ಬೆಳಗಾವಿ ಜಿಲ್ಲೆಯ ನೇಸರಗಿ ಸಮೀಪ ಅಗ್ನಿ ಅವಘಡದಿಂದ ಮನೆ ಸುಟ್ಟುಗೋಗಿದ್ದು, ಮನೆಯಲ್ಲಿದ್ದ ಸುಮಾರು ₹35 ಮೊತ್ತದ ವಸ್ತುಗಳು ಹಾಗೂ ಚಿನ್ನಾಭರಣಗಳು ಹಾನಿಯಾಗಿವೆ.
ಮನೆಯಲ್ಲಿದ್ದ ಬೆಲೆಬಾಳುವ ಸಾಗವಾಣಿ ಕಟ್ಟಿಗೆಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಬೆಳ್ಳಿಯ ಪೂಜಾ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.
ವೀರನಗೌಡ ಪಾಟೀಲ ಮತ್ತು ಗಿರಿಗೌಡ ಪಾಟೀಲ ಅವರಿಗೆ ಸೇರಿದ ಮನೆಯೂ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಬಾಬಾಸಾಹೇಬ ಪಾಟೀಲ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಪರಿಹಾರ ಕೊಡುಸುವುದಾಗಿ ಭರವಸೆ ನೀಡಿದರು.