ಬಿಬಿಎಂಪಿ ಬಜೆಟ್ | ಹಣ ಹೆಚ್ಚಾದರೂ ಬೆಂಗಳೂರು ಸ್ಥಿತಿ ಬದಲಾವಣೆ ಯಾವಾಗ: ಬಿಎನ್‌ಪಿ ಪ್ರಶ್ನೆ

Date:

2025-26ರ ಸಾಲಿನ ಬಿಬಿಎಂಪಿ ಬಜೆಟ್ ಅನ್ನು ಘೋಷಿಸಲಾಗಿದ್ದು, ಈ ಬಜೆಟ್ ಬಗ್ಗೆ ಬೆಂಗಳೂರು ನವನಿರ್ಮಾಣ ಪಕ್ಷ (ಬಿಎನ್‌ಪಿ) ಪ್ರತಿಕ್ರಿಯಿಸಿದೆ. “ಈ ಬಾರಿ ಬಜೆಟ್ ಹೆಚ್ಚಳವಾಗಿದ್ದರೂ ಬೆಂಗಳೂರು ನಗರದ ಸ್ಥಿತಿ ಬದಲಾವಣೆ ಯಾವಾಗ” ಎಂದು ಬಿಎನ್‌ಪಿ ಪ್ರಶ್ನಿಸಿದೆ.

- Advertisement -

“ಬಿಬಿಎಂಪಿ 19,927 ಕೋಟಿ ರೂಪಾಯಿ ಬಜೆಟ್ ಘೋಷಿಸಿದ್ದು, 2024-25ನೇ ಸಾಲಿನ 2,371 ಕೋಟಿ ರೂಪಾಯಿ ಬಜೆಟ್‌ಗೆ ಹೋಲಿಸಿದರೆ ಶೇಕಡ 60ರಷ್ಟು ಭಾರೀ ಹೆಚ್ಚಳವಾಗಿದೆ. ನಿಜಕ್ಕೂ ಇದು ಎಲ್ಲಾ ಬೆಂಗಳೂರು ನಿವಾಸಿಗಳಿಗೆ ಸಂತೋಷದ ವಿಚಾರ” ಎಂದು ಬಿಎನ್‌ಪಿ ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಇದನ್ನು ಓದಿದ್ದೀರಾ? ಮಾರ್ಚ್‌ನಲ್ಲಿ ಬಿಬಿಎಂಪಿ ಬಜೆಟ್ ಮಂಡನೆ ಸಾಧ್ಯತೆ

“ಕಳೆದ ವರ್ಷ ಸಾರ್ವಜನಿಕ ಕಾಮಗಾರಿಗಳಿಗೆ ₹7,280 ಕೋಟಿ ಮೀಸಲಿಡಲಾಗಿದ್ದು ಈ ವರ್ಷ ₹12,952 ಕೋಟಿಯಷ್ಟು ಹೆಚ್ಚಿನ ಹಣ ಹಂಚಿಕೆಯಾಗಿದೆ. ಕಳೆದ ವರ್ಷ ಘನತ್ಯಾಜ್ಯ ನಿರ್ವಹಣೆಗೆ ₹1,952 ಕೋಟಿ ಹಂಚಿಕೆಯಾಗಿದ್ದು, ಈ ವರ್ಷ ₹1,400 ಕೋಟಿಯಷ್ಟು ನೀಡಲಾಗಿದೆ. ಆದರೆ ಇವೆಲ್ಲವುದರ ಹೊರೆಯನ್ನು ಜನರ ಮೇಲೆ ಹಾಕುವ ಯತ್ನಿಸಲಾಗುತ್ತಿದೆ” ಎಂದು ಬಿಎನ್‌ಪಿ ಆರೋಪಿಸಿದೆ.

“ಬಿಬಿಎಂಪಿ ನಾಗರಿಕರಿಂದ ಬಳಕೆ ದರ (user fee) ವಸೂಲಿ ಮಾಡಲು ಯೋಚಿಸುತ್ತಿದೆ. ಕಸ ಸ್ವಚ್ಛ ಮಾಡುವ ಕಾರ್ಮಿಕರು ಸರಿಯಾದ ಸಂಬಳಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ₹1,500-2,000 ಕೋಟಿ ಘನತ್ಯಾಜ್ಯ ನಿರ್ವಹಣೆಗೆ ₹1,500 – 2,000 ಕೋಟಿ ಖರ್ಚು ಮಾಡಲಾಗಿದ್ದರೂ, ಬಿಬಿಎಂಪಿ ನಾಗರಿಕರ ಮೇಲೆ ಬಳಕೆ ದರ ಹೇರಲು ಯತ್ನಿಸುತ್ತಿದೆ. ಇನ್ನೊಂದೆಡೆ, ಕಾರ್ಮಿಕರಿಗೆ ಸೂಕ್ತ ಸಂಬಳ ಕೊಡುತ್ತಿಲ್ಲ. ಹಣ ಹೋದದು ಎಲ್ಲಿಗೆ? ಈ ಸಮಸ್ಯೆಗೆ ಉತ್ತರ ಯಾರು ನೀಡಬೇಕು” ಎಂದು ಬೆಂಗಳೂರು ನವನಿರ್ಮಾಣ ಪಕ್ಷ ಪ್ರಶ್ನಿಸಿದೆ.

“ಸಾರ್ವಜನಿಕ ಕಾಮಗಾರಿಗಳಿಗೆ ₹10,000 ಕೋಟಿ ಖರ್ಚಾದರೂ ರಸ್ತೆ, ಚರಂಡಿ ಏಕೆ ಹಾಳಾಗಿದೆ? ನಮ್ಮ ನಗರ ಅಥವಾ ನಮ್ಮ ವಾರ್ಡ್‌ಗಳ ರಸ್ತೆಗಳು, ಚರಂಡಿಗಳು ಮತ್ತು ನಾಗರಿಕ ಸೌಕರ್ಯಗಳ ನಿರ್ವಹಣೆಗಾಗಿ ವರ್ಷಕ್ಕೊಂದು ₹10,000 ಕೋಟಿ ಖರ್ಚಾಗುತ್ತಿದೆ ಎಂದು ನಂಬಬಹುದಾ? ಈ ಹೊತ್ತು ನಾವು ನಡೆಯುವ ರಸ್ತೆಯ ಸ್ಥಿತಿ ನೋಡಿದರೆ ಹಣ ಎಲ್ಲಿ ಖರ್ಚಾಗುತ್ತಿದೆ ಎಂಬ ಪ್ರಶ್ನೆ ಯಾರಿಗಾದರೂ ಬರುತ್ತದೆ” ಎಂದು ಹೇಳಿದೆ.

ಇದನ್ನು ಓದಿದ್ದೀರಾ? ಎಷ್ಟು ಮಳೆಗಾಲ ಬಂದು ಹೋದರು, ಸಿದ್ಧವಾಗದ ಬಿಬಿಎಂಪಿ: ತೆರಿಗೆ ಕಟ್ಟಿಯೂ ಜನರಿಗೆ ತಪ್ಪದ ಸಮಸ್ಯೆ

“ಇಷ್ಟು ಹಣ ಖರ್ಚಾದರೂ ಸೌಕರ್ಯಗಳು ಹಾಳಾಗಿರುವುದು ಯಾಕೆ? ನಾವು ಪರಿಹರಿಸಬೇಕಾದ ನಿಜವಾದ ಸಮಸ್ಯೆ ಎಂದರೆ ಪಾರದರ್ಶಕತೆ, ನಾಗರಿಕರ ಭಾಗವಹಿಸುವಿಕೆ ಮತ್ತು ಹೊಣೆಗಾರಿಕೆ. ಪ್ರತಿ ವರ್ಷ ಅನುಮೋದನೆ ಪಡೆಯುತ್ತಿರುವ ಎಲ್ಲಾ ಯೋಜನೆಗಳ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಈ ಯೋಜನೆಗಳಲ್ಲಿ ಹೆಚ್ಚಿನವು ವಾರ್ಡ್‌ಗೆ ಹಂಚಿಕೆಯಾಗಿರುತ್ತವೆ ಮತ್ತು ವಿವಿಧ ವಾರ್ಡ್‌ಗಳ ನಾಗರಿಕರು ಈ ಯೋಜನೆಗಳನ್ನು ನಿರ್ಧರಿಸುವಲ್ಲಿ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಭಾಗಿಯಾಗಬೇಕು” ಎಂದು ಆಗ್ರಹಿಸಿದೆ.

“ಗುತ್ತಿಗೆದಾರರು ಅದೇ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಯೋಜನೆಗೆ ಟೆಂಡರ್ ಪ್ರಕ್ರಿಯೆಯು ಸಾರ್ವಜನಿಕರಿಗೆ ಲಭ್ಯವಿರಬೇಕು. ಇಲ್ಲಿ ಪ್ರಶ್ನೆ ಎಷ್ಟು ಹಣ ಬಜೆಟ್‌ನಲ್ಲಿ ಮೀಸಲಾಗುತ್ತಿದೆ ಎಂಬುದಲ್ಲ, ಅದನ್ನು ನಾಗರಿಕರ ಪಾಲ್ಗೊಳ್ಳುವಿಕೆಯಿಂದ ಎಷ್ಟು ಸುಪ್ತವಾಗಿ, ಜವಾಬ್ದಾರಿಯುತವಾಗಿ ಬಳಸಲಾಗುತ್ತಿದೆ ಎಂಬುದಾಗಿದೆ” ಎಂದು ತಿಳಿಸಿದೆ.

“ಬೆಂಗಳೂರು ನವನಿರ್ಮಾಣ ಪಕ್ಷ (ಬೆನಪ) 2015-2020 ಬಿಬಿಎಂಪಿ ಕೌನ್ಸಿಲ್ ಅವಧಿಯಲ್ಲಿ 63,629 ವಾರ್ಡ್ ಮಟ್ಟದ ಯೋಜನೆಗಳ ಮಾಹಿತಿಯನ್ನು (₹21,653 ಕೋಟಿ ಮೌಲ್ಯದ) ಬಿಬಿಎಂಪಿಯಿಂದ ಸಂಗ್ರಹಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರತಿ ಯೋಜನೆಯ ವಿವರವನ್ನು ವರ್ಷವಾರು ಪ್ರಕಟಿಸಿದೆ. ಬಿಬಿಎಂಪಿ ಇದೇ ರೀತಿ ಎಲ್ಲಾ ಯೋಜನೆಗಳ ವಿವರವನ್ನು ಬಹಿರಂಗಪಡಿಸಬಲ್ಲದೆ” ಎಂದು ಬಿಎನ್‌ಪಿ ಪ್ರಶ್ನಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಗತಿಕ ಕೌಶಲ್ಯ ರಾಜಧಾನಿಯಾಗುವತ್ತ ಕರ್ನಾಟಕದ ದಿಟ್ಟ ಹೆಜ್ಜೆ: ನ. 3ರಿಂದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’

"ಕೃತಕ ಬುದ್ಧಿಮತ್ತೆ (AI) ಹಾಗೂ ಹೊಸ ತಂತ್ರಜ್ಞಾನಗಳಿಂದ ಕೌಶಲ್ಯ ಕ್ಷೇತ್ರವು ಅತಿವೇಗವಾಗಿ...

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನ’ ಆಚರಣೆ

ಜಗತ್ತಿನ ಯಾವುದೇ ಭಾಷೆಯನ್ನು ಬ್ಯಾರಿ ಸಮುದಾಯದ ಮಕ್ಕಳು ಕಲಿಯಲಿ. ಆದರೆ, ಮನೆಯಲ್ಲಿ...

ಬೆಂಗಳೂರು | ಅಕ್ರಮವಾಗಿ ಮನೆ ನೆಲಸಮ: 5 ಲಕ್ಷ ನಗದು, ಆಭರಣ ಕಳವು; ಇಬ್ಬರ ವಿರುದ್ಧ ಎಫ್‌ಐಆರ್

67 ವರ್ಷದ ವೃದ್ಧ ವ್ಯಾಪಾರಿಯೊಬ್ಬರ ಮನೆಯನ್ನು ಅಕ್ರಮವಾಗಿ ಧ್ವಂಸಗೊಳಿಸಿ, ರೂ. 5...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...