ಬೀದರ್‌ | ದೇಶದ ಸಂಸ್ಕೃತಿಗೆ, ಅಭಿವೃದ್ಧಿಗೆ ಅಲೆಮಾರಿ ಸಮುದಾಯದ ಕೊಡುಗೆ ಅಪಾರ : ಪಲ್ಲವಿ.ಜಿ

Date:

ನಮ್ಮ ದೇಶದ ಸಾಂಸ್ಕೃತಿಕ ವೈಭವದಲ್ಲಿ, ಜನಜೀವನದಲ್ಲಿ, ಅಭಿವೃದ್ಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಜನಾಂಗಗಳ ಕೊಡುಗೆ ಸ್ಮರಣೀಯವಾದುದಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ ಹೇಳಿದರು.

- Advertisement -

ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼಬೀದರ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಸಮುದಾಯಗಳ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯಗಳುʼ ಕುರಿತಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ʼವಿದ್ಯಾವಂತರಾದವರು ತಳವರ್ಗದ, ಅಲೆಮಾರಿಗಳ ಚಿಂತನೆ ಮಾಡಬೇಕು. ಧ್ವನಿಯಿಲ್ಲದವರಿಗೆ ಅವಕಾಶ ವಂಚಿತರಿಗೆ ಅವಕಾಶ ನೀಡುವ ಮನಸ್ಸು ಮಾಡಬೇಕು. ಸಮಾಜ ಕಲ್ಯಾಣವೆಂದರೆ ಜನರ ಕಲ್ಯಾಣ, ಸಮುದಾಯದ ಕಲ್ಯಾಣ. ಹೀಗಾಗಿ ಮೂಲನಿವಾಸಿಗಳಾದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲೆಮಾರಿಗಳ ಕುರಿತು ಅಧ್ಯಯನ ಕೈಗೊಂಡು ಅವರ ವಾಸ್ತವ ಬದುಕಿನ ಬಗ್ಗೆ ಬೆಳಕು ಚೆಲ್ಲಬೇಕಾದ ಅವಶ್ಯಕತೆಯಿದೆʼ ಎಂದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಬಿ.ಎಸ್.ಆನಂದಕುಮಾರ ಏಕಲವ್ಯ ಮಾತನಾಡಿ, ʼಅಲೆಮಾರಿಗಳು ಸಾರ್ಥಕ ಬದುಕಿನ ನಿಜವಾದ ರೂವಾರಿಗಳು. ನಾಳಿನ ಬದುಕಿಗಾಗಿ, ಸ್ವಚ್ಛ ಭಾರತದ ನಿಜವಾದ ನಾಗರೀಕರು. ಅವರು ತಮ್ಮ ಉಪಜೀವನಕ್ಕಾಗಿ ಹಾವು, ಕೋತಿ, ಕರಡಿ ಆಡುಸುತ್ತಾ ಸಮಾಜದ ಸ್ವಾಸ್ಥಕ್ಕಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಪ್ರಾಂಜಲಭಾವದ ಕಾಯಕಜೀವಿಗಳು. ಅವರು ಸ್ವಂತ ಸೂರಿಲ್ಲದೇ ನಿರಂತರ ಸಂಚರಿಸಿ ತಾವು ಪಟ್ಟ ಪಾಡೇ ದೇಶಕ್ಕೆ ಹಾಡಾಗಿಸಿದರು. ಅತ್ಯಂತ ಕಠಿಣ ಕೆಲಸಗಳನ್ನು ಈ ಅಲೆಮಾರಿ, ಬುಡಕಟಡ್ಟು ಜನಾಂಗದಿಂದಲೇ ಅಂದಿನ ಆಡಳಿತವರ್ಗ ಮಾಡಿಸಿತುʼ ಎಂದರು.

ʼಅಲೆಮಾರಿಗಳು ಪ್ರಕೃತಿಯ ಆರಾಧಕರು. ಪ್ರಕೃತಿಯೊಂದಿಗೆ ಮಾತಾಡುವವರು. ಅರಣ್ಯದ ಹಕ್ಕನ್ನು ನಿಷೇಧ ಮಾಡಿದಾಗ ಅವರು ಅರಣ್ಯವನ್ನು ತೊರೆದು ದೊಂಬರಾಟ, ದುರುಗಮುರುಗಿ ಮುಂತಾದ ಕಾಯಕದಲ್ಲಿ ತಮ್ಮನ್ನು ಗುರುತಿಸಿಕೊಂಡು ಬಾಳಿದರು. ಇಂದು ಅಲೆಮಾರಿ ಬದುಕು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಮೂರಾಬಟ್ಟೆಯಾಗಿದೆ. ಅವರು ತಯಾರಿಸುವ ವಸ್ತುಗಳ ಸ್ಥಾನದಲ್ಲಿ ಇಂದು ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ವಸ್ತುಗಳು ಆವರಿಸಿವೆ. ಹೀಗಾಗಿ ಅಲೆಮಾರಿಗಳ ಅಭಿವೃದ್ಧಿ, ಅವರ ಬದುಕು ಕಟ್ಟಿಕೊಡುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ, ಸಹಕಾರಿಯಾಗಬೇಕುʼ ಎಂದರು.

ಬೀದರ್ ವಿವಿ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ, ʼಅಲೆಮಾರಿ ಜನಾಂಗ ಧ್ವನಿಯಿಲ್ಲದ, ಶಕ್ತಿಯಿಲ್ಲದ ಜನಾಂಗ. ಬಡವರ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಇಂದಿಗೂ ನಿರ್ಲಕ್ಷ್ಯಕ್ಕೊಳಗಾದ ಅಲೆಮಾರಿ ಸಮುದಾಯ ನಿರಂತರ ಸಂಚಾರದಿಂದಾಗಿ ಜನಸಂಖ್ಯಾ ಗಣತಿಯಲ್ಲಿ, ಆಧಾರನಲ್ಲಿಯೂ ವಿಳಾಸ ಸಿಗದಷ್ಟು ನತದೃಷ್ಟರಾಗಿದ್ದಾರೆ. ಅವರ ಜೀವನ ನಿಜವಾಗಿಯೂ ಶೋಚನೀಯ. ಅಂತಹ ನಿರ್ಲಕ್ಷಿತರ ಸಬಲೀಕರಣಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆʼ ಎಂದರು.

ಬೀದರ ವಿವಿ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಮಾತನಾಡಿ, ʼದೇಶದ ಉದ್ಧಾರವೆಂದರೆ ಎಲ್ಲರ ಜೀವನಮಟ್ಟ ಸುಧಾರಣೆಯಾಗಬೇಕು. ಅಲೆಮಾರಿಗಳ, ತಳವರ್ಗದ ಜನರೆಲ್ಲ ಮುಖ್ಯವಾಹಿನಿಗೆ ತರಬೇಕಾದ ಅವಶ್ಯಕತೆಯಿದೆʼ ಎಂದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಏ.30ರಂದು ಬಸವ ಜಯಂತಿ : ವಚನಗಳ ಕಿರುಪುಸ್ತಕ ಹಂಚಲು ನಿರ್ಧಾರ

ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀನಾಗಭೂಷಣ ಕಮಠಾಣೆ, ಶಾಂತಲಿಂಗ ಸಾವಳಗಿ, ಸಚಿನ್ ಶಿವರಾಜ, ವಿಠ್ಠಲದಾಸ ಪ್ಯಾಗೆ, ಅಬ್ದುಲ್ ಸತ್ತಾರಸಾಬ, ವೈಷ್ಣವಿ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಸಿಂಧು, ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರನಾಯ್ಕ.ಟಿ., ಬೀದರ ವಿವಿ ವಿಶೇಷಾಧಿಕಾರಿ ಡಾ.ರವೀಂದ್ರನಾಥ ವಿ.ಗಬಾಡಿ, ಬೀದರ ಹಾಗೂ ವಿವಿಧ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಬೀದರ್‌ | ಬರದಲ್ಲೂ ಪಪ್ಪಾಯಿ ಬೆಳೆದು ₹25 ಲಕ್ಷ ಗಳಿಕೆ: ರೈತ ವೆಂಕಟರೆಡ್ಡಿ ತೋಟಕ್ಕೆ ಶಾಸಕರ ಭೇಟಿ

ಬರ ಪರಿಸ್ಥಿತಿಯ ನಡುವೆಯೂ ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...