2025-26ರ ಸಾಲಿನ ಬಿಬಿಎಂಪಿ ಬಜೆಟ್ ಅನ್ನು ಘೋಷಿಸಲಾಗಿದ್ದು, ಈ ಬಜೆಟ್ ಬಗ್ಗೆ ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ) ಪ್ರತಿಕ್ರಿಯಿಸಿದೆ. “ಈ ಬಾರಿ ಬಜೆಟ್ ಹೆಚ್ಚಳವಾಗಿದ್ದರೂ ಬೆಂಗಳೂರು ನಗರದ ಸ್ಥಿತಿ ಬದಲಾವಣೆ ಯಾವಾಗ” ಎಂದು ಬಿಎನ್‌ಪಿ ಪ್ರಶ್ನಿಸಿದೆ.
“ಬಿಬಿಎಂಪಿ 19,927 ಕೋಟಿ ರೂಪಾಯಿ ಬಜೆಟ್ ಘೋಷಿಸಿದ್ದು, 2024-25ನೇ ಸಾಲಿನ 2,371 ಕೋಟಿ ರೂಪಾಯಿ ಬಜೆಟ್‌ಗೆ ಹೋಲಿಸಿದರೆ ಶೇಕಡ 60ರಷ್ಟು ಭಾರೀ ಹೆಚ್ಚಳವಾಗಿದೆ. ನಿಜಕ್ಕೂ ಇದು ಎಲ್ಲಾ ಬೆಂಗಳೂರು ನಿವಾಸಿಗಳಿಗೆ ಸಂತೋಷದ ವಿಚಾರ” ಎಂದು ಬಿಎನ್‌ಪಿ ಹೇಳಿದೆ.
ಇದನ್ನು ಓದಿದ್ದೀರಾ? ಮಾರ್ಚ್‌ನಲ್ಲಿ ಬಿಬಿಎಂಪಿ ಬಜೆಟ್ ಮಂಡನೆ ಸಾಧ್ಯತೆ
“ಕಳೆದ ವರ್ಷ ಸಾರ್ವಜನಿಕ ಕಾಮಗಾರಿಗಳಿಗೆ ₹7,280 ಕೋಟಿ ಮೀಸಲಿಡಲಾಗಿದ್ದು ಈ ವರ್ಷ ₹12,952 ಕೋಟಿಯಷ್ಟು ಹೆಚ್ಚಿನ ಹಣ ಹಂಚಿಕೆಯಾಗಿದೆ. ಕಳೆದ ವರ್ಷ ಘನತ್ಯಾಜ್ಯ ನಿರ್ವಹಣೆಗೆ ₹1,952 ಕೋಟಿ ಹಂಚಿಕೆಯಾಗಿದ್ದು, ಈ ವರ್ಷ ₹1,400 ಕೋಟಿಯಷ್ಟು ನೀಡಲಾಗಿದೆ. ಆದರೆ ಇವೆಲ್ಲವುದರ ಹೊರೆಯನ್ನು ಜನರ ಮೇಲೆ ಹಾಕುವ ಯತ್ನಿಸಲಾಗುತ್ತಿದೆ” ಎಂದು ಬಿಎನ್‌ಪಿ ಆರೋಪಿಸಿದೆ.
“ಬಿಬಿಎಂಪಿ ನಾಗರಿಕರಿಂದ ಬಳಕೆ ದರ (user fee) ವಸೂಲಿ ಮಾಡಲು ಯೋಚಿಸುತ್ತಿದೆ. ಕಸ ಸ್ವಚ್ಛ ಮಾಡುವ ಕಾರ್ಮಿಕರು ಸರಿಯಾದ ಸಂಬಳಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ₹1,500-2,000 ಕೋಟಿ ಘನತ್ಯಾಜ್ಯ ನಿರ್ವಹಣೆಗೆ ₹1,500 – 2,000 ಕೋಟಿ ಖರ್ಚು ಮಾಡಲಾಗಿದ್ದರೂ, ಬಿಬಿಎಂಪಿ ನಾಗರಿಕರ ಮೇಲೆ ಬಳಕೆ ದರ ಹೇರಲು ಯತ್ನಿಸುತ್ತಿದೆ. ಇನ್ನೊಂದೆಡೆ, ಕಾರ್ಮಿಕರಿಗೆ ಸೂಕ್ತ ಸಂಬಳ ಕೊಡುತ್ತಿಲ್ಲ. ಹಣ ಹೋದದು ಎಲ್ಲಿಗೆ? ಈ ಸಮಸ್ಯೆಗೆ ಉತ್ತರ ಯಾರು ನೀಡಬೇಕು” ಎಂದು ಬೆಂಗಳೂರು ನವನಿರ್ಮಾಣ ಪಕ್ಷ ಪ್ರಶ್ನಿಸಿದೆ.
“ಸಾರ್ವಜನಿಕ ಕಾಮಗಾರಿಗಳಿಗೆ ₹10,000 ಕೋಟಿ ಖರ್ಚಾದರೂ ರಸ್ತೆ, ಚರಂಡಿ ಏಕೆ ಹಾಳಾಗಿದೆ? ನಮ್ಮ ನಗರ ಅಥವಾ ನಮ್ಮ ವಾರ್ಡ್‌ಗಳ ರಸ್ತೆಗಳು, ಚರಂಡಿಗಳು ಮತ್ತು ನಾಗರಿಕ ಸೌಕರ್ಯಗಳ ನಿರ್ವಹಣೆಗಾಗಿ ವರ್ಷಕ್ಕೊಂದು ₹10,000 ಕೋಟಿ ಖರ್ಚಾಗುತ್ತಿದೆ ಎಂದು ನಂಬಬಹುದಾ? ಈ ಹೊತ್ತು ನಾವು ನಡೆಯುವ ರಸ್ತೆಯ ಸ್ಥಿತಿ ನೋಡಿದರೆ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬ ಪ್ರಶ್ನೆ ಯಾರಿಗಾದರೂ ಬರುತ್ತದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಎಷ್ಟು ಮಳೆಗಾಲ ಬಂದು ಹೋದರು, ಸಿದ್ಧವಾಗದ ಬಿಬಿಎಂಪಿ: ತೆರಿಗೆ ಕಟ್ಟಿಯೂ ಜನರಿಗೆ ತಪ್ಪದ ಸಮಸ್ಯೆ
“ಇಷ್ಟು ಹಣ ಖರ್ಚಾದರೂ ಸೌಕರ್ಯಗಳು ಹಾಳಾಗಿರುವುದು ಯಾಕೆ? ನಾವು ಪರಿಹರಿಸಬೇಕಾದ ನಿಜವಾದ ಸಮಸ್ಯೆ ಎಂದರೆ ಪಾರದರ್ಶಕತೆ, ನಾಗರಿಕರ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆ. ಪ್ರತಿ ವರ್ಷ ಅನುಮೋದನೆ ಪಡೆಯುತ್ತಿರುವ ಎಲ್ಲಾ ಯೋಜನೆಗಳ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಈ ಯೋಜನೆಗಳಲ್ಲಿ ಹೆಚ್ಚಿನವು ವಾರ್ಡ್‌ಗೆ ಹಂಚಿಕೆಯಾಗಿರುತ್ತವೆ ಮತ್ತು ವಿವಿಧ ವಾರ್ಡ್‌ಗಳ ನಾಗರಿಕರು ಈ ಯೋಜನೆಗಳನ್ನು ನಿರ್ಧರಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಭಾಗಿಯಾಗಬೇಕು” ಎಂದು ಆಗ್ರಹಿಸಿದೆ.
“ಗುತ್ತಿಗೆದಾರರು ಅದೇ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಯೋಜನೆಗೆ ಟೆಂಡರ್ ಪ್ರಕ್ರಿಯೆಯು ಸಾರ್ವಜನಿಕರಿಗೆ ಲಭ್ಯವಿರಬೇಕು. ಇಲ್ಲಿ ಪ್ರಶ್ನೆ ಎಷ್ಟು ಹಣ ಬಜೆಟ್‌ನಲ್ಲಿ ಮೀಸಲಾಗುತ್ತಿದೆ ಎಂಬುದಲ್ಲ, ಅದನ್ನು ನಾಗರಿಕರ ಪಾಲ್ಗೊಳ್ಳುವಿಕೆಯಿಂದ ಎಷ್ಟು ಸುಪ್ತವಾಗಿ, ಜವಾಬ್ದಾರಿಯುತವಾಗಿ ಬಳಸಲಾಗುತ್ತಿದೆ ಎಂಬುದಾಗಿದೆ” ಎಂದು ತಿಳಿಸಿದೆ.
“ಬೆಂಗಳೂರು ನವನಿರ್ಮಾಣ ಪಕ್ಷ (ಬೆನಪ) 2015-2020 ಬಿಬಿಎಂಪಿ ಕೌನ್ಸಿಲ್ ಅವಧಿಯಲ್ಲಿ 63,629 ವಾರ್ಡ್ ಮಟ್ಟದ ಯೋಜನೆಗಳ ಮಾಹಿತಿಯನ್ನು (₹21,653 ಕೋಟಿ ಮೌಲ್ಯದ) ಬಿಬಿಎಂಪಿಯಿಂದ ಸಂಗ್ರಹಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರತಿ ಯೋಜನೆಯ ವಿವರವನ್ನು ವರ್ಷವಾರು ಪ್ರಕಟಿಸಿದೆ. ಬಿಬಿಎಂಪಿ ಇದೇ ರೀತಿ ಎಲ್ಲಾ ಯೋಜನೆಗಳ ವಿವರವನ್ನು ಬಹಿರಂಗಪಡಿಸಬಲ್ಲದೆ” ಎಂದು ಬಿಎನ್‌ಪಿ ಪ್ರಶ್ನಿಸಿದೆ.
