ಅಂಗಡಿ ಶೋ ರೂಮ್ ಗಳು, ಅಂಗಡಿಗಳು, ಹೋಟೆಲ್‌ಗಳು ಮತ್ತು ಶಾಲಾ ಕಾಲೇಜ್‌ಗಳಲ್ಲಿ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರಕಾರವು ಕನ್ನಡ ಭಾಷೆ ಅಳವಡಿಸಲು ಆದೇಶ ಮಾಡಿದರೂ ಸಹ ಅಂಗಡಿ ಶೋ ರೂಮ್‌ಗಳು, ಅಂಗಡಿಗಳು, ಹೋಟೆಲ್‌ಗಳು ಮತ್ತು ಶಾಲಾ ಕಾಲೇಜ್‌ನವರು ಇಲ್ಲಿಯವರೆಗೆ ನಾಮಫಲಕವನ್ನು ಅಳವಡಿಸಿರುವುದಿಲ್ಲ. ಉಡುಪಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಮಾಯವಾಗಿರುತ್ತದೆ ಎಂದು ಕರ್ನಾಟಕ ಯುವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಡಾ| ಸುನಿಲ್ ಎಂ.ಎಸ್. ರವರು ಹೇಳಿದರು.
ಅವರು ಇಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಅಂಗಡಿ ಶೋ ರೂಮ್‌ಗಳು, ಅಂಗಡಿಗಳು, ಹೋಟೆಲ್‌ಗಳು ಮತ್ತು ಶಾಲಾ ಕಾಲೇಜ್‌ಗಳು. ವಾಣಿಜ್ಯ ಮಳಿಗೆಗಳು, ಸರಕಾರಿ ಕಚೇರಿಗಳು, ಖಾಸಗಿ ಹಾಗೂ ಸರಕಾರಿ ಬ್ಯಾಂಕುಗಳು ಕನ್ನಡದಲ್ಲಿ ನಾಮಫಲಕವನ್ನು ಆಳವಡಿಸಲು ಆದೇಶವನ್ನು ನೀಡಬೇಕಾಗಿ ನಮ್ಮ ಸಂಘಟನೆಯ ಪರವಾಗಿ ವಿನಂತಿಸುತ್ತೇವೆ. ಒಂದು ವೇಳೆ ಒಂದು ತಿಂಗಳ ಅವಧಿಯಲ್ಲಿ ಕನ್ನಡ ಬಾಷೆಯಲ್ಲಿ ನಾಮಫಲಕವನ್ನು ಯಾವುದೇ ಅಂಗಡಿ ಶೋ ರೂಮ್‌ಗಳು, ಅಂಗಡಿಗಳು, ಹೋಟೆಲ್‌ಗಳು ಮತ್ತು ಶಾಲಾ ಕಾಲೇಜ್ ಹಾಗೂ ಇನ್ನಿತರ ಕಚೇರಿಗಳಲ್ಲಿ ಆಳವಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಹೋರಾಟವನ್ನು ಮಾಡಲು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಹೇಮಂತ್ ಕುಮಾರ್‌ರವರ ನೇತೃತ್ವದಲ್ಲಿ ಸಿದ್ಧರಿದ್ದೇವೆ.
ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಮಾಡಲು ಬದ್ಧರಿದ್ದೇವೆ ಎಂದು ಹೇಳಿದರು.

While it us true all Hindustanis fought against colonisers, there were some who collaborated?