ನೇಪಾಳದಲ್ಲಿ ಆದಿಪುರುಷ್‌ ಸಿನಿಮಾ ಪ್ರದರ್ಶನ ರದ್ದು

Date:

ಸೀತೆ ನೇಪಾಳದ ಮಗಳು ಎಂದ ಕಟ್ಮಂಡು ಮೇಯರ್

- Advertisement -

ಚಿತ್ರದಿಂದ ವಿವಾದಾತ್ಮಕ ಸಂಭಾಷಣೆ ಕೈಬಿಡಲು ಆಗ್ರಹ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ತೆಲುಗಿನ ಖ್ಯಾತ ನಟ ಪ್ರಭಾಸ್‌ ಅಭಿನಯದ ʼಆದಿಪುರುಷ್‌ʼ ಸಿನಿಮಾ ಶುಕ್ರವಾರ ಜಗತ್ತಿನಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ವಿವಾದಾತ್ಮಕ ಸಂಭಾಷಣೆಯ ಕಾರಣಕ್ಕೆ ನೇಪಾಳದಲ್ಲಿ ಈ ಚಿತ್ರದ ಪ್ರದರ್ಶನಗಳು ರದ್ದಾಗಿವೆ.

ರಾಮಾಯಣದ ಕಥೆಯನ್ನು ಆಧರಿಸಿ ತೆರೆಗೆ ಬಂದಿರುವ ʼಆದಿಪುರುಷ್‌ʼ ಸಿನಿಮಾದಲ್ಲಿ ʼಸೀತೆ ಭಾತರದ ಮಗಳುʼ ಎಂಬ ಸಂಭಾಷಣೆ ಇದೆ. ಸದ್ಯ ಈ ಸಂಭಾಷಣೆಯೇ ನೇಪಾಳಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕಟ್ಮಂಡು ಸೇರಿದಂತೆ ನೇಪಾಳದೆಲ್ಲೆಡೆ ಚಿತ್ರದ ಪ್ರದರ್ಶನವನ್ನು ರದ್ದುಪಡಿಸಲಾಗಿದೆ.

ನೇಪಾಳದ ರಾಜಧಾನಿ ಕಟ್ಮಂಡುವಿನ ಮೇಯರ್‌ ಬಾಲೆಂದ್ರ ಶಾ ಸಾಮಾಜಿಕ ಜಾಲತಾಣಗಳಲ್ಲಿ ʼಆದಿಪುರುಷ್‌ʼ ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದು, “ಜಾನಕಿ ಭಾರತದವಳಲ್ಲ, ಆಕೆ ನೇಪಾಳದ ಮಗಳು. ʼಆದಿಪುರುಷ್‌ʼ ಸಿನಿಮಾದಿಂದ ವಿವಾದಾತ್ಮಕ ಸಂಭಾಷಣೆಯನ್ನು ತೆಗೆದು ಹಾಕದ ಹೊರತು ಕಟ್ಮಂಡುವಿನಲ್ಲಿ ಯಾವುದೇ ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ನೇಪಾಳದ ಚಲನಚಿತ್ರ ಸೆನ್ಸಾರ್‌ ಮಂಡಳಿ ಕೂಡ ʼಆದಿಪುರುಷ್‌ʼ ಚಿತ್ರತಂಡಕ್ಕೆ ನೋಟಿಸ್‌ ನೀಡಿದೆ. “ಸಿನಿಮಾದಿಂದ ವಿವಾದಾತ್ಮಕ ಸಂಭಾಷಣೆಯನ್ನು ತೆಗೆದು ಹಾಕುವ ವರೆಗೂ ನೇಪಾಳದಲ್ಲಿ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ” ಎಂದು ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಮಾಂತ್ರಿಕ ಸಿಂಗೀತಂ ಶ್ರೀನಿವಾಸರಾವ್

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ...

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...