ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ತಂಡವು 6 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ. ಆ ಮೂಲಕ ತವರಲ್ಲಿ ಸೋಲಿನ ಸುಳಿಯಿಂದ ಪಾರಾಗುವಲ್ಲಿ ವಿಫಲವಾಗಿದೆ.
ಗೆಲ್ಲಲು ಕೇವಲ 164 ರನ್ಗಳ ಗುರಿಯನ್ನು ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಕೆ ಎಲ್ ರಾಹುಲ್ ಅವರ ಆಕರ್ಷಕ ಅರ್ಧಶತಕ (93 ರನ್) ನೆರವಿನಿಂದ 4 ವಿಕೆಟ್ಗಳಿಂದ ಗೆದ್ದು ಬೀಗಿತು.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ ದಿಢೀರ್ ಕುಸಿತದ ಪರಿಣಾಮವಾಗಿ ಕೇವಲ 164 ರನ್ಗಳನ್ನು ಕಲೆ ಹಾಕಿತ್ತು. ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ತಲುಪಿತು. ಆರ್ಸಿಬಿ ತಂಡವು ತನ್ನ ತವರಲ್ಲೇ ಎರಡನೇ ಸೋಲು ಅನುಭವಿಸಿತು.
ವಿಶೇಷವೆಂದರೆ, ಆರ್ಸಿಬಿ vs ಡಿಸಿ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಬರೋಬ್ಬರಿ 9 ವರ್ಷಗಳ ನಂತರ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅರ್ಧ ಶತಕ ಬಾರಿಸಿದ್ದಾರೆ. ಹೌದು, ಕನ್ನಡದ ಈ ಹುಡುಗ ಬೆಂಗಳೂರಿನಲ್ಲಿ 9 ವರ್ಷಗಳ ಬಳಿಕ ಅರ್ಧ ಶತಕವೊಂದನ್ನು ದಾಖಲಿಸಿದ್ದು, ಈ ಅರ್ಧ ಶತಕ ಆರ್ಸಿಬಿ ವಿರುದ್ಧ ಬಂದಿರುವುದು ವಿಶೇಷ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿ ಮಿಂಚಿದರು. ಅವರ ಈ ಅದ್ಭುತ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರು ವಿಕೆಟ್ ಗಳಿಂದ ಜಯ ಸಾಧಿಸಿತು. ರಾಹುಲ್ ಅವರ ಈ ಇನ್ನಿಂಗ್ಸ್ ವಿಶೇಷವಾಗಿತ್ತು. ಏಕೆಂದರೆ ಇದು ಒಂಬತ್ತು ವರ್ಷಗಳ ನಂತರ ಬೆಂಗಳೂರಿನಲ್ಲಿ ಅವರು ಗಳಿಸಿದ ಮೊದಲ ಅರ್ಧ ಶತಕವಾಗಿತ್ತು.
ಈ ಹಿಂದೆ ಕೆಎಲ್ ರಾಹುಲ್ ಅವರು ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 50+ ರನ್ ಗಳಿಸಿದ್ದರು. ಆದರೆ, ತವರಿನ ಅಂಗಳದಲ್ಲಿ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ಬಾರಿ ಅವರು ಅದ್ಭುತ ಫಾರ್ಮ್ನಲ್ಲಿದ್ದು, ಡೆಲ್ಲಿ ತಂಡವು ಈ ಸೀಸನ್ನಲ್ಲಿ ನಾಲ್ಕನೇ ಗೆಲುವು ಸಾಧಿಸಲು ಪ್ರಮುಖ ಕಾರಣರಾದರು.
ಆರ್ಸಿಬಿ ನೀಡಿದ್ದ 164 ರನ್ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ, ಆರಂಭದಲ್ಲೇ ಆಘಾತ ಎದುರಾಯಿತು. ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್ಗುರ್ಕ್ ಮತ್ತು ಅಭಿಷೇಕ್ ಪೊರೆಲ್ ಬೇಗನೆ ಔಟಾದರು. ನಂತರ ಕೆಎಲ್ ರಾಹುಲ್ ಅವರು ಜವಾಬ್ದಾರಿಯನ್ನು ತೆಗೆದುಕೊಂಡು, ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಟ್ರಿಸ್ಟಾನ್ ಸ್ಟಬ್ಸ್ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅವರಿಗೆ ಉತ್ತಮ ಬೆಂಬಲ ನೀಡಿದರು.