ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಅಂಕಲಗಾ ಗ್ರಾಮ ಪಂಚಾಯತಿ ಇರುವ ಗ್ರಾಮವೇ ಮೂಲಸೌಕರ್ಯ ಕೊರತೆಯಿಂದ ನಲುಗಿತ್ತಿದೆ.
ಗ್ರಾಮದ ನಡು ರಸ್ತೆಯಲ್ಲೇ ಚರಂಡಿ ನೀರು ಕೆರೆಯಂತೆ ನಿಂತಿದ್ದರೂ ಈವರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮದ ಸದಸ್ಯರು ತಿರುಗಿ ನೋಡಿತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಕರೆಪ್ಪ ಕರಗೊಂಡ್ ಈ ದಿನ.ಕಾನೊಂದಿಗೆ ಮಾತನಾಡಿ, “ವರ್ಷ ತುಂಬುವುದರೊಳಗಾಗಿ ₹21 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ ಅಂಕಲಗಾ ಗ್ರಾಮ ಪಂಚಾಯಿತಿ ಅಧಿಕಾರಿ ಅಂಕಲಗಾ ಗ್ರಾಮಕ್ಕೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಮುಂದಾಗದೇ ಇರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ” ಎಂದರು.
“ಚರಂಡಿಯ ನೀರು ರಸ್ತೆಯಲ್ಲಿ ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಕಾಟದಿಂದ ಮಲೇರಿಯಾ, ಡೆಂಘಿಯಂತಹ ರೋಗಗಳು ಹರಡುತ್ತಿದ್ದು, ಸುರಕ್ಷತಾ ಕ್ರಮವಾಗಿ ಯಾವುದೇ ಕ್ರಮ ಜರುಗಿಸುತ್ತಿಲ್ಲ” ಎಂದು ಅಂಕಲಗಿ ಗ್ರಾಮಸ್ಥರು ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಈ ಸುದ್ದಿಓದಿದ್ದೀರಾ? ವಿಜಯಪುರ | ಕುಡಿಯುವ ನೀರು ಒದಗಿಸುವ ಡಿಬಿಒಟಿ ಯೋಜನೆ-1ಯಡಿ ಪೈಪಲೈನ್ ಆಳವಡಿಕೆಗೆ ಸೂಚನೆ
“ಗ್ರಾಮದಲ್ಲಿ ಪ್ರತಿ ವಠಾರದಲ್ಲಿ ಚರಂಡಿಗಳು ಸ್ವಚ್ಛತೆಯಿಲ್ಲದೆ ಗಬ್ಬೆದ್ದು ನಾರುತ್ತಿವೆ. ಎಲ್ಲಿಯೂ ಬ್ಲೀಚಿಂಗ ಪೌಡರ್ ಸಿಂಪಡಣೆಯಾಗಿಲ್ಲ. ಪ್ರತಿ ಶನಿವಾರ ಅಂಕಲಗಾ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ಆದರೂ ಮೂಲ ಸೌಕರ್ಯಗಳು ಕಣ್ಮರೆಯಾಗಿವೆ” ಎಂದು ರೈತ ಮುಖಂಡ ಕರೆಪ್ಪ ಕರಗೊಂಡ್ ಕಳವಳ ವ್ಯಕ್ತಪಡಿಸಿದರು.