ಬಸ್ಸಿನಲ್ಲಿ ಕಂಡಕ್ಟರ್ ಮತ್ತು ವೃದ್ಧೆಯ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಬಸ್ ನಿರ್ವಾಹಕಿ(ಮಹಿಳಾ ಕಂಡಕ್ಟರ್) ಅಜ್ಜಿಯ ಕಪಾಳಕ್ಕೆ ಹೊಡೆದ ಘಟನೆ ನಡೆದಿದೆ.
ಕುಂದಗೋಳದಿಂದ ಹುಬ್ಬಳ್ಳಿ ಕಡೆಗೆ ಸಂಚರಿಸುತ್ತಿರುವ ಬಸ್ಸಿನಲ್ಲಿ ಶುಕ್ರವಾರ ಬೆಳಗಿನ ಜಾವ ಶೆರೆವಾಡ ಗ್ರಾಮದ ಬಳಿ ಇಬ್ಬರ ನಡುವರ ವಾಗ್ವಾದ ಉಂಟಾದ ಕಾರಣ ವೃದ್ಧೆಯ ಕಪಾಳಕ್ಕೆ ಹೊಡೆದು ಸುಮ್ಮನೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವೃದ್ಧೆ ಆಕ್ಷೇಪ ವ್ಯಕ್ತಪಡಿಸಿ ಕಂಡಕ್ಟರ್ ನಡೆಗೆ ತೀವ್ರವಾಗಿ ಖಂಡಿಸಿದ್ದಾರೆ. ಪ್ರಯಾಣಿಕರೆಲ್ಲ ಅಜ್ಜಿಗೆ ಬೆಂಬಲವಾಗಿ ನಿಂತು ನಿರ್ವಾಹಕಿ ವಿರುದ್ಧ ಧ್ವನಿ ಎತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಈಶ್ವರ ಖಂಡ್ರೆ
ಅಜ್ಜಿಯ ವಯಸ್ಸಿಗಾದರೂ ಗೌರವ ನೀಡದ ನಿರ್ವಾಹಕಿಯ ವರ್ತನೆಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಸ್ಸಿನಲ್ಲೇ ನಿರ್ವಾಹಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಿರಿಯ ಸಾರಿಗೆ ಅಧಿಕಾರಿಗಳು ಈ ಕುರಿತು ಏನು ಕ್ರಮ ಕೈಗೊಳ್ಳುವರೆಂದು ಕಾದುನೋಡಬೇಕಿದೆ.