ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್‌ ಅಗರ್ಕರ್‌ ನೇಮಕ; ಅನುಭವಗಳ ನಡುವೆ ಹಲವು ಸವಾಲುಗಳು?

Date:

Advertisements

ಐದು ತಿಂಗಳ ನಂತರ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕೊನೆಗೂ ಹಿರಿಯರ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಆಲ್‌ರೌಂಡರ್‌ ಅಜಿತ್‌ ಅಗರ್ಕರ್‌ ಅವರನ್ನು ನೇಮಕ ಮಾಡಿದೆ.

ಚೇತನ್‌ ಶರ್ಮಾ ಈ ವರ್ಷದ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ ನಂತರ ಐದು ತಿಂಗಳಿಂದ ಆಯ್ಕೆ ಸಮಿತಿ ಅಧ್ಯಕ್ಷರ ಸಮಿತಿ ಖಾಲಿಯಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿದ ಹಲವಾರು ಆಟಗಾರರಿದ್ದರೂ ಸಮಿತಿಗೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ. ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಅಕ್ಟೋಬರ್‌-ನವೆಂಬರ್‌ ತಿಂಗಳಿನಲ್ಲಿ ಭಾರತದಲ್ಲೇ ನಡೆಯುವ ಕಾರಣ ಅಜಿತ್‌ ಅಗರ್ಕರ್‌ ನೇಮಕ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್ ಸದ್ಯಸರಾಗಿರುವ ಆಯ್ಕೆ ಸಮಿತಿಯಲ್ಲಿ ಶಿವಸುಂದರ್ ದಾಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಲಕ್ಷಣ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅಭ್ಯರ್ಥಿಗಳ ಸಂದರ್ಶನ ನಡೆಸಿದ ಬಳಿಕ ಅಜಿತ್ ಅಗರ್ಕರ್ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ನೇಮಿಸಲಾಗಿದೆ.

Advertisements

2020ರಲ್ಲಿ ಕೂಡ ಅಗರ್ಕರ್ ಅವರು ಆಯ್ಕೆಗಾರರ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ ಮಾಜಿ ಎಡಗೈ ಸ್ಪಿನ್ನರ್ ಕನ್ನಡಿಗ ಸುನಿಲ್ ಜೋಶಿ ಅವರನ್ನು ಬಿಸಿಸಿಐ ಮುಖ್ಯ ಆಯ್ಕೆಗಾರರನ್ನಾಗಿ ನೇರ ನೇಮಕಾತಿಗೊಳಿಸಲು ನಿರ್ಧರಿಸಿದ ನಂತರ ಉಳಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರಲಿಲ್ಲ. ಈಗ ಮಾಜಿ ಆಲ್‌ರೌಂಡರ್‌ ಅಜಿತ್‌ ಅಗರ್ಕರ್‌ ಅವರನ್ನು ಆಯ್ಕೆ ಮಾಡಿರುವುದಕ್ಕೆ ಪ್ರಮುಖ ಕಾರಣಗಳು ಇಂತಿವೆ.

ಈ ಸುದ್ದಿ ಓದಿದ್ದೀರಾ? ಕೋಟಿ ಕೊಟ್ಟರೂ ಯಾರಿಗೂ ಬೇಡವಾದ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥನ ಸ್ಥಾನ!

ಅತ್ಯಂತ ಕಿರಿಯ ಅಭ್ಯರ್ಥಿ

ಹಿಂದೆ ಆಯ್ಕೆಯಾಗಿರುವ ಆಯ್ಕೆ ಸಮಿತಿಯ ಮುಖ್ಯಸ್ಥರಿಗೆ ಹೋಲಿಸಿದರೆ ಅಜಿತ್‌ ಅಗರ್ಕರ್‌ ಅತ್ಯಂತ ಕಿರಿಯವರಾಗಿದ್ದಾರೆ. ಸದ್ಯ ಅವರಿಗೆ 45 ವರ್ಷ. ಟಿ20, ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ ಸೇರಿದಂತೆ ಎಲ್ಲ ಮಾದರಿಯಲ್ಲಿ ಆಡಿರುವ ಆಟಗಾರರನ್ನು ಏಕದಿನ ವಿಶ್ವಕಪ್‌ನ ಭಾರತ ತಂಡ ಹಾಗೂ ಇತರ ಸರಣಿಗಳಿಗೆ ನೇಮಕ ಮಾಡಲು ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಬಿಸಿಸಿಐ ಕಿರಿಯ ಅಭ್ಯರ್ಥಿಯನ್ನು ನೇಮಿಸಿದೆ.

ಆಯ್ಕೆ ಸಮಿತಿಯಲ್ಲಿ ಇದ್ದ ಅನುಭವ

ಅಜಿತ್‌ ಅಗರ್ಕರ್ ಆಯ್ಕೆಗಾರರ ಮುಖ್ಯಸ್ಥನಾಗಿ​ ಹುದ್ದೆಗೇರಿದ್ದು ಇದೇ ಮೊದಲಲ್ಲ. 2017 ಮತ್ತು 2019ರಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ 2 ಬಾರಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅನುಭವವನ್ನು ಹೊಂದಿದ್ದಾರೆ. ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಿದ್ದ 2023ರ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸಹಾಯಕ ಕೋಚ್ ಆಗಿದ್ದರು. ಒಂದು ವಾರದ ಹಿಂದಷ್ಟೇ ರಾಜೀನಾಮೆ ನೀಡಿದ್ದರು.

ಹೆಚ್ಚು ಸಂಬಳ ಪಡೆಯುವ ಅಗರ್ಕರ್

ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಗರ್ಕರ್ ಅವರಿಗೆ ಹಿಂದಿನ ಮುಖ್ಯಸ್ಥರಿಗಿಂತ ಹೆಚ್ಚಿನ ಸಂಭಾವನೆ ನೀಡಲಾಗುತ್ತದೆ. ಹಿಂದಿನ ಮುಖ್ಯಸ್ಥರಿಗೆ ವಾರ್ಷಿಕವಾಗಿ 80 ರಿಂದ 1 ಕೋಟಿ ರೂ.ವರೆಗೂ ಸಂಭಾವನೆ ನೀಡಲಾಗುತ್ತಿತ್ತು. ಹಲವು ಅನುಭವ ಹೊಂದಿರುವ ಅಗರ್ಕರ್‌ಗೆ ವಾರ್ಷಿಕ 3 ಕೋಟಿ ರೂ.ಗೆ ಹೆಚ್ಚಿಸಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.

9 ವರ್ಷ ಅನುಭವ, ಹಲವು ಸವಾಲುಗಳು

ಅಜಿತ್‌ ಅಗರ್ಕರ್‌ ತಮ್ಮ 1998 ರಿಂದ 2013ರ ವರೆಗಿನ ಒಂಬತ್ತು ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ 191 ಏಕದಿನ ಪಂದ್ಯ ಹಾಗೂ 26 ಟೆಸ್ಟ್ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇವೆರಡೂ ಮಾದರಿಯಲ್ಲಿ 349 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.  

ಅನುಭವಿ ಕ್ರಿಕೆಟಿಗನಾದ ಅಗರ್ಕರ್, ಆಧುನಿಕ ಕ್ರಿಕೆಟಿನ ಬಗ್ಗೆ ಹೆಚ್ಚು ಜ್ಞಾನ ಹೊಂದಿದ್ದಾರೆ. ಸದ್ಯ ಜಾಗತಿಕ ಕ್ರಿಕೆಟಿನಲ್ಲಿ ಬಲಿಷ್ಠ ತಂಡವೆನಿಸಿರುವ ಭಾರತವು, ಕಳೆದ ಒಂದು ದಶಕದಿಂದ ಐಸಿಸಿ ಟ್ರೋಫಿಯ ಬರ ಅನುಭವಿಸುತ್ತಿದೆ. ಹೀಗಾಗಿ ಆಯ್ಕೆ ಸಮಿತಿಯ ಮುಖ್ಯಸ್ಥರ ಹುದ್ದೆ ಪಡೆದಿರುವ ಅಜಿತ್‌ ಅಗರ್ಕರ್‌ ಮುಂದೆ ಹಲವು ಸವಾಲುಗಳಿವೆ.

ಜುಲೈನಲ್ಲಿ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸುವುದು ಅಗರ್ಕರ್ ಮುಂದಿರುವ ಮೊದಲ ಸವಾಲು. ಈಗಾಗಲೇ ಏಕದಿನ ಹಾಗೂ ಟೆಸ್ಟ್ ತಂಡವನ್ನು ಘೋಷಿಸಲಾಗಿದೆ. ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಏಷ್ಯಾಕಪ್ ನಡೆಯಲಿದೆ. ಇದು ಹೊಸ ಆಯ್ಕೆ ಸಮಿತಿಯ ಮುಂದಿರುವ ಮತ್ತೊಂದು ಸವಾಲು. ಹೀಗಾಗಿ ಭಾರತಕ್ಕೆ ಪ್ರಮುಖ ಸವಾಲುಗಳಿರುವ ಸಮಯದಲ್ಲಿಯೇ ಅಗರ್ಕರ್ ಅವರು ಮುಖ್ಯಸ್ಥನ ಸ್ಥಾನ ಅಲಂಕರಿಸಿದ್ದಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X