ಬೆಂಗಳೂರು | ಮನೆಯಲ್ಲಿ ಸಿಲಿಂಡರ್ ಸ್ಫೋಟ; ದಂಪತಿಗಳ ಸ್ಥಿತಿ ಗಂಭೀರ

Date:

ಮನೆಯಲ್ಲಿದ್ದ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡಿದ್ದು, ದಂಪತಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

- Advertisement -

ಬೆಂಗಳೂರಿನ ಪುಲಿಕೇಶಿನಗರದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಸಿದ್ದೇಶ್ ಮತ್ತು ಅವರ ಪತ್ನಿ ಶಿಶಿಲಾ ಅವರು ಗಾಯಗೊಂಡಿದ್ದಾರೆ. ಇಬ್ಬರ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಚಹಾ ಮಾಡಲೆಂದು ಶಿಶಿಲಾ ಅವರು ಅಡುಗೆ ಮನೆಗೆ ತೆರಳಿ, ಗ್ಯಾಸ್ ಸ್ಟೌವ್ ಹಚ್ಚಿದ್ದಾರೆ. ಸ್ಟೌವ್ ಹಚ್ಚಿದ ಕೂಡಲೇ ಸಿಲಿಂಡರ್ ಸ್ಪೋಟಗೊಂಡಿದೆ. ಅಡುಗೆ ಮನೆಯಲ್ಲಿದ್ದ ಶಿಶಿಲಾ ಅವರಿಗೆ ಬೆಂಕಿ ತುಗುಲಿದೆ. ಸಮೀಪವೇ ಇದ್ದ ಸಿದ್ದೇಶ್ ಅವರಿಗೂ ಬೆಂಕಿ ತಲುಗಿದೆ. ಇಬ್ಬರಿಗೂ ತೀವ್ರ ಗಾಯಗಳಾಗಿವೆ.

ಶಿಶಿಲಾ ಅವರ ದೇಹದ 90% ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಿದ್ದೇಶ್ ಅವರ ದೇಹದ 45% ಭಾಗದಲ್ಲಿ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅನಿಲ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ, ರಾಯಚೂರು ಜಿಲ್ಲೆಯ ಏಗನೂರು ಗ್ರಾಮದಲ್ಲಿಯೂ ಸಿಲಿಂಡರ್‌ ಸ್ಫೋಟಿಸಿದ್ದ ಘಟನೆ ನಡೆದಿತ್ತು. ಗ್ರಾಮದ ನರಸಿಂಹಲು ಅವರು ಗುಡಿಸಲಿನಲ್ಲಿದ್ದ ಅಡುಗೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ, ನರಸಿಂಹಲು ಮತ್ತು ಅವರ ಪತ್ನಿ ಗುಡಿಸಲಿನಲ್ಲಿಯೇ ಇದ್ದರು, ಸಿಲಿಂಡರ್ ಸ್ಪೋಟಗೊಳ್ಳುತ್ತಿದ್ದಂತೆಯೇ ಗುಡಿಸಲಿನಿಂದ ಹೊರ ಓಡಿ ಬಂದಿದ್ದು, ಅಪಾಯದಿಂದ ಬಜಾವಾಗಿದ್ದರು. ಆದರೆ, ಐದು ಕುರಿಗಳು ಜೀವಂತವಾಗಿ ಸುಟ್ಟುಹೋಗಿದ್ದವು. ಅಲ್ಲದೆ, ಗುಡಿಸನಲ್ಲಿದ್ದ ಇಟ್ಟಿದ್ದ 40,000 ರೂ. ನಗದು, ಚಿನ್ನದ ಆಭರಣೆಗಳು ಹಾಗೂ ಆಹಾರ ಧಾನ್ಯಗಳು ಸುಟ್ಟು ಹೋಗಿವೆ. ಗುಡಿಸಲಿನ ಪಟ್ಟದಲ್ಲಿ ಕಟ್ಟಿದ್ದ ಕುರಿಗಳು ಜೀವಂತವಾಗಿ ಸುಟ್ಟುಹೋಗಿದ್ದವು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ಡ್ರೋನ್ ಪ್ರತಾಪ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು:‌ ಹೈಕೋರ್ಟ್ ಹೇಳಿದ್ದೇನು?

ಕೃಷಿ ಹೊಂಡಲ್ಲಿ 100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...