ಸೇವೆ ಒದಗಿಸಲು ವಿಮಾ ಕಂಪನಿ ವಿಫಲ; ಪರಿಹಾರ ನೀಡುವಂತೆ ಆದೇಶ

Date:

Advertisements

ಎಸ್‌ಬಿಐ ವಿಮಾ ಕಂಪನಿಯು ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ವಿಫಲವಾಗಿದ್ದು, ಸಂತ್ರಸ್ತ ಗ್ರಾಹಕರಿಗೆ 25,000 ರೂಪಾಯಿ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆ ಆದೇಶಿಸಿದೆ.

ಹುಬ್ಬಳ್ಳಿಯ ನಿವಾಸಿ ರಾಜೇಂದ್ರ ಪತ್ತಾರ್ ಎಂಬುವರು ಎಸ್‌ಬಿಐ ಮೆಡಿಕ್ಲೈಮ್ ಹೆಲ್ತ್ ಪ್ಲಸ್ ವಿಮಾ ಪಾಲಿಸಿಯನ್ನು ಖರೀದಿಸಿದ್ದರು ಮತ್ತು ವಾರ್ಷಿಕ 10,502 ರೂ. ಪಾವತಿಸುತ್ತಿದ್ದರು. 2021ರಲ್ಲಿ ಮೂತ್ರನಾಳದ ಸಮಸ್ಯೆ ತುತ್ತಾಗಿದ್ದ ಅವರು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಬಿಲ್ 51,350 ರೂ. ಪಾವತಿಸಲು ವಿಮೆ ಕ್ಲೇಮ್‌ಗೆ ಅರ್ಜಿ ಸಲ್ಲಿಸಿದ್ದರು.

ಪಾಲಿಸಿ ಮಾಡಿಸುವಾಗ ತಮ್ಮ ಅನಾರೋಗ್ಯದ ಬಗ್ಗೆ ರೇಜೇಂದ್ರ ಅವರು ಅರ್ಜಿಯಲ್ಲಿ ಉಲ್ಲೇಖಿಸಿಲ್ಲ ಎಂದು ಎಸ್‌ಬಿಐ ವಿಮಾ ಕಂಪನಿ ಹಣ ಮಂಜೂರು ಮಾಡಲು ನಿರಾಕರಿಸಿತ್ತು. ಬಳಿಕ, ರಾಜೇಂದ್ರ ಅವರು ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದರು. ಪಾಲಿಸಿಯು ಸಕ್ರಿಯವಾಗಿದ್ದಾಗ ಸರಿಯಾದ ಕಾರಣವಿಲ್ಲದೆ ತಮ್ಮ ಹಕ್ಕನ್ನು ಕಂಪನಿ ತಿರಸ್ಕರಿಸಿದೆ ಎಂದು ದೂರಿದ್ದರು.

Advertisements

ಅರ್ಜಿದಾರರು ಮತ್ತು ಕಂಪನಿಯ ವಾದ-ಪ್ರತಿವಾದವನ್ನು ಆಲಿಸಿದ ವೇದಿಕೆಯ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ ಬಿಳಿಶೆಟ್ಟಿ ಮತ್ತು ಪ್ರಭು ಹಿರೇಮಠ. “ರಾಜೇಂದ್ರ ಅವರ ವಿಮೆ ಕ್ಲೈಮ್‌ ಅರ್ಜಿಯನ್ನು ತಿರಸ್ಕರಿಸಲು ಕಂಪನಿಯು ನೀಡಿದ ಕಾರಣವನ್ನು ಸಮರ್ಥಿಸಲು ಎಸ್‌ಬಿಐ ವಿಮಾ ಕಂಪನಿ ವಿಫಲವಾಗಿದೆ. ಆಸ್ಪತ್ರೆಯ ಬಿಲ್ 51,350 ರೂ. ಜೊತೆಗೆ 25,000 ರೂ. ಪರಿಹಾರ ಮತ್ತು 10,000 ರೂ. ನ್ಯಾಯಾಲಯದ ವೆಚ್ಚವನ್ನು ದೂರುದಾರರಿಗೆ ಕಂಪನಿ ಪಾವತಿಸಬೇಕು” ಎಂದು ಆದೇಶಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

Download Eedina App Android / iOS

X