ಕಲಬುರಗಿಯ ವಿಪಾಸನ ಪ್ರಚಾರ ಸಮಿತಿ ವತಿಯಿಂದ 5 ರಿಂದ 9ನೇ ತರಗತಿಯ ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ ಕಾರ್ಯಕ್ರಮವನ್ನು ನಗರದ ಸೆಂಟ್ ಮೇರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಸುಮಾರು 200 ವಿದ್ಯಾರ್ಥಿಗಳು ಧ್ಯಾನದಲ್ಲಿ ಭಾಗವಹಿಸಿದ್ದರು.
ಆನಾಪಾನ ಧ್ಯಾನವು ಜೀರ್ಣಕ್ರಿಯೆ, ಹಸಿವು ಇತ್ಯಾದಿ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುವ ಧ್ಯಾನದ ಒಂದು ರೂಪವಾಗಿದೆ. ಈ ರೀತಿಯ ಧ್ಯಾನವು ಉಸಿರಾಟದ ಅರಿವಿನ ಮೇಲೆ ಕೇಂದ್ರೀಕರಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಎಲ್ಲಾ ಅಂಗಗಳ ಉತ್ತಮ ಕಾರ್ಯನಿರ್ವಹಣೆಗೆ ಕಾರಣವಾಗುತ್ತದೆ.
ವಿಪಾಸನ ಧ್ಯಾನ ಕೇಂದ್ರದ ಶಿಕ್ಷಕಿ ಮಧುರಾ ಸಾಹುಕಾರ್, ಧಮ್ಮಸೇವಕಿ ಲಕ್ಷ್ಮಿ ಹುಬ್ಬಳ್ಳಿ, ಪ್ರದೀಪ್ ಲಾಲ್, ರಾಜಮಹಿಂದ್ರ ಕಿರಣಗಿ ಆನಾಪಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ವಿದ್ಯಾರ್ಥಿಗಳೊಂದಿಗೆ ಆನಾಪಾನದಲ್ಲಿ ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಪ್ರಥಮ ತ್ರಿಪಿಟಕ ಪಠಣ ಮಹೋತ್ಸವ
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.