ಕೈದಿಗಳಿಬ್ಬರು ಪರಸ್ಪರ ಹೊಡೆದಾಡಿ ಹಲ್ಲಿನಿಂದ ಕಚ್ಚಿಕೊಂಡು ಗಂಭೀರ ಗಾಯಗೊಂಡ ಘಟನೆ ಹುಬ್ಬಳ್ಳಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪರಸ್ಪರ ಜಗಳವಾಡಿ, ಹಲ್ಲೆ ಮಾಡಿಕೊಂಡ ಕೈದಿಗಳಿಬ್ಬರು ಶಿವಾನಂದ ಹುಲಜೋಗಿ ಮತ್ತು ಮೈಲಾರಿ ಭರಮಣ್ಣವರ ಎಂದು ಹೇಳಲಾಗಿದೆ. ಈ ಇಬ್ಬರೂ ಕೈದಿಗಳನ್ನು ಕಾರಾಗೃಹದಲ್ಲಿ ಇರಿಸಲಾಗಿತ್ತು. ಮೇ 1ರಂದು ಶಿವಾನಂದ ಉದ್ದೇಶಪೂರ್ವಕವಾಗಿ ಮೈಲಾರಿ ಜೊತೆಗೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ಬೈದಾಡಿ, ಹಲ್ಲಿನಿಂದ ಹುಬ್ಬಿಗೆ ಕಚ್ಚುತ್ತಾನೆ. ಇದರಿಂದ ಸುಮ್ಮನಾಗದ ಮೈಲಾರಿಯೂ ಸಹ ತಿರುಗಿ ಆತನನ್ನು ಕಚ್ಚುತ್ತಾನೆ.
ಇದನ್ನು ಓದಿದ್ದೀರಾ? ಧಾರವಾಡ | 52 ಇಸ್ಪೀಟು, 10.080ರೂ. ಪೊಲೀಸ್ ವಶಕ್ಕೆ; 10 ಮಂದಿ ವಿರುದ್ಧ ಪ್ರಕರಣ ದಾಖಲು
ಗಂಭೀರವಾಗಿ ಗಾಯಂಗೊಂಡ ಇಬ್ಬರೂ ಕೈದಿಗಳನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.