಾಗಿದೆ. ಮೊಬೈಲ್, ವಾಟ್ಸ್ಯಾಪ್‌, ಹರಟೆಯಲ್ಲಿ ಕಾಲ್ ಕಳೆಯುತ್ತ, ನಿರ್ಲಕ್ಷ್ಯ ತಾಳಿದರೆ ಮುಂದಿನ ಜೀವನ ಕಟ್ಟಿಕೊಳ್ಳಲು ಕಷ್ಟವಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ಪಿಯು ದ್ವಿತೀಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಗೊಳಿಸಲು ಈ ರಸಪ್ರಶ್ನೆ ಪೂರಕವಾಗಲಿದೆ. ವಿದ್ಯಾರ್ಥಿಗಳು ತಮ್ಮ ಹೊಣೆಗಾರಿಕೆ ಅರ್ಥ ಮಾಡಿಕೊಂಡಾಗ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ” ಎಂದರು.

Advertisements

ಪ್ರಾಂಶುಪಾಲ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿಕೊಂಡಿದರು. ಪಿಯು ಕಾಲೇಜಿನ ಪ್ರಾಚಾರ್ಯರಾದ ನಾಗಣ್ಣ ಸಲಗರೆ, ರಮೇಶ ಕುಲಕರ್ಣಿ, ಶಿವಕುಮಾರ ದಾನಾಯಿ, ಭೀಮಾಶಂಕರ ಉಮದಿ, ಶಿವಲಿಂಗಪ್ಪ ಸುತಾರ, ಉಪನ್ಯಾಸಕರಾದ ಸೈಫಾನ್ ತಾಂಬೋಳೆ, ಶರಣಮ್ಮ ಜಿ ಕವಿತಾ, ಶಿವರಾಜ ಚೌಲ, ಸಿದ್ಧರಾಮ ಸನಗುಂದಿ, ಸಂತೋಷ ವೇದವಾಠಕ, ರಾಜಶೇಖರ ಪಾಟೀಲ, ಆಕಾಶ ಕಾಂಬಳೆ, ಎಲ್ ಎಸ್ ಬೀದಿ, ಶರಣಬಸಪ್ಪ ಇಟಗಿ, ಲಕ್ಷ್ಮಣ ಕೋಳಿ, ಅಂಬಾರಾಯ ಶಿಲ್ಡ, ವಿಠಲ ಪೋದಾರ, ಸತೀಶ ಮುಲಗೆ, ಮೃತ್ಯುಂಜಯ ಪಾಟೀಲ, ಮಲ್ಲಿನಾಥ ಪಾಟೀಲ, ಪ್ರಮೋದ ಚಿಂಚನಸೂರು, ನಿಜಾಮೊದ್ದಿನ್ ಇದ್ದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ| ಬಾಬಾಸಾಹೇಬ್ ಅಂಬೇಡ್ಕರ್ ದಾರಿಯಲ್ಲಿ ನಾವೆಲ್ಲರೂ ನಡೆಯೊಣ: ರಮೇಶ ಮಾಡಿಯಾಳಕರ

ವಿಜ್ಞಾನ ವಿಭಾಗದಲ್ಲಿ ಆಳಂದ ವಿವೇಕ ವರ್ದನಿ ಪಿಯು ಕಾಲೇಜು(ಪ್ರಥಮ), ಆಳಂದ ಆರ್ ಎಂ ಎಲ್ ಪಿಯು ಕಾಲೇಜು(ದ್ವಿತೀಯ), ವಿವೇಕ ವರ್ದನಿ ಪಿಯು ಕಾಲೇಜು(ತೃತೀಯ) ಸ್ಥಾನ ಪಡೆದರು. ಕಲಾವಿಭಾಗದಲ್ಲಿ ಆಳಂದದ ಆರ್ ಎಂ ಎಲ್ ಕಾಲೇಜು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಹಾಗೂ ಸರ್ಕಾರಿ ಸರಸಂಬಾ ಪಿಯು ಕಾಲೇಜು ತೃತೀಯ ಸ್ಥಾನ ಪಡೆದರು.

ತಾಲೂಕಿನ ಕಮಲಾನಗರ, ಯಳಸಂಗಿ, ಮಾದನ ಹಿಪ್ಪರಗಿ, ಲಾಡ ಚಿಂಚೋಳಿ ಆಳಂದ ಪಟ್ಟಣದ ಒಟ್ಟು 33ಕಾಲೇಜು
ವಿದ್ಯಾರ್ಥಿಗಳ ತಂಡಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಹಾಗೂ ಬಹುಮಾನ ವಿತರಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X