ಪಾಕಿಸ್ತಾನದ ಪ್ರಜೆಗಳ 14 ರೀತಿಯ ವೀಸಾಗಳು ರದ್ದು: ಯಾರು, ಯಾವಾಗ ದೇಶದಿಂದ ಹೊರಹೋಗಬೇಕು?

Date:

Advertisements

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಉದ್ವಿಗ್ನ ಸ್ಥಿತಿಗೆ ತಲುಪಿದೆ. ಭಾರತ ಶುಕ್ರವಾರ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ತಕ್ಷಣದಿಂದ ರದ್ದು ಮಾಡಲಾಗುತ್ತದೆ ಎಂದು ಘೋಷಿಸಿದೆ. ಇದರಿಂದಾಗಿ ದೀರ್ಘಾವಧಿಯ, ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳನ್ನು ಹೊರತುಪಡಿಸಿ ಉಳಿದವರಿಗೆ ನೀಡಲಾದ ಎಲ್ಲಾ ಮಾನ್ಯ ವೀಸಾಗಳು ರದ್ದಾಗಲಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಸುಮಾರು 28ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಇದಾದ ಬೆನ್ನಲ್ಲೇ ಉಭಯ ದೇಶಗಳ ನಡುವೆ ಉದ್ವಿಗ್ನತೆ ಇನ್ನಷ್ಟೂ ಹೆಚ್ಚಾಗಿದೆ.

ಇದನ್ನು ಓದಿದ್ದೀರಾ? ಪಹಲ್ಗಾಮ್ ಉಗ್ರರ ದಾಳಿ: ಪ್ರತೀಕಾರ ತೀರಿಸಿಕೊಳ್ಳದೆ ಬಿಡಲ್ಲ ಎಂದ ಪ್ರಧಾನಿ ಮೋದಿ

Advertisements

ಈ ದಾಳಿಗೆ ಪ್ರತಿಕ್ರಿಯೆ ಎಂಬಂತೆ ಸರ್ಕಾರವು ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಹೆಚ್ಚಿನ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಸಾರ್ಕ್ ವೀಸಾಗಳು ಏಪ್ರಿಲ್ 26ರಂದು ಮುಕ್ತಾಯಗೊಳ್ಳಲಿದೆ. ಆದರೆ ವೈದ್ಯಕೀಯ ವೀಸಾಗಳು ಏಪ್ರಿಲ್ 29ರವರೆಗೆ ಮಾನ್ಯವಾಗಿರುತ್ತವೆ.

ಏಪ್ರಿಲ್ 27ರ ನಂತರ ಇತರ ಎಲ್ಲಾ ವರ್ಗಗಳ ವೀಸಾಗಳು ಮಾನ್ಯವಾಗಿರುವುದಿಲ್ಲ. ನಿರ್ದಿಷ್ಟ ಗಡುವಿನೊಳಗೆ ಭಾರತದಿಂದ ನಿರ್ಗಮಿಸಲು ವಿಫಲವಾದ ಯಾವುದೇ ಪಾಕಿಸ್ತಾನಿ ಪ್ರಜೆಯನ್ನು ಅವಧಿ ಮೀರಿ ಭಾರತದಲ್ಲಿ ಉಳಿದ ವಿದೇಶಿ ಪ್ರಜೆ ಎಂದು ಪರಿಗಣಿಸಲಾಗುತ್ತದೆ.

ಸದ್ಯ ಕರ್ನಾಟಕದಲ್ಲಿಯೂ ಈ ಪ್ರಕ್ರಿಯೆ ಆರಂಭಿಸುವ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಅವರು ಮಾಹಿತಿ ನೀಡಿದ್ದಾರೆ. “ಭಾರತ ಸರ್ಕಾರವು ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ವಾಪಸ್ ಕಳುಹಿಸಲು ಸಲಹೆ ನೀಡಿದೆ. ಅದರಲ್ಲಿ ಕೆಲವು ವರ್ಗಗಳನ್ನು ಸಹ ಬಳಸಿದ್ದಾರೆ. ವೀಸಾ ಹೊಂದಿರುವ ಶಾಶ್ವತ ಪಾಕಿಸ್ತಾನಿ ಪ್ರಜೆಗಳು, ಅವರಿಗೆ ವಿನಾಯಿತಿ ನೀಡಲಾಗಿದೆ ಎಂದು ತೋರುತ್ತದೆ. ಇಲ್ಲದಿದ್ದರೆ ಎಲ್ಲರೂ ಹೋಗಬೇಕಾಗುತ್ತದೆ. ಆದ್ದರಿಂದ, ನಾವು ಎಲ್ಲಾ ಎಸ್‌ಪಿಗಳು ಮತ್ತು ಡಿಎಸ್‌ಪಿಗಳಿಗೆ ಅವರನ್ನು ಗುರುತಿಸಿ ತಕ್ಷಣ ಅವರನ್ನು ಹೊರಹೋಗುವಂತೆ ತಿಳಿಸಲು ಸೂಚನೆಗಳನ್ನು ನೀಡಿದ್ದೇವೆ” ಎಂದು ಪರಮೇಶ್ವರ ಅವರು ಹೇಳಿದ್ದಾರೆ. ಹಾಗಾದರೆ ಯಾರು ದೇಶದಿಂದ ಹೊರಗೆ ಹೋಗಬೇಕು ಯಾವಾಗ ಎಂಬ ಬಗ್ಗೆ ತಿಳಿಯೋಣ.

ಇದನ್ನು ಓದಿದ್ದೀರಾ?ಹತ್ಯೆಗೆ ಮುನ್ನ ಹೆಸರು ಕೇಳಿದ್ದೇಕೆ? ಪ್ರವಾಸಿಗರನ್ನೇ ಕೊಂದ ಮರ್ಮವೇನು

ಯಾರು, ಯಾವಾಗ ದೇಶದಿಂದ ಹೋಗಬೇಕು?

  • ಸಾರ್ಕ್ ವೀಸಾ ಇರುವವರು ಏಪ್ರಿಲ್ 26ಕ್ಕೂ ಮುನ್ನ ದೇಶ ಬಿಟ್ಟು ಹೋಗಬೇಕು.
  • ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ನೀಡಲಾಗುವ ಆಗಮನ ವೀಸಾ, ವ್ಯವಹಾರ, ಚಲನಚಿತ್ರ, ಪತ್ರಕರ್ತ, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿ, ಸಂದರ್ಶಕ, ಯಾತ್ರಿಕ, ಗುಂಪು ಪ್ರವಾಸಿ ಮತ್ತು ಗುಂಪು ಯಾತ್ರಿಕ ವೀಸಾಗಳನ್ನು ಹೊಂದಿರುವವರು ಏಪ್ರಿಲ್ 27ರ ಒಳಗಾಗಿ ದೇಶದಿಂದ ಹೊರಹೋಗಬೇಕು.
  • ವೈದ್ಯಕೀಯ ವೀಸಾಗಳನ್ನು ಹೊಂದಿರುವವರು ಏಪ್ರಿಲ್ 29ರ ಒಳಗಾಗಿ ದೇಶ ತೊರೆಯಬೇಕು.
  • ಈ ಆದೇಶ ಹೊರಡಿಸಿದಾಗಿನಿಂದ ಯಾವುದೇ ಪಾಕಿಸ್ತಾನದ ಪ್ರಜೆಗಳಿಗೆ ಹೊಸದಾಗಿ ವೀಸಾವನ್ನು ನೀಡಲಾಗುವುದಿಲ್ಲ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗುವ ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳು ಸದ್ಯಕ್ಕೆ ಮಾನ್ಯವಾಗಿರುತ್ತವೆ.

ಯಾರೆಲ್ಲ ದೀರ್ಘಾವಧಿಯ ವೀಸಾ ಪಡೆಯಲು ಅರ್ಹರು?

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು, ಕ್ರಿಶ್ಚಿಯನ್ನರು ದೀರ್ಘಾವಧಿಯ ವೀಸಾ ಪಡೆಯಲು ಅರ್ಹರಾಗಿದ್ದಾರೆ. ಭಾರತೀಯ ಪ್ರಜೆಗಳನ್ನು ವಿವಾಹವಾಗಿ ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಮಹಿಳೆಯರು, ಪಾಕ್ ರಾಷ್ಟ್ರೀಯತೆಯನ್ನು ಹೊಂದಿರುವ ಭಾರತೀಯ ಮೂಲದ ಮಹಿಳೆಯರು, ಪಾಕಿಸ್ತಾನಿ ಪ್ರಜೆಗಳನ್ನು ವಿವಾಹವಾಗಿ ವಿಧವೆ/ವಿಚ್ಛೇದನದ ಕಾರಣದಿಂದಾಗಿ ಭಾರತಕ್ಕೆ ಮರಳಿದ್ದರೆ, ತೀವ್ರ ಅನುಕಂಪವನ್ನು ಒಳಗೊಂಡ ಪ್ರಕರಣದಲ್ಲಿ ಭಾರತೀಯ ವೀಸಾಗಳನ್ನು ಪಡೆಯಬಹುದು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X