ಅಮೆರಿಕದ ಯೆಮೆನ್‌ ದಾಳಿ ಯೋಜನೆ ಸೋರಿಕೆ; ಪತ್ರಕರ್ತರಿದ್ದ ಗುಂಪಿಗೆ ಫಾರ್ವರ್ಡ್ ಮಾಡಿದ ಟ್ರಂಪ್ ಅಧಿಕಾರಿಗಳು

Date:

Advertisements

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಂಪುಟದ ಅಧಿಕಾರಿಗಳು ಯೆಮೆನ್‌ ದೇಶದ ಹೌತಿ ಬಂಡುಕೋರರ ಮೇಲಿನ ದಾಳಿಯ ಯೋಜನೆಯ ಸಂಪೂರ್ಣ ವಿವರಗಳನ್ನು ಅಮರಿಕದ ಪತ್ರಕರ್ತರೊಬ್ಬರಿಗೆ ಸೋರಿಕೆ ಮಾಡಿದ ಒಂದು ತಪ್ಪು ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಇದು ಕೂಡ ಒಂದು ಕಪ್ಪು ಚುಕ್ಕೆಯಾಗಿ ಉಳಿಯಲಿದೆ. ಇದು ಆಕಸ್ಮಿಕವಾಗಿ ಸಂಭವಿಸಿದೆ ಎಂದು ಟ್ರಂಪ್‌ ಸರ್ಕಾರ ಹೇಳುತ್ತಿದ್ದರೂ ‘ಅಮೆರಿಕದ ಭದ್ರತೆಯಲ್ಲಿನ ಪ್ರಮುಖ ಲೋಪ ಎಂದು ಎಲ್ಲಡೆ ಹೇಳಲಾಗುತ್ತಿದೆ.

‘ಯಮೆನ್‌ನಲ್ಲಿ ಹೌತಿ ಬಂಡುಕೋರರ ಮೇಲಿನ ದಾಳಿಯ ರಹಸ್ಯ ಯೋಜನೆಯನ್ನು ಚರ್ಚಿಸಲು ಟ್ರಂಪ್ ಸಂಪುಟದ ಉನ್ನತ ಅಧಿಕಾರಿಗಳು ಸಂದೇಶ ಕಳುಹಿಸುವ ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿ ಒಂದು ಗುಂಪನ್ನು ರಚಿಸಿದ್ದರು. ಈ ಗುಂಪಿನಲ್ಲಿ ಬಹಳ ಸೂಕ್ಷ್ಮ ಮಾಹಿತಿಯನ್ನು ಹಂಚಿ ಕೊಳ್ಳಲಾಗುತ್ತಿತ್ತು. ಯಮೆನ್‌ನಲ್ಲಿ ಹೌತಿ ಬಂಡುಕೋರರ ವಿರುದ್ಧ ಅಮೆರಿಕ ತನ್ನ ಮುಂದಿನ ದಾಳಿಯನ್ನು ಯಾವಾಗ ಪ್ರಾರಂಭಿಸುತ್ತದೆ? ಈ ದಾಳಿಯನ್ನು ಯಾವ ಸಮಯದಲ್ಲಿ ಮತ್ತು ಯಾವ ಶಸ್ತ್ರಗಳೊಂದಿಗೆ ನಡೆಸಲಾಗುತ್ತದೆ ಎಂಬೆಲ್ಲ ಮಾಹಿತಿಗಳನ್ನು ಗ್ರೂಪಿನಲ್ಲಿ ಹಂಚಿಕೊಳ್ಳಲಾಗುತ್ತಿತ್ತು. ಆದರೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್ಎ) ಮೈಕ್ ವಾಲ್ಸ್ ಅವರು ‘ದಿ ಅಟ್ನಾಂಟಿಕ್’ ನಿಯತಕಾಲಿಕೆಯ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್ ಬರ್ಗ್ ಅವರನ್ನು ಸಿಗ್ನಲ್ ಅಪ್ಲಿಕೇಶನ್‌ ಗ್ರೂಪಿಗೆ ಸೇರಿಸಿಕೊಂಡಾಗ ಸಮಸ್ಯೆ ಉದ್ಭವಿಸಿತು. ಈ ಗುಂಪಿನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರಕ್ಷಣಾ ಸಚಿವ ಪೀಟ್ ಹೆಗ್ರೆತ್, ವಿದೇಶಾಂಗ ಸಚಿವ ಮಾಸೋ ರೂಬಿಯೊ, ಎನ್‌ಎಸ್ಎ ಮೈಕ್ ವಾಲ್ಟ್ ರಾಷ್ಟ್ರೀಯ ಗುಪ್ರಚರ ನಿರ್ದೇಶಕರು ಸೇರಿದಂತೆ 18 ಉನ್ನತ ಅಧಿಕಾರಿಗಳು ಇದ್ದರು.

ಗ್ರೂಪಿಗೆ ಸೇರ್ಪಡೆ ಹಾಗೂ ಅಲ್ಲಿ ನಡೆದ ಮಾಹಿತಿಯ ಬಗ್ಗೆ ವರದಿಯನ್ನು ಪ್ರಕಟಿಸಿದ್ದ ‘ಅಟ್ಲಾಂಟಿಕ್’ ಸುದ್ದಿ ಸಂಸ್ಥೆಯ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್, ಮಾರ್ಚ್ 13ರಂದು ‘ಹೌದಿ ಸಣ್ಣ ಗುಂಪು’ ಎಂಬ ಹೆಸರಿನಲ್ಲಿ ಸಿಗ್ನಲ್ ಸಂದೇಶ ತಂತ್ರಾಂಶದ ಸಂರಕ್ಷಿತ ಸಂವಾದ ಗುಂಪಿಗೆ ನನ್ನನ್ನು ಅಚಾತುರ್ಯದಿಂದ ಆಮಂತ್ರಿಸಲಾಗಿತ್ತು. ಆ ಗುಂಪಿನಲ್ಲಿ ಹೌದಿಗಳ ಮೇಲಿನ ಅಮೆರಿಕದ ದಾಳಿಯ ಕುರಿತು ಸಮನ್ವಯವನ್ನು ಏರ್ಪಡಿಸಲು ‘ಟೈಗರ್ ಟೀಮ್’ ಸ್ಥಾಪಿಸುವ ಗುರಿಯನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಝ್ ಅವರು ತಮ್ಮ ಸಹಾಯಕ ಅಲೆಕ್ಸ್ ವಾಂಗ್‌ಗೆ ವಹಿಸಿದ್ದರು. ನಂತರದಲ್ಲಿ ಈ ದಾಳಿಗಳು ಪ್ರಾರಂಭಗೊಂಡ ಕೆಲವೇ ಗಂಟೆಗಳಲ್ಲಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೆಟೆ ಹೆಗ್ಸೆತ್ ಅವರು, ಅಮೆರಿಕ ನಿಯೋಜಿಸಲಿರುವ ಗುರಿಗಳು, ಶಸ್ತ್ರಾಸ್ತ್ರಗಳು ಹಾಗೂ ದಾಳಿ ಸಂಯೋಜನೆಗಳು ಸೇರಿದಂತೆ ಕಾರ್ಯಾಚರಣೆ ಯೋಜನೆಯ ವಿವರಗಳನ್ನು ಸಿಗ್ನಲ್ ಸಂದೇಶ ಗುಂಪಿನಲ್ಲಿ ಪೋಸ್ಟ್ ಮಾಡಿದ್ದರು. ಅರಿವಿಲ್ಲದಂತೆ ಗ್ರೂಪಿಗೆ ತಮ್ಮನ್ನು ಸೇರ್ಪಡೆ ಮಾಡಿದ್ದರೂ ಕೂಡ ಇದೊಂದು ಆಘಾತಕಾರಿ ಘಟನೆ ಎಂದು ಆತಂಕ ವ್ಯಕ್ತಪಡಿಸಿದ್ದರು.

Advertisements

ಈ ಸುದ್ದಿ ಓದಿದ್ದೀರಾ? ಅಮೆರಿಕದ ಜಿಲ್ಲಾ ನ್ಯಾಯಾಧೀಶರಿಂದ ಟ್ರಂಪ್‌ ಆಡಳಿತ ನೀಡಿದ ಭಾರತೀಯ ವಿದ್ಯಾರ್ಥಿ ಗಡಿಪಾರು ಆದೇಶಕ್ಕೆ ತಡೆ

ಸಿಗ್ನಲ್‌ ಸಂವಾದದ ಗುಂಪಿನಲ್ಲಿ ಅಮೆರಿಕ ಉಪಾಧ್ಯಕ್ಷ ಜೆ ಡಿ ವಾನ್ಸ್, ಅಮೆರಿಕ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ, ಸಿಐಎ ನಿರ್ದೇಶಕ ಜಾನ್ ರಾಕ್ಟ್ ಕ್ಲಿಫ್, ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಶ್ವೇತಭವನದ ಸಿಬ್ಬಂದಿ ವರ್ಗದ ಮುಖ್ಯಸ್ಥ ಸುಸಿ ವೈಲ್ಸ್ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ಅಧಿಕಾರಿಗಳನ್ನು ಪ್ರತಿನಿಧಿಸುವ ಖಾತೆಗಳನ್ನು ಈ ಸಂವಾದ ಗುಂಪಿನಲ್ಲಿ ಸೇರ್ಪಡೆ ಮಾಡಲಾಗಿತ್ತು ಎಂದು ಜೆಫ್ರಿ ಗೋಲ್ಡ್‌ಬರ್ಗ್ತಿ ವರದಿಯಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಇದುವರೆಗೂ ಸೆನೆಟ್ ಅನುಮೋದನೆ ನೀಡದಿದ್ದರೂ, ಡೊನಾಲ್ಡ್ ಟ್ರಂಪ್‌ ಅವರಿಂದ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕರಾಗಿ ನಾಮಕರಣಗೊಂಡಿರುವ ಜೋ ಕೆಂಟ್ ಖಾತೆ ಕೂಡಾ ಈ ಸಿಗ್ನಲ್ ಸಂವಾದದ ಗುಂಪಿನಲ್ಲಿ ಕಂಡು ಬಂದಿದೆ. ಇವೆಲ್ಲವನ್ನು ಗಮನಿಸಿದರೆ ಅಮೆರಿಕ ಭದ್ರತೆ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ತಿಳಿಯುತ್ತದೆ.

ಆದರೆ ಸಣ್ಣ ಅಚಾತುರ್ಯ ಎಂದು ಹೇಳುವ ಮೂಲಕ ತಪ್ಪನ್ನು ಮುಚ್ಚಿಹಾಕಲು ಡೊನಾಲ್ಡ್‌ ಟ್ರಂಪ್‌ ಸರ್ಕಾರ ಈಗಾಗಲೇ ಸಮರ್ಥನೆಗೆ ಮುಂದಾಗಿದೆ. ಎಲ್ಲ ತಪ್ಪನ್ನು ಗುಂಪನ್ನು ರಚಿಸಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಅವರ ಮೇಲೆ ಹಾಕಲಾಗುತ್ತಿದೆ. ಆಗಿರುವ ಲೋಪಗಳ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಮೈಕ್ ವಾಲ್ಟ್ಜ್ ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ. ವಿಶ್ವದಲ್ಲಿಯೇ ಅತಿ ಭದ್ರತೆ ಹಾಗೂ ಶಕ್ತಿಶಾಲಿ ರಾಷ್ಟ್ರ ಎಂದು ಹೇಳಿಕೊಳ್ಳುವ ಅಮೆರಿಕದಲ್ಲಿಯೇ ಮಾಹಿತಿ ಸೋರಿಕೆ ಉಂಟಾಗಿರುವುದು ಖಂಡಿತಾ ಉಳಿದ ಸಣ್ಣಪುಟ್ಟ ರಾಷ್ಟ್ರಗಳು ಆಂತರಿಕ ಹಾಗೂ ಬಾಹ್ಯ ಭದ್ರತೆಯ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಜರೂರತ್ತು ಎದುರಾಗಿದೆ.   

ಭದ್ರತಾ ಮಾಹಿತಿಗಾಗಿ ಅಮೆರಿಕ ಬಳಸುತ್ತಿದ್ದ ಸಿಗ್ನಲ್‌ ಸಂವಹನ

ಭದ್ರತಾ ಮಾಹಿತಿ ಸೋರಿ ಹೋಗಿರುವ ‘ಸಿಗ್ನಲ್‌’ ಆಪ್‌ ಬಗ್ಗೆ ಹೇಳುವುದಾದರೆ ಇದೊಂದು ಮುಕ್ತವಾಗಿ ಲಭ್ಯವಿರುವ ಓಪನ್‌ ಸೋರ್ಸ್ ಮೆಸೆಜಿಂಗ್‌ ಅಪ್ಲಿಕೇಷನ್‌. ವಾಟ್ಸಾಪ್‌, ಟೆಲಿಗ್ರಾಂ ರೀತಿಯಲ್ಲಿರುವ ಒಂದು ಮೆಸೆಜಿಂಗ್‌ ಅಪ್ಲಿಕೇಷನ್‌. 2012ರಲ್ಲಿ ಬಿಡುಗಡೆಯಾಗಿರುವ ಆಪ್‌, ಆಂಡ್ರಾಯ್ಡ್‌ ಮತ್ತು ಆಪಲ್‌ ಎರಡೂ ಪ್ಲಾಟ್‌ಫಾರ್ಮ್‌ನಲ್ಲಿ ದೊರೆಯುತ್ತದೆ. ಜಗತ್ತಿನಾದ್ಯಂತ ಸುಮಾರು 7 ಕೋಟಿ ಜನರು ಈ ಆಪ್‌ ಬಳಸುತ್ತಾರೆ. ಇದು ಲಾಭಕ್ಕಾಗಿ ರಚಿಸಲಾಗಿರುವ ಪ್ಲಾಟ್‌ಫಾರ್ಮ್‌ ಅಲ್ಲ ಎನ್ನಲಾಗಿದೆ. ಈ ಆಪ್‌ನಲ್ಲಿ ಜಾಹಿರಾತುಗಳಿಲ್ಲ ಹಾಗೂ ಹೂಡಿಕೆದಾರರು ಕೂಡ ಇಲ್ಲ. ಸುರಕ್ಷಿತ ಸಂದೇಶ ರವಾನೆಯು ಇದರ ಮುಖ್ಯ ಉದ್ದೇಶ ಎಂದು ಸಿಗ್ನಲ್‌ ಸಂಸ್ಥೆ ಹೇಳುತ್ತದೆ. ಇದರಲ್ಲಿ ರವಾನಿಸುವ ಹಾಗೂ ಸ್ವೀಕರಿಸುವ ಸಂದೇಶಗಳು ಎಂಡ್‌ ಟು ಎಂಡ್‌ ಎನ್ಕ್ರಿಪ್ಟ್‌ ಆಗಿರುವುದರಿಂದ ಮಧ್ಯದಲ್ಲಿ ಇದನ್ನು ಹ್ಯಾಕ್‌ ಮಾಡಿ, ಅದನ್ನು ಓದುವುದಕ್ಕೆ ಸಾಧ್ಯವಿಲ್ಲ.

ಹಾಗೆಯೆ ಬೇರೆ ಮೆಸೆಜಿಂಗ್‌ ಆಪ್‌ಗಳ ರೀತಿ ಬಳಕೆದಾರರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿಕೊಂಡು, ಸರ್ವರ್‌ನಲ್ಲಿ ಅದನ್ನು ಉಳಿಸುವ ವ್ಯವಸ್ಥೆ ಸಿಗ್ನಲ್‌ನಲ್ಲಿ ಇಲ್ಲ. ಯಾವುದೇ ಖಾಸಗಿ ಮಾಹಿತಿಯನ್ನೂ ಸಿಗ್ನಲ್‌ ಕೇಳುವುದು-ಸಂಗ್ರಹಿಸುವುದನ್ನು ಮಾಡುವುದಿಲ್ಲ. ಇದೇ ಕಾರಣಕ್ಕೆ ಬಹಳಷ್ಟು ಮಂದಿ ಸುರಕ್ಷಿತ ಸಂವಹನಕ್ಕೆ ಇದೇ ಆಪ್‌ ಬಳಸ್ತಿದ್ದಾರೆ. ಆದರೆ, ಇಂತಹ ಆಪ್‌ನಲ್ಲಿ ಅಮೆರಿಕದಂತ ದೈತ್ಯ ದೇಶದ ಭದ್ರತಾ ವಿಚಾರಗಳು ಸೋರಿಕೆಯಾಗಿರುವುದರಿಂದ ಸಂದೇಶ ಕಳುಹಿಸುವ ಆಪ್‌ಗಳ ಬಗ್ಗೆ ಮತ್ತಷ್ಟು ಸುರಕ್ಷಿತ ವ್ಯವಸ್ಥೆ ಅಗತ್ಯವಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X