ಕನ್ನಡ ಸಾಹಿತ್ಯ ಪರಿಷತ್ತಿಗೆ ಹುಬ್ಬಳ್ಳಿ ಗಣ್ಯರಾದ ರೇಣುಕಾ ದೇಸಾಯಿ ತಮ್ಮ ತಂದೆ ದಿ.ಈಶ್ವರಗೌಡ ಚನ್ನಪ್ಪಗೌಡರ ಹಾಗೂ ತಾಯಿ ದಿ. ಯಲ್ಲಮ್ಮ ಈಶ್ವರಗೌಡ ಚನ್ನಪ್ಪಗೌಡರ ಹೆಸರಿನಲ್ಲಿ 25,000 ಸಾವಿರ ರೂಪಾಯಿ ದತ್ತಿ ಹಣವನ್ನು ನೀಡಿ ದತ್ತಿ ನಿಧಿ ಸ್ಥಾಪಿಸಿದ್ದಾರೆ.
ಈ ಹಣದಲ್ಲಿ ಪ್ರತಿ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಜಾನಪದ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಹಾಗೂ ತಂದೆ ತಾಯಿ ಸ್ಮರಣೆ ಮಾಡುವ ಕಾರ್ಯಕ್ರಮ ಮಾಡಲು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ದತ್ತಿ ನಿಧಿ ಸ್ಥಾಪನೆ ಮಾಡಿದ ರೇಣುಕಾ ದೇಸಾಯಿ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ರಂಗಾಯಣವು ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿದೆ: ಡಾ.ಬಿ.ಕೆ.ಎಸ್ ವರ್ಧನ
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ತಾಲೂಕು ಕಸಾಪ ನಗರ ಘಟಕದ ಅಧ್ಯಕ್ಷೆ ವಿದ್ಯಾ ವಂಟಮುರಿ, ಸಿದ್ದಮ್ಮ ಅಡವೆನ್ನವರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಸಂಧ್ಯಾ ದಿಕ್ಷೀತ, ಗಿರಿಜಾ ಚಿಕ್ಕಮಠ, ಸುನಿಲ್ ಪತ್ರಿ, ಅನಸೂಯಾ ಪಾಟೀಲ, ಮಂಜುಳಾ ಮದ್ನೂರ, ಸುಮಂಗಲಾ ಅಂಗಡಿ, ವಿ ಎಮ್ ಪವಾಡಶೆಟ್ಟರ್, ಬಸವನಗೌಡ ಚನ್ನಪ್ಪಗೌಡ್ರ ಕರವೀರರಾಜ ದೇಸಾಯಿ, ಸೌಂದರ್ಯ ದೇಸಾಯಿ, ಬೀಮಸಿ ಅಡೆವನ್ನವರ, ದೀಪಾ ವಿಜಯಕುಮಾರ್ ಹರಗಿನಹಳ್ಳಿ, ಲಲಿತಾ ಕಣವಿ, ಉಮಾ ಸುತಗಟ್ಟಿ, ಕು.ವಿಹಾನ, ಕು.ವಿಮರ್ಶ, ಕು ನಿಶ್ಚಿತಾ ಉಪಸ್ಥಿತರಿದ್ದರು.