ದುಷ್ಕರ್ಮಿಗಳ ಗುಂಪೊಂದು ಮುಸ್ಲಿಮ್ ಸಮುದಾಯದ ಧಾರ್ಮಿಕ ಉಡುಪುಗಳು ಮತ್ತು ಮಹಿಳೆಯರ ಉಡುಗೆಗಳನ್ನು ಧರಿಸಿ ಧಾರ್ಮಿಕ ಅಪಹಾಸ್ಯ ಮಾಡಿರುವ ಪ್ರಚೋದನಾಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ಘಟನೆ ನಡೆದಿದ್ದು, ಹಿಂದು ಸಮುದಾಯದ ಕೆಲವು ಮಂದಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮುಸ್ಲಿಂ ಸಮುದಾಯವನ್ನು ಅಪಹಾಸ್ಯ ಮಾಡುವ ಉದ್ದೇಶದಿಂದಲೇ ಇಂತಹ ಕೃತ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ವೇಣೂರಿನ ಪುರುಷರಕಟ್ಟೆ ಎಂಬ ಸ್ಥಳದಲ್ಲಿ ದುಷ್ಕರ್ಮಿಗಳು ಮುಸ್ಲಿಂ ಉಡುಪುಗಳು ಮತ್ತು ಮಹಿಳೆಯರ ಉಡುಗೆಗಳನ್ನು ತೊಟ್ಟು ನಿಂದನಾತ್ಮಕವಾಗಿ ನೃತ್ಯ ಮಾಡಿದ್ದಾರೆ. ಧಾರ್ಮಿಕ ಉಡುಪುಗಳನ್ನು ಅಗೌರವ ಮತ್ತು ಅಪಹಾಸ್ಯ ಮಾಡುವ ರೀತಿಯಲ್ಲಿ ಉಡುಪುಗಳನ್ನು ಧರಿಸಿ, ದಾಂಧಲೆ ನಡೆಸಿದ್ದಾರೆ. ಅಲ್ಲದೇ, ವಿಡಿಯೋದಲ್ಲಿ ಎಸ್‌ಡಿಪಿಐ ಪಕ್ಷದ ಧ್ವಜವೊಂದನ್ನು ಯುವಕನೋರ್ವ ಕೈಯ್ಯಲ್ಲಿ ಹಿಡಿದಿರುವುದು ಕಂಡು ಬಂದಿದೆ.
In #Belthangady's #Venur, individuals dressed in #Muslim religious and women's attire performed a dance with the intent to insult the Muslim community.
— Hate Detector 🔍 (@HateDetectors) April 15, 2025
At a #Hindu traditional event held in a place called #Purusharakatte, miscreants misused the occasion. A video shows them… pic.twitter.com/zYvR5TW0kq
ಘಟನೆಯ ಬಗ್ಗೆ ಈದಿನ.ಕಾಮ್ಗೆ ಪ್ರತಿಕ್ರಿಯಿಸಿರುವ ವೇಣೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್, “ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೃತ್ಯ್ಯ ನಡೆದಿದೆ ಎಂಬುದಾಗಿ ದೂರು ಬಂದಿದೆ. ಆದರೆ, ಪ್ರತಿ ವರ್ಷವೂ ಪುರುಷಕಟ್ಟೆ ಪೂಜೆಯ ವೇಳೆ ನಾನಾ ರೀತಿಯ ವೇಷ ಧರಿಸಿ ನೃತ್ಯ ಮಾಡಲಾಗುತ್ತದೆ. ಈ ಬಾರಿ ಬುರ್ಖಾವನ್ನೂ ಹಾಕಲಾಗಿದೆ. ದೂರು ದಾಖಲಿಸಿಕೊಂಡಿದ್ದು, ಎಡಿಸಿ ಅಭಿಪ್ರಾಯಕ್ಕಾಗಿ ಪತ್ರ ಬರೆದಿದ್ದೇವೆ. ಎಡಿಸಿಯಿಂದ ಪ್ರತಿಕ್ರಿಯೆ ಬಂದ ಬಳಿಕ, ಅದರ ಅನುಸಾರ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.