ಇದೇ ತಿಂಗಳಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ 20 ವರ್ಷ ವಯಸ್ಸಿನ ಯುವ ಆಟಗಾರ ತಿಲಕ್ ವರ್ಮಾ ಅವರಿಗೆ ಅವಕಾಶ ನೀಡಲಾಗಿದೆ.
ತಿಲಕ್ ವರ್ಮಾ ಕಳೆದ ಎರಡು ಋತುಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 5ನೇ ಕ್ರಮಾಂಕದಲ್ಲಿ 47 ಪಂದ್ಯಗಳಿಂದ 142 ಸ್ಟ್ರೈಕ್ ರೇಟ್‌ನೊಂದಿಗೆ ಆಟವಾಡಿರುವುದು ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆದಿದೆ.
ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡಕ್ಕೆ ಪುನರಾಗಮನ ಮಾಡಿದ್ದಾರೆ ಹಾಗೂ ಆರಂಭಿಕ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಉಪನಾಯಕರಾಗಿದ್ದಾರೆ.
ಕೆಕೆಆರ್‌ನ ಎಡಗೈ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವಕಾಶ ನೀಡಲಾಗಿಲ್ಲ. ಕೇರಳದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಅವರಿಗೆ ಸ್ಥಾನ ನೀಡಲಾಗಿದೆ. ವೇಗಿ ಅವೇಶ್ ಖಾನ್, ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರು ಸಹ 15 ಸದಸ್ಯರ ತಂಡದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್ಕರ್ ನೇಮಕ; ಅನುಭವಗಳ ನಡುವೆ ಹಲವು ಸವಾಲುಗಳು?
ಭಾರತ ತಂಡ:
ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪ ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಸರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.
ಟಿ20 ಸರಣಿ ವೇಳಾಪಟ್ಟಿ
ಮೊದಲ ಪಂದ್ಯ ಆಗಸ್ಟ್ 3, ಬ್ರಿಯಾನ್ ಲಾರಾ ಸ್ಟೇಡಿಯಂ, ಟ್ರಿನಿಡಾಡ್
ಎರಡನೇ ಪಂದ್ಯ: ಆಗಸ್ಟ್ 6, ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ
ಮೂರನೇ ಪಂದ್ಯ: ಆಗಸ್ಟ್ 8, ಪ್ರಾವಿಡೆನ್ಸ್ ಸ್ಟೇಡಿಯಂ, ಗಯಾನಾ
ನಾಲ್ಕನೇ ಪಂದ್ಯ: ಆಗಸ್ಟ್ 12, ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂ, ಲಾಡರ್ಹಿಲ್, ಫ್ಲೋರಿಡಾ
ಐದನೇ ಪಂದ್ಯ: ಆಗಸ್ಟ್ 13, ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಸ್ಟೇಡಿಯಂ, ಲಾಡರ್ಹಿಲ್, ಫ್ಲೋರಿಡಾ