ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿಯವರಿಗೆ ಕೇಳಿದ ಪ್ರಶ್ನೆಗಳು:
1.ನಿಮಗೆ ಇಷ್ಟವಾದ ವಿಷಯಗಳನ್ನು ಪಟ್ಟಿ ಮಾಡ್ತಾ-ಮಾಡ್ತಾ ನಿಜವಾಗಿಯೂ ಅಚ್ಚರಿಯೂ, ಖುಷಿಯೂ ಆಯ್ತು. ನಿಮಗೆ ಶಾಸನ ಅಧ್ಯಯನ ಇಷ್ಟ. ಲಿಪಿಗಳ ಅಧ್ಯಯನ, ಸಂಶೋಧನೆ ಇಷ್ಟ. ಮೂರ್ತಿಶಿಲ್ಪ ಮತ್ತು ವಾಸ್ತುಶಿಲ್ಪ ಅಧ್ಯಯನ ಇಷ್ಟ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಥಳಗಳ ಅಧ್ಯಯನ ಇಷ್ಟ… ಒಟ್ಟಾರೆ ಚರಿತ್ರೆ ಮತ್ತು ಅದರ ಸುತ್ತಮುತ್ತಲ ಎಲ್ಲ ಬಗೆಯ ಅಧ್ಯಯನ ನಿಮಗೆ ಇಷ್ಟ ಅಂತಾಯ್ತು. ಚರಿತ್ರೆಯ ಬಗ್ಗೆ ಇಷ್ಟೊಂದು ಪ್ರೀತಿ, ಆಸಕ್ತಿ ಹುಟ್ಟಲು ನಿಮಗೆ ಪ್ರೇರಣೆಯಾದ ಪ್ರಸಂಗ ಯಾವುದು?
2.ಚರಿತ್ರೆಯ ವಿದ್ಯಾರ್ಥಿಯಾದ ನಿಮಗೆ, ಚರಿತ್ರೆಯಲ್ಲಿ ಘಟಿಸಿದ ಯಾವ ಘಟನೆ ತುಂಬಾನೇ ಕಾಡುತ್ತದೆ?
3.ಎಸ್ಸೆಸ್ಸೆಲ್ಸಿವರೆಗೂ ನೀವು ನಿಮ್ಮೂರಿನಲ್ಲಿ ಅಜ್ಜಿ ಜೊತೆ ಇರ್ತೀರಿ. ಹಾಗಾಗಿ, ಅಜ್ಜಿ ಅಂದ್ರೆ ತುಂಬಾನೇ ಇಷ್ಟ ನಿಮಗೆ. ಸೋ… ಅಜ್ಜಿ ಅಂದಾಕ್ಷಣ ನಿಮಗೆ ಏನು ನೆನಪಾಗುತ್ತೆ?
4.ನಿಮ್ಮ ತಂದೆ ದೇವರಕೊಂಡಾ ರೆಡ್ಡಿಯವರು ಕೂಡ ಶಾಸನ, ವಾಸ್ತುಶಿಲ್ಪ ಅಧ್ಯಯನದಲ್ಲಿ ಪರಿಣಿತರು. ಹಾಗಾಗಿ, ನಿಮ್ಮಿಬ್ಬರ ನಡುವೆ ಈ ಅಧ್ಯಯನ ವಿಷಯಗಳ ಬಗೆಗೆ ಸಾಕಷ್ಟು ಚರ್ಚೆ ಆಗಿದ್ದಿರಬಹುದು. ಆ ಚರ್ಚೆಗಳಲ್ಲಿ ಕೆಲವು ಮುನಿಸಿನ ಹಂತಕ್ಕೂ ತಲುಪಿರಬಹುದು. ಅಂತಹ ಸನ್ನಿವೇಶ ಇದ್ದರೆ ನಮ್ಜೊತೆ ಹಂಚಿಕೊಳ್ಳಬಹುದಾ?
5.ಚರಿತ್ರೆಯ ಯಾವ ಘಟನೆ ಬಗೆಗೆ, ‘ಇಂಥ ಘಟನೆ ನಡೆಯಬಾರದಿತ್ತು’ ಅಂತನ್ನಿಸುತ್ತೆ ನಿಮಗೆ?
6.ಐತಿಹಾಸಿಕ ಅಥವಾ ಪಾರಂಪರಿಕ ಸ್ಥಳಗಳ ಅಧ್ಯಯನಕ್ಕೆ ನೀವು ಹೋದಾಗ, ಅಲ್ಲಿನ ಅಸಲಿ ಚರಿತ್ರೆಯೇ ಬೇರೆ ಇರುತ್ತೆ, ಆದರೆ ಜನ ಇನ್ನೊಂದೇನನ್ನೋ ನಂಬ್ಕೊಂಡಿರ್ತಾರೆ ಅನ್ನೋ ಸತ್ಯ ಎದುರಾಗುತ್ತೆ. ಅಂತಹ ಸಂದರ್ಭಗಳಲ್ಲಿ ಜನತೆ ಮತ್ತು ನಿಮ್ಮ ನಡುವೆ ವಾಗ್ವಾದ ನಡೆದ ಸನ್ನಿವೇಶ ಉಂಟಾ?
7.ನೀವು ಕೆಲಸ ಮಾಡ್ತಿರುವ ಈ ಅಪರೂಪದ ಕ್ಷೇತ್ರದಲ್ಲಿ, ಹೆಣ್ಣು ಎಂಬ ಕಾರಣಕ್ಕೆ ತಾರತಮ್ಯ ಅಥವಾ ಅವಮಾನ ಎದುರಿಸಿದ ಸಂದರ್ಭ ಎದುರಾಗಿದೆಯಾ?
8.ನಿಮ್ಮ ಪ್ರಕಾರ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಯಾವ ಘಟನೆ ಚರಿತ್ರೆಯಲ್ಲಿ ಬಹುಕಾಲ ಉಳಿಯಬಲ್ಲದು ಅನ್ಸುತ್ತೆ?
9.ನೀವು ಇದುವರೆಗೆ ಅಧ್ಯಯನ ಮಾಡಿದ ಶಾಸನಗಳ ಪೈಕಿ, ಯಾವ ಶಾಸನದಲ್ಲಿ ಸಿಕ್ಕ ವಿಷಯ ಅತ್ಯಂತ ಕುತೂಹಕರ, ಸ್ವಾರಸ್ಯಕರ ಅನ್ನಿಸಿತ್ತು?
10.ಶಾಸನ, ಸ್ಮಾರಕ, ಶಿಲ್ಪ… ಮುಂತಾದವುಗಳನ್ನು ಅಧ್ಯಯನ ಮಾಡುವಾಗ ನಿಮಗೆ ಬಹುದೊಡ್ಡ ಸವಾಲು ಏನಾಗಿರುತ್ತೆ? ಅಂತಹ ಸವಾಲಿನ ಯಾವುದಾದರೂ ಪ್ರಸಂಗವನ್ನು ಹೇಳಬಹುದಾ?
11.ನೀವು ಇದುವರೆಗೆ ಭೇಟಿ ಕೊಟ್ಟ ಕರ್ನಾಟಕದ ಐತಿಹಾಸಿಕ ಅಥವಾ ಸಾಂಸ್ಕೃತಿಕ ಸ್ಥಳಗಳಲ್ಲಿ ಅತ್ಯಂತ ಮಹತ್ವದ್ದು ಅನ್ನಿಸಿದ, ಆದರೆ ಅಜ್ಞಾತವಾಗಿಯೇ ಉಳಿದಿರುವ ಸ್ಥಳ ಯಾವುದು?
12.ಚರಿತ್ರೆಯ ಸಂಶೋಧನೆ ಮತ್ತು ಅಧ್ಯಯನಕ್ಕೆ ಸಂಬಂಧಿಸಿದಂತೆ ನಿಮ್ಮ ಕನಸುಗಳೇನು?
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ