ಬೀದರ್‌ | ಬೀದಿಗೊಂದು ಪುಸ್ತಕದ ಅಂಗಡಿ ತೆರೆಯಬೇಕು : ವೀರಕಪುತ್ರ ಶ್ರೀನಿವಾಸ

Date:

Advertisements

ಯುವಕರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕಿದ್ದು, ಹೊಟೇಲ್‌, ಬಟ್ಟೆ ಅಂಗಡಿ ಪ್ರತಿ ಬೀದಿಯಲ್ಲಿ ಇರುವಂತೆ ಪುಸ್ತಕದ ಅಂಗಡಿಗಳನ್ನೂ ತೆರೆಯಬೇಕಾದ ಅವಶ್ಯಕತೆ ಇದೆ ಎಂದು ವೀರಲೋಕ ಬುಕ್ಸ್ ಬೆಂಗಳೂರಿನ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅಭಿಪ್ರಾಯಪಟ್ಟರು.

ಬೀದರ್ ನಗರದಲ್ಲಿ ವೀರಲೋಕ ಬುಕ್ಸ್ ಬೆಂಗಳೂರು ಮತ್ತು ಅತಿವಾಳೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ‘ದೇಸಿ ಜಗಲಿ ಕಥಾಕಮ್ಮಟ’ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

“ಹಳ್ಳಿಗಳಲ್ಲೂ ಕುವೆಂಪು, ಬೇಂದ್ರೆ ಅವರಂತಹ ಕಥೆಕಾಗಾರರು ಸಿಗಬಹುದು ಎಂಬ ನಿಟ್ಟಿನಲ್ಲಿ ಹಲವು ಜಿಲ್ಲೆಗಳಲ್ಲಿ ಕಥಾ ಕಮ್ಮಟ ಏರ್ಪಡಿಸಿ, ಕಥೆ ಕಾದಂಬರಿಕಾರರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಈವರೆಗೆ ಒಂದು ವರ್ಷದಲ್ಲಿ 44 ಕೃತಿಗಳನ್ನು ಪ್ರಕಟಣೆ ಮಾಡಿದ್ದೇವೆ. ಕಥಾಕಾರರಿಗೆ ವೀರಲೋಕ ಸೇತುವೆಯಾಗಿ ಕಾರ್ಯ ಮಾಡಲಿದೆ. ಆದ್ದರಿಂದ ಜಿಲ್ಲೆಯಲ್ಲಿನ ಕಥಾಕಾರರು ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕು” ಎಂದು ನುಡಿದರು.

Advertisements

“ವಿದೇಶದಲ್ಲಿ ಒಬ್ಬ ಕವಿ ತನ್ನ ಸಾಹಿತ್ಯ ಬರೆಯಲು ಆರಂಭಿಸಿದರೆ ಆ ಕೃತಿ ಖರೀದಿಸಲು ಆರು ತಿಂಗಳು ಮೊದಲೇ ಬುಕಿಂಗ್ ಆರಂಭವಾಗುತ್ತವೆ. ಆದರೆ, ನಮ್ಮಲ್ಲಿ ಕೃತಿ ರಚಿಸಿ, ಮನೆಯಲ್ಲಿಟ್ಟು, ಕೈಯಲ್ಲಿ ಹಿಡಿದುಕೊಂಡು ಓಡಾಡಿದರೂ ಯಾರೂ ಖರೀದಿಸುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಥೆಗಾರ ಬಾಳಾಸಾಹೇಬ ಲೋಕಾಪುರ ಮಾತನಾಡಿ, “ಕಥೆ ಎಂದರೆ ವ್ಯಕ್ತಿಯ ಸಂವೇದನೆ. ತನ್ನ ವೈಯಕ್ತಿಕ ವೇದನೆಗಳೇ ಕಥೆಯಾಗಿ ಮಾರ್ಪಡುತ್ತವೆ. ನಮ್ಮ ವೇದನೆ ಕೇಳಿ ಜನರ ಕಣ್ಣಲ್ಲಿ ನೀರು ಬಂದರೆ ಅದೇ ಕಥೆ. ಜನರ ಹೃದಯಕ್ಕೆ ಮುಟ್ಟಿದರೆ ಅದೇ ಕಥೆ. ಅಂತಹ ಗಟ್ಟಿ ಸಾಹಿತ್ಯದ ಕಥೆಗಳನ್ನು ರಚಿಸಬೇಕು” ಎಂದು ಸಲಹೆ ನೀಡಿದರು.

ಅತಿವಾಳೆ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, “ಬೀದರ್ ಜಿಲ್ಲೆಯ ಉದಯೋನ್ಮುಖ ಕಥೆಗಾರರಿಗೆ ಇನ್ನೂ ಹೆಚ್ಚಿನ ಸಹಕಾರವಾಗಲೆಂದು ಈ ಕಥಾಕಮ್ಮಟ ಏರ್ಪಡಿಸಲಾಗಿದೆ. ಆಸಕ್ತರು ಎರಡು ದಿನಗಳ ಕಾಲ ನಡೆಯುವ ಈ ದೇಸಿ ಜಗಲಿ ಕಥಾಕಮ್ಮಟದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯನಗರ | ಕಾರ್ಮಿಕರಿಗೆ ಭೂಮಿ ನೀಡುವಂತೆ ಗ್ರಾಕೂಸ ಆಗ್ರಹ

ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗುರುನಾಥ ರಾಜಗಿರಾ ಮಾತನಾಡಿ, “ಕಥೆ ಹೇಗಿರಬೇಕು? ಹೇಗೆ ರಚಿಸಬೇಕು ಎಂಬುದನ್ನು ತಿಳಿಸುವುದೇ ಈ ಕಥಾಕಮ್ಮಟದ ಉದ್ದೇಶ. ವೀರಲೋಕ ಬುಕ್ಸ್ ಅಧ್ಯಕ್ಷ ಶ್ರೀನಿವಾಸ ಅವರು ಕೋಟ್ಯಧಿಪತಿ ಆದರೂ ಪುಸ್ತಕ ಸಂಸ್ಕೃತಿ ಬೆಳೆಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಸಾಹಿತ್ಯ ಮಾನವೀಯ ಪಂಥದ ಆಧಾರದ ಮೇಲೆ ರಚನೆಯಾಗಬೇಕು” ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಕಥೆಗಾರರಾದ ಗುರುನಾಥ ಅಕ್ಕಣ್ಣ, ಶಿವಕುಮಾರ ನಾಗವಾರ, ಸಾಹಿತಿಗಳಾದ ರಜಿಯಾ ಬಳಬಟ್ಟಿ, ಡಾ. ರಾಮಚಂದ್ರ ಗಣಾಪುರ, ಅವಿನಾಶ ಸೋನೆ, ಲಕ್ಷ್ಮಿ ಮೇತ್ರೆ ಹಾಗೂ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X