ಗಾಜಾ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿದ್ದು, ಕಳೆದ 48 ಗಂಟೆಗಳಲ್ಲಿ ಮಕ್ಕಳು ಸೇರಿದಂತೆ 90ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಾಜಾದಲ್ಲಿ ಜನರು ಆಶ್ರಯ ಪಡೆದಿದ್ದ ನೆಲೆಯ ಮೇಲೆ ಇಸ್ರೇಲ್ ಬಾಂಬ್ ದಾಳಿ ಮಾಡಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಹಲವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ನಗರ ಖಾನ್ ಯೂನಿಸ್‌ನ ಮವಾಸಿ ಪ್ರದೇಶದ ಟೆಂಟ್‌ನಲ್ಲಿ ಪ್ಯಾಲೆಸ್ತೀನಿಯರು ವಾಸವಿದ್ದರು. ಈ ಪ್ರದೇಶವನ್ನು ಮಾನವೀಯ ವಲಯವೆಂದು ಇಸ್ರೇಲ್ ಗುರುಸಿತ್ತು. ಆ ನೆಲೆಯ ಮೇಲೆ ಕಳೆದ ಎರಡು ದಿನಗಳಿಂದ ಇಸ್ರೇಲ್ ದಾಳಿ ನಡೆಸಿದೆ.
ಗಾಜಾ ಪಟ್ಟಿಯನ್ನು ವಶಕ್ಕೆ ಪಡೆಯಲು ಹವಣಿಸುತ್ತಿರುವ ಇಸ್ರೇಲ್, ಪದೇ ಪದೇ ದಾಳಿ ನಡೆಸಲಸುತ್ತಿದೆ. ಇಸ್ರೇಲ್ ಆಕ್ರಮಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ನೀಡುತ್ತಿದ್ದಾರೆ.
ಇಸ್ರೇಲ್ ಯುದ್ಧ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಒತ್ತಡ ಹೇರುತ್ತಲೇ ಬಂದಿದ್ದರೂ, ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ. ಬದಲಿಗೆ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದೆ.