‘ನಮ್ಮ ಪೂರ್ವಜರು ಜೈಲಿನಲ್ಲಿದ್ದಾಗ, ನಿಮ್ಮವರು ಬ್ರಿಟೀಷರ ಗುಲಾಮರಾಗಿದ್ದರು’: ಸಂಘಿಗೆ ಸಾಹಿತಿ ಜಾವೇದ್‌ ಅಖ್ತರ್ ತಿರುಗೇಟು

Date:

ನಮ್ಮ ಪೂರ್ವಜರು ಜೈಲಿನಲ್ಲಿದ್ದಾಗ, ನಿಮ್ಮವರು ಬ್ರಿಟೀಷರ ಗುಲಾಮರಾಗಿದ್ದರು ಎಂದು ದೇಶಪ್ರೇಮವನ್ನು ಪ್ರಶ್ನಿಸಿದ ಸಂಘಪರಿವಾರದ ವ್ಯಕ್ತಿಯೊಬ್ಬನಿಗೆ ಬಾಲಿವುಡ್‌ನ ಖ್ಯಾತ ಸಾಹಿತಿ ಹಾಗೂ ಕವಿಗಳಾದ ಜಾವೇದ್‌ ಅಖ್ತರ್ ಅವರು ತಿರುಗೇಟು ನೀಡಿದ್ದಾರೆ.

- Advertisement -

ನಿನ್ನೆ ದುಬೈನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಭಾರತ – ಪಾಕ್‌ ಲೀಗ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅಮೋಘ ಶತಕದಿಂದ ಟೀಂ ಇಂಡಿಯಾ 6 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಭಾರತದ ಜಯವನ್ನು ಸಂಭ್ರಮಿಸಿ ಸಾಹಿತಿ ಜಾವೇದ್‌ ಅಖ್ತರ್ ಅವರು “ ವಿರಾಟ್‌ ಕೊಹ್ಲಿ ಜಿಂದಾಬಾದ್‌, ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಮೀಟರ್ ಹಾಕಲ್ಲ, ನಿಗದಿತ ಬಾಡಿಗೆಗೆ ಬರಲ್ಲ: ಆಟೋ ಸುಲಿಗೆಯಿಂದ...

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳ ಸಂಚಾರ ಮತ್ತು ಆಟೋ ಪ್ರಯಾಣಿಕರ ಸಮಸ್ಯೆ ಇಂದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದು, ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಕೇಳುವುದು,...

ಜಾವೇದ್‌ ಅಖ್ತರ್ ಅವರ ದೇಶಪ್ರೇಮವನ್ನು ಪ್ರಶ್ನಿಸಿದ  ‘ಪ್ರೊಫೆಸರ್‌ ಸಾಹೇಬ್‌’ ಎಂಬ ಹೆಸರಿನ ಸಂಘಪರಿವಾರದ ವ್ಯಕ್ತಿಯೊಬ್ಬ ಪೋಸ್ಟ್‌ಗೆ ಪ್ರತ್ಯುತ್ತರ ನೀಡಿ ‘ ಇಂದು ಸೂರ್ಯ ಎಲ್ಲಿಂದ ಹುಟ್ಟಿದ್ದಾನೆ, ಒಳಗಡೆ ನಿಮಗೆ ತುಂಬ ದುಃಖ ಆಗುತ್ತಿದೆ ತಾನೆ’ ಎಂದು ಕೀಳಾಗಿ ನುಡಿದಿದ್ದ. ಜಾವೇದ್‌ ಅಖ್ತರ್‌ ಅವರು ಮುಸ್ಲಿಂ ಸಮುದಾಯದವರು ಎಂಬ ಕಾರಣಕ್ಕೆ ಮತಾಂಧತೆಯನ್ನು ತೋರಿಸಿದ್ದ.

ಇದಕ್ಕೆ ತಿರುಗೇಟು ನೀಡಿದ್ದ ಜಾವೇದ್‌ ಅಖ್ತರ್‌ ಅವರು  “ಮಗಾ, ನಿಮ್ ತಾತ ಮುತ್ತಾತ, ಬ್ರಿಟಿಷರ ಬೂಟು ನೆಕ್ತಾ ಇದ್ದಾಗ, ನಮ್ ತಾತ ಮುತ್ತಾತ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರು, ಕರಿ ನೀರಿನ ಶಿಕ್ಷೆ ಅನುಭವಿಸ್ತಿದ್ರು…” ಎಂದು ಮತ್ತೊಂದು ಪೋಸ್ಟ್‌ ಹಾಕಿ ಸಂಘ ಪರಿವಾರದ ವ್ಯಕ್ತಿಯ ಬೆವರಿಳಿಸಿದ್ದಾರೆ.

ಜಾವೇದ್‌ ಅಖ್ತರ್‌ ಅವರ ವೈಯಕ್ತಿಕ ನೀವನಕ್ಕೆ ಬಂದಾಗ ಅವರು ನಾಸ್ತಿಕವಾದಿಗಳು. ಅವರ ಮುತ್ತಾತ ಫಜಲ್ ಎ ಹಖ್ ಖೈರಾಬಾದಿ ಅವರು ಭಾರತದ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದವರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಎದೆ ಸೆಟೆಸಿದ್ದವರು. ಅವರಿಗೆ ಕರಿನೀರಿನ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸಲಾಯಿತು. 1861ರ ಆಗಸ್ಟ್ 19ರಂದು ಅಲ್ಲಿಯೇ ಜೀವ ಬಿಟ್ಟರು ಅವರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ದೇವರು ಬೇಕಿಲ್ಲ – ಇಚ್ಛಾಶಕ್ತಿ ಸಾಕು

ಜಾವೇದ್ ಅಖ್ತರ್ ತಮ್ಮ ದೇಶಪ್ರೇಮವನ್ನು ಸಾಬೀತು ಮಾಡುವಂತೆ ಜಾವೇದ್ ಅಖ್ತರ್ ಅವರಿಗೆ ಸವಾಲು ಹಾಕಲಾಗುತ್ತಿದೆ. ವಿರಾಟ್ ಕೊಹ್ಲಿ ಆಟವನ್ನು ಸೂಪರ್ ಸೂಪರ್ ಎಂದು ಹೊಗಳಿದ ನಂತರವೂ… ಅವರನ್ನು ಹಿಂದೂ ಮತಾಂಧರು ಪಾಕಿಸ್ತಾನಿ ಪಾಕಿಸ್ತಾನಿ ಎಂದು ನಿಂದಿಸುತ್ತಿದ್ದಾರೆ. ಜಾವೇದ್ ಅಖ್ತರ್ ನಾಸ್ತಿಕವಾದಿ. ಅವರ ಉರ್ದೂ ಹೆಸರು ನೋಡಿ ಅವರನ್ನು ಪಾಕಿಸ್ತಾನಿ ಅಂತ ನಿಂದಿಸಲಾಗುತ್ತಿದೆ. ದೇಶದಲ್ಲೇ ಖ್ಯಾತಿ ಗಳಿಸಿದ ಇಂತಹವರನ್ನೇ  ಹೀಗೆ ನಿಂದಿಸಿದರೆ ಇನ್ನು ಸಾಮಾನ್ಯ ಮುಸಲ್ಮಾನರ ಗತಿಯೇನು ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾವೇದ್ ಅಖ್ತರ್ ಬಾಲಿವುಡ್‌ ಚಿತ್ರರಂಗದ ಅತ್ಯುತ್ತಮ ಗೀತ ರಚನೆಕಾರರಾಗಿದ್ದು, ನೂರಾರು ಸಿನಿಮಾಗಳಿಗೆ ಸಾವಿರಾರು ಹಾಡುಗಳನ್ನು ಬರೆದಿದ್ದಾರೆ. ಅವರ ನೂರಾರು ಹಾಡುಗಳು ಸೂಪರ್‌ ಹಿಟ್‌ ಆಗಿವೆ. ಉತ್ತಮ ಗೀತ ರಚನೆಗಾಗಿ ಐದು ಬಾರಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಿನಿಮಾ ರಂಗದ ಹತ್ತಾರು ಪ್ರಶಸ್ತಿಗಳಲ್ಲದೆ ಕೇಂದ್ರ ಸರ್ಕಾರವು ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಒಮ್ಮೆ ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ- ಚುನಾವಣಾ ಆಯುಕ್ತ ಗ್ಯಾನೇಶ್ ವಿರುದ್ಧದ ತನಿಖೆಗೆ ವಿಶೇಷ ತಂಡ ರಚನೆ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್‌ ಅವರ ವಿರುದ್ಧ...

ಎಸ್‌ಬಿಐಗೆ ₹12,668 ಕೋಟಿ ವಂಚನೆ: ವಿಡಿಯೊಕಾನ್‌ ಮಾಜಿ ಪ್ರವರ್ತಕ ವೇಣುಗೋಪಾಲ್ ಧೂತ್‌ ‘ದಿವಾಳಿ’

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೇತೃತ್ವದ ಪ್ರಬಲ ಬ್ಯಾಂಕ್‌ಗಳ ಒಕ್ಕೂಟಕ್ಕೆ...

SIR | 7 ರಾಜ್ಯಗಳ ಅಳಿಸಲಾದ ಮತದಾರರಿಗೆ ‘ಫಾರ್ಮ್‌-6’ ಇಲ್ಲದೆಯೇ ಮರುನೋಂದಣಿಗೆ ಅವಕಾಶ; ಕರ್ನಾಟಕಕ್ಕೆ ಮಾತ್ರ ಏಕಿಲ್ಲ?

ಮತಪಟ್ಟಿಯಿಂದ ಹೊರಗುಳಿದವರಿಗೆ ಹಳೆಯ ಗುರುತಿನ ಚೀಟಿಯಲ್ಲೇ ಮರುಸೇರ್ಪಡೆಗೆ ಚುನಾವಣಾ ಆಯೋಗ ಅವಕಾಶ...

ಕೇರಳ ಮೂಲದ ನಿತ್ಯಾ ರಾಮನ್; ದೆಹಲಿಯ ಕೊಳೆಗೇರಿ ಹೋರಾಟದಿಂದ ಲಾಸ್ ಏಂಜಲೀಸ್ ಮೇಯರ್ ಪಟ್ಟದವರೆಗೆ

ಅಮೆರಿಕದ ಎರಡನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್‌ನ ನೂತನ ಮೇಯರ್ ಆಗಿ...