ಐಪಿಎಲ್ 18ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲನುಭವಿಸಿದೆ. ಈ ಸೋಲಿಗೆ ಪ್ರಮುಖ ಕಾರಣ ರಿವ್ಯೂ ತೆಗೆದುಕೊಳ್ಳದಿರುವುದು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 113 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಇದೇ ರಿಂಕು ಸಿಂಗ್ ಕೇವಲ 13 ರನ್ಗಳಿಸಿದಾಗ ಪೆವಿಲಿಯನ್ ಸೇರಬೇಕಿತ್ತು. ಅಕ್ಷರ್ ಪಟೇಲ್ ಎಸೆದ 14ನೇ ಓವರ್‌ನ ನಾಲ್ಕನೇ ಎಸೆತವನ್ನು ಲೆಗ್ ಸೈಡ್ನತ್ತ ಬಾರಿಸಲು ರಿಂಕು ಸಿಂಗ್ ಪ್ರಯತ್ನಿಸಿದರು.
ಆದರೆ ಬ್ಯಾಟ್ನ ಅಂಚಿನಿಂದ ಸಾಗಿದ ಚೆಂಡು ವಿಕೆಟ್ ಕೀಪರ್ ಕೈ ಸೇರಿದೆ. ಇತ್ತ ಚೆಂಡು ಬ್ಯಾಟ್ಗೆ ತಾಗಿದೆಯಾ ಎಂಬ ಸಂಶಯವೊಂದು ಅಕ್ಷರ್ ಪಟೇಲ್ಗೆ ಮೂಡಿತ್ತು. ಆದರೆ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಚೆಂಡು ಬ್ಯಾಟ್ಗೆ ತಾಗಿಲ್ಲ, ಡಿಆರ್ಎಸ್ ತೆಗೆದುಕೊಳ್ಳುವುದು ಬೇಡ ಎಂದರು. ಹೀಗಾಗಿ ಅಕ್ಷರ್ ಪಟೇಲ್ ರಿವ್ಯೂವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಇದು ನನ್ನ ಮೈದಾನ: ಗೆದ್ದ ನಂತರ ಕೆ ಎಲ್ ರಾಹುಲ್‌ಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ!
ಇದಾದ ಬಳಿಕ ತೋರಿಸಲಾದ ರಿಪ್ಲೇನಲ್ಲಿ ರಿಂಕು ಸಿಂಗ್ ಅವರ ಬ್ಯಾಟ್ ಚೆಂಡಿಗೆ ತಗುಲಿರುವುದು ಸ್ಪಷ್ಟವಾಗಿತ್ತು. ಅಲ್ಲದೆ ಅಕ್ಷರ್ ಪಟೇಲ್ ರಿವ್ಯೂ ತೆಗೆದುಕೊಂಡಿದ್ದರೆ, ಮೂರನೇ ಅಂಪೈರ್ ಔಟ್ ನೀಡುತ್ತಿದ್ದರು. ಆದರೆ ಅಭಿಷೇಕ್ ಪೊರೆಲ್ ಅವರ ಅತಿಯಾದ ಆತ್ಮ ವಿಶ್ವಾಸದಿಂದಾಗಿ ರಿಂಕು ಸಿಂಗ್ಗೆ ಜೀವದಾನ ಲಭಿಸಿತು.
13 ರನ್ಗಳಿಸಿದ್ದಾಗ ಸಿಕ್ಕ ಜೀವದಾನವನ್ನು ಬಳಸಿಕೊಂಡ ರಿಂಕು ಸಿಂಗ್ 25 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 3 ಬೌಂಡರಿ 35 ರನ್ ಕಲೆಹಾಕಿದರು. ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಜೀವದಾನದಿಂದಾಗಿ ರಿಂಕು ಸಿಂಗ್ ಹೆಚ್ಚುವರಿ 22 ರನ್ ಗಳಿಸಿದ್ದರು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಕೋರ್ 200ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು.
ಅದರಂತೆ 205 ರನ್ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 190 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 14 ರನ್ಗಳಿಂದ ಸೋಲೊಪ್ಪಿಕೊಂಡಿತು. ಅಂದರೆ ಇಲ್ಲಿ ರಿಂಕು ಸಿಂಗ್ ಗಳಿಸಿದ ಹೆಚ್ಚುವರಿ 22 ರನ್ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ದುಬಾರಿಯಾಗಿ ಪರಿಣಮಿಸಿ ಸೋಲಿಗೆ ಕಾರಣವಾಯಿತು.
No Sportsman Spirit from Rinku Singh 😡
— Niharika Fraser Stubbs (@McGurk_Tristan) April 29, 2025
Rinku was clearly OUT, he must have felt it on his bat, yet he shamelessly stood there after appeal, Axar Patel missed the review because Porel couldn’t convince him 💔 Not everyone is ABD
Some people deserve to be Gaarib forever #DCvKKR pic.twitter.com/SgKJ4dF4qt