ಥ್ರೆಡ್ಸ್: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೋಟಿ ಮಂದಿ ಇನ್‌ಸ್ಟಾಲ್‌; ಆ್ಯಪ್‌ನಲ್ಲಿರುವ ವಿಶೇಷತೆಗಳೇನು?

Date:

Advertisements

ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಇಂದು ಆರಂಭವಾಗಿರುವ ಮಾರ್ಕ್‌ ಜುಕರ್‌ಬರ್ಗ್‌ನ ಫೇಸ್‌ಬುಕ್ ಮಾಲೀಕತ್ವದ ಮೆಟಾ ಕಂಪನಿಯ ನೂತನ ಸಾಮಾಜಿಕ ಮಾಧ್ಯಮ ‘ಥ್ರೆಡ್ಸ್’ ಆ್ಯಪ್‌ ಅನ್ನು ಕೆಲವೇ ಗಂಟೆಗಳಲ್ಲಿ 1 ಕೋಟಿ ಮಂದಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ.

ಥ್ರೆಡ್ಸ್‌ ಆ್ಯಪ್‌ ಇಂದು ಮುಂಜಾನೆ (ಜುಲೈ 6) 100 ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಯಿತು. ನೂತನ ಅಪ್ಲಿಕೇಶನ್‌ಅನ್ನು ಗೂಗಲ್ ಪ್ಲೇಸ್ಟೋರ್‌ ಮತ್ತು ಆಪಲ್ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ.

‘ಥ್ರೆಡ್ಸ್’ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ ಜೊತೆ ಸಹಭಾಗಿತ್ವ ಹೊಂದಿದೆ. ಮೈಕ್ರೋ ಬ್ಲಾಗಿಂಗ್ ಆಪ್ಲಿಕೇಷನ್ ಆಗಿರುವ ಟ್ವಿಟ್ಟರ್‌ನಂತೆಯೆ ಥ್ರೆಡ್ಸ್ ಕಾರ್ಯ ನಿರ್ವಹಿಸುತ್ತದೆ.

Advertisements

ಲಾಗಿನ್‌ ಹೇಗೆ?

ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ಲಾಗಿನ್ ಆಗಬೇಕಾದರೆ ನೀವು ಈ ಮೊದಲು ಇನ್ಸ್ಟಾಗ್ರಾಮ್‌ನಲ್ಲಿ ಸಕ್ರಿಯವಾಗಿದ್ದ ಹೆಸರು ಮತ್ತು ಪ್ರೊಫೈಲ್ ಕೇಳಲಾಗುತ್ತದೆ. ಅದಕ್ಕೆ ಅನುಮತಿ ಸೂಚಿಸಿ ಲಾಗಿನ್ ಆಗಬಹುದು. ನೀವು ಮತ್ತೆ ಲಾಗಿನ್ ವಿವರಗಳನ್ನು ನಮೂದಿಸುವ ಅಗತ್ಯವಿಲ್ಲ.

ಬಳಕೆದಾರರು ಟ್ವಿಟರ್‌ನಂತಯೇ ತಮ್ಮ ಇಷ್ಟದ ಪೋಸ್ಟ್‌ಗಳ ಸರಣಿಯನ್ನು ‘ಥ್ರೆಡ್ಸ್‌’ನಲ್ಲೂ ಪೋಸ್ಟ್‌ ಮಾಡಬಹುದು. ನಿಮ್ಮನ್ನು ಫಾಲೋ ಮಾಡುವವರು ನಿಮ್ಮ ಪೋಸ್ಟ್‌ ಅನ್ನು ಲೈಕ್‌, ಕಮೆಂಟ್‌ಗಳು, ರಿಟ್ವೀಟ್‌ಗಳ ರೀತಿ ರೀಪೋಸ್ಟ್‌, ಕೋಟ್‌ ಕೂಡ ಮಾಡಬಹುದು. ನೀವು ಫಾಲೋ ಮಾಡುವವರ ಪೋಸ್ಟ್‌ಗಳನ್ನು ನೀವು ಇತರರಿಗೆ ಅಥವಾ ಇತರ ಸಾಮಾಜಿಕ ಮಾಧ್ಯಮಗಳಿಗೆ ಶೇರ್‌ ಮಾಡಬಹುದು, ಭಾವಚಿತ್ರ, ಪೋಸ್ಟ್‌ಗಳೊಂದಿಗೆ ಮರು ಪ್ರತಿಕ್ರಿಯೆ ನೀಡಬಹುದು.

ಅಕ್ಷರಗಳ ಮಿತಿ?

ಥ್ರೆಡ್ಸ್‌ ಟ್ವಿಟರ್‌ ಹೋಲುವ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರಿಗೆ ಪ್ರತಿ ಪೋಸ್ಟ್‌ಗೆ 500 ಅಕ್ಷರಗಳ ಮಿತಿ ಇರುತ್ತದೆ. ಅಕ್ಷರಗಳ ಜೊತೆಗೆ ಲಿಂಕ್‌ಗಳು, ಫೋಟೋಗಳು (ಪ್ರತಿ ಪೋಸ್ಟ್‌ಗೆ ಹತ್ತು) ಶೇರ್ ಮಾಡಿಕೊಳ್ಳಬಹುದು. ಅಲ್ಲದೆ 5 ನಿಮಿಷಗಳ ಅವಧಿಯ ವಿಡಿಯೊಗಳನ್ನು ಇಲ್ಲಿ ಹಂಚಿಕೊಳ್ಳಬಹುದು.

ಸಂಭಾಷಣೆ /ವಿಷಯವನ್ನು ಸರಣಿಯಾಗಿ ಇಲ್ಲಿ ಬರೆಯಲು ಅವಕಾಶವಿದೆ. ಥ್ರೆಡ್‌ ಪೋಸ್ಟ್‌ಗೆ ಕಾಮೆಂಟ್‌ಗಳಿಗೆ ಪ್ರತ್ಯುತ್ತರ ನೀಡಬಹುದು ಜೊತೆಗೆ ಅವುಗಳನ್ನು ನಿಯಂತ್ರಿಸಲು ಅವಕಾಶ ನೀಡಲಾಗಿದೆ. ಮೂರು-ಡಾಟ್ ಮೆನು ಆಯ್ಕೆ ಮೂಲಕ ನೀವು ಥ್ರೆಡ್‌ಗಳಲ್ಲಿ ಪ್ರೊಫೈಲ್ ಬ್ಲಾಕ್ ಮಾಡಬಹುದು, ಅನುಮತಿ, ನಿರಾಕರಣೆ ನಿರ್ಬಂಧವನ್ನು ಅನುಸರಿಸುವುದನ್ನು ರದ್ದುಗೊಳಿಸಬಹುದು. ನಿರ್ಬಂಧಿಸುವ ಆಯ್ಕೆಗೆ ಅವಕಾಶ ನೀಡಲಾಗಿದೆ.

ಈ ಸುದ್ದಿ ಓದಿದ್ದೀರಾ? ವೈದ್ಯಕೀಯ ಲೋಕದ ನೆಚ್ಚಿನ ಮಿತ್ರ ‘ಎಐ’; ಚಿಕಿತ್ಸೆಗಳು ಈಗ ಸುಲಭ ಮತ್ತು ತ್ವರಿತ

ವೆಬ್ ಆವೃತ್ತಿ ಇಲ್ಲ, ಪೋಸ್ಟ್‌ಗಳಿಗೂ ಮಿತಿಯಿಲ್ಲ

ಮೆಟಾ-ಮಾಲೀಕತ್ವದ ಥ್ರೆಡ್ಸ್‌ ಸದ್ಯ ಮೊಬೈಲ್‌ ಅಪ್ಲಿಕೇಷನ್‌ಗೆ ಮಾತ್ರ ಸೀಮಿತವಾಗಿದೆ. ವೆಬ್‌ಸೈಟ್ ಆವೃತ್ತಿಯನ್ನು ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ. ಆದ ಕಾರಣ ಕಂಪ್ಯೂಟರ್‌ ಮೂಲಕ ಲಾಗಿನ್‌ ಆಗಲು ಅವಕಾಶವಿಲ್ಲ. ಥ್ರೆಡ್‌ಗಳ ಪೋಸ್ಟ್‌ಗಳ ಸಂಖ್ಯೆಗಳಿಗೂ ಯಾವುದೇ ಮಿತಿಯಿಲ್ಲ. ಬಳಕೆದಾರರು ಎಷ್ಟು ಥ್ರೆಡ್‌ಗಳನ್ನು ಬೇಕಾದರೂ ಪೋಸ್ಟ್ ಮಾಡಬಹುದು.

ಸದ್ಯದ ಅಭಿವೃದ್ಧಿ ಪಡಿಸಿರುವ ಆವೃತ್ತಿ ಪ್ರಕಾರ ಇತರ ಬಳಕೆದಾರರಿಗೆ ನೇರ ಸಂದೇಶ ಕಳುಹಿಸಲು ಅವಕಾಶವಿಲ್ಲ. ಥ್ರೆಡ್‌ಗಳು ಒಂದೇ ಬಾರಿಗೆ ಒಂದೇ ಬಳಕೆದಾರರ ಐಡಿಯೊಂದಿಗೆ ಲಾಗ್ ಇನ್ ಆಗಲು ಮಾತ್ರ ಅನುಮತಿಸುತ್ತದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ, ಥ್ರೆಡ್‌ಗಳ ಖಾತೆಯು ಪೂರ್ವನಿಯೋಜಿತವಾಗಿ ಖಾಸಗಿಯಾಗಿರುತ್ತದೆ. 16 ವರ್ಷ ಮೇಲ್ಪಟ್ಟ ಬಳಕೆದಾರರು ಯಾವುದೇ ಸಮಯದಲ್ಲಿ ಥ್ರೆಡ್‌ಗಳನ್ನು ಖಾಸಗಿಯಾಗಿಸಬಹುದು. ಉಳಿದಂತೆ ನಿಮ್ಮ ಪೋಸ್ಟ್‌ಗಳು ಸಾರ್ವಜನಿಕವಾಗಿರುತ್ತದೆ.

ಟ್ವಿಟರ್‌ ಹಾಗೂ ಥ್ರೆಡ್ಸ್‌ಗೆ ಇರುವ ವ್ಯತ್ಯಾಸ

  • ಟ್ವಿಟರ್​ನಲ್ಲಿ ಬ್ಲೂಟಿಕ್​ ಹೊಂದಿರದ ಬಳಕೆದಾರರು ಗರಿಷ್ಠ 280 ಅಕ್ಷರಗಳನ್ನು ಹೊಂದಿರುತ್ತಾರೆ. ಥ್ರೆಡ್‌ ಆ್ಯಪ್​, ಬಳಕೆದಾರರಿಗೆ 500 ಅಕ್ಷರಗಳ ಮಿತಿಯನ್ನು ನೀಡಲಾಗಿದೆ. ಇನ್ಸ್ಟಾಗ್ರಾಮ್‌ ಖಾತೆಯು ತಮ್ಮ ಬ್ಲೂಟಿಕ್​ ಅನ್ನು ಥ್ರೆಡ್‌ನಲ್ಲೂ ಕಾಣಿಸಿಕೊಳ್ಳುವಂತೆ ಮಾಡಬಹುದು. ಟ್ವಿಟರ್, ಆ ವೈಶಿಷ್ಟ್ಯವನ್ನು ತಿಂಗಳಿಗೆ 8 ಡಾಲರ್​ಗಳಿಗೆ ನೀಡುತ್ತಿದೆ. ಅಲ್ಲಿ ಹಣ ಪಾವತಿಸಿದರೆ ಚಂದಾದಾರರಿಗೆ ತಮ್ಮ ಅಕ್ಷರ ಮಿತಿಯನ್ನು 25,000ಕ್ಕೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೆಟಾ ಇಲ್ಲಿಯವರೆಗೆ ಅಂತಹ ಯಾವುದೇ ಆಯ್ಕೆಯನ್ನು ನೀಡಿಲ್ಲ.
  • ಥ್ರೆಡ್‌ಗಳಿಗೆ ಬಳಕೆದಾರರು ಇನ್ಸ್ಟಾಗ್ರಾಮ್‌ ಖಾತೆಯನ್ನು ಹೊಂದಿರಬೇಕು. ಪ್ರೊಫೈಲ್ ರಚಿಸುವಾಗ, ಅಸ್ತಿತ್ವದಲ್ಲಿರುವ ಇನ್ಸ್ಟಾಗ್ರಾಮ್‌ ಪ್ರೊಫೈಲ್‌ನಿಂದ ಬಯೋ ಮತ್ತು ಫಾಲೋವರ್​ಗಳನ್ನು ಮರಳಿ ಪಡೆಯಲು ಅಪ್ಲಿಕೇಶನ್ ಆಯ್ಕೆಯನ್ನು ನೀಡುತ್ತದೆ. ಆದರೆ ಟ್ವಿಟರ್‌ನಲ್ಲಿ ಇಮೇಲ್‌ ಐಡಿ ಅಥವಾ ಫೋನ್‌ ನಂಬರ್‌ ಮೂಲಕ ಯಾರು ಬೇಕಾದರೂ ಐಡಿ ರಚಿಸಿಕೊಳ್ಳಬಹುದು
  • ಥ್ರೆಡ್‌ಗಳಲ್ಲಿ ಬಳಕೆದಾರರು ಐದು ನಿಮಿಷಗಳ ಅವಧಿಯ ವಿಡಿಯೊಗಳನ್ನು ಪೋಸ್ಟ್ ಮಾಡಲು ಅವಕಾಶವಿದೆ. ಟ್ವಿಟರ್​ನಲ್ಲಿ, ವೆರಿಫೈಡ್‌ ಆಗಿಲ್ಲದವರು 260 ಸೆಕೆಂಡ್ ಸಮಯದ ವಿಡಿಯೊಗಳನ್ನು ಪೋಸ್ಟ್ ಮಾಡಬಹುದು.
  • ಟ್ವಿಟರ್‌ನಲ್ಲಿ ಬಳಕೆದಾರರಿಗೆ ಟ್ರೆಂಡಿಂಗ್ ಮತ್ತು ಅವರು ಆಸಕ್ತಿ ಹೊಂದಿರುವ ಇತರ ವಿಷಯಗಳನ್ನು ವೀಕ್ಷಿಸಲು ಅನುಮತಿಸುತ್ತದೆ. ಸದ್ಯಕ್ಕೆ, ಥ್ರೆಡ್‌ಗಳಲ್ಲಿ ಸ್ಕ್ರೋಲಿಂಗ್ ಮಾಡುವ ಮೂಲಕ ಮಾಹಿತಿ ತಿಳಿದುಕೊಳ್ಳಬಹುದು. ಬೇರೆ ಯಾವುದೇ ಆಯ್ಕೆಯನ್ನು ಅಳವಡಿಸಿಲ್ಲ
  • ಟ್ವಿಟರ್‌ನಲ್ಲಿ ಪೋಸ್ಟ್‌ಗಳ ಡ್ರಾಫ್ಟ್ ಅನ್ನು ಉಳಿಸಿಕೊಳ್ಳಬಹುದು ಆದರೆ ಥ್ರೆಡ್‌ಗಳಲ್ಲಿ ಈ ಆಯ್ಕೆಯ ಅವಕಾಶವಿಲ್ಲ
  • ಥ್ರೆಡ್‌ನಲ್ಲಿ ಇತರರ ಪ್ರೊಫೈಲ್‌ನ ಲೈಕ್​ಗಳನ್ನು ವೀಕ್ಷಿಸಲು ಆಯ್ಕೆಯನ್ನು ನೀಡಿಲ್ಲ. ಟ್ವಿಟರ್‌ನಲ್ಲಿ ಈ ಆಯ್ಕೆಯ ಸೌಲಭ್ಯವಿದೆ.
  • ಥ್ರೆಡ್​ನಲ್ಲಿ ಖಾತೆಗಳನ್ನು ಮ್ಯೂಟ್ ಮತ್ತು ಬ್ಲಾಕ್​ ಮಾಡಲು ಇನ್ಸ್ಟಾಗ್ರಾಮ್‌ನಂತೆಯೇ ಆಯ್ಕೆಗಳು ಇರಲಿವೆ. ಟ್ವಿಟರ್‌ನಲ್ಲಿ ಇಂತಹ ಸೌಲಭ್ಯಗಳಿಲ್ಲ
blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X