ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿದೆ. ಹೊಸ ಮೊಬೈಲ್ ಆ್ಯಪ್ ಮತ್ತು ಪೋರ್ಟಲ್ ಅನ್ನು ಬಿಡುಗಡೆ ಮಾಡಿದ್ದು, ಸೈಬರ್ ಸೆಂಟರ್ಗೆ ಹೋಗದೇ ಕುಳಿತಲ್ಲಿಯೇ ಮೊಬೈಲ್ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಅವರು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಸೈಬರ್ ಸೆಂಟರ್ನಲ್ಲಿ ತಪ್ಪಾಗಿ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳು ಪರದಾಡುತ್ತಿದ್ದರು. ಇದೇ ಕಾರಣದಿಂದ ಕೆಲವು ಸಲ ಅರ್ಹರಿಗೆ ಸಿಇಟಿ ಸೀಟ್ ಮಿಸ್ ಆಗುತ್ತಿತ್ತು. ಹಾಗಾಗಿ ಕೆಇಎ ಮೊಬೈಲ್ ಆ್ಯಪ್, ಚಾಟ್ ಬಾಟ್ ಮತ್ತು ಪೊರ್ಟಲ್ ಅನ್ನು ಬಿಡುಗಡೆ ಮಾಡಿದೆ.
ಹೊಸ ಮೊಬೈಲ್ ಆ್ಯಪ್ನಿಂದ ಅಭ್ಯರ್ಥಿಗಳಿಗೆ ಸಿಇಟಿ ಪರೀಕ್ಷೆಯ ಸಮಸ್ಯೆಗಳು, ಕಾಲೇಜುಗಳ ಸಮಗ್ರ ಮಾಹಿತಿ, ಆಯ್ಕೆ ಮಾಡುವ ಇಂಜಿನೀಯರಿಂಗ ಕಾಲೇಜು ಶುಲ್ಕ ಎಷ್ಟು? ಆ ಕಾಲೇಜಿನಲ್ಲಿ ಹಾಸ್ಟೇಲ್ ಶುಲ್ಕ ಏನಿದೆ? ಇತರೇ ಸೌಲಭ್ಯಗಳು ಏನಿದೆ ಎಂದು ಹಲವಾರು ಪ್ರಶ್ನೆಗಳಿಗೆ ಆ್ಯಪ್ ನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.
“ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿನೂತನ ಉಪಕ್ರಮಗಳು — ಕಾಲೇಜು ಪೋರ್ಟಲ್, ಕೆಇಎ ಮೊಬೈಲ್ ಆಪ್ ಮತ್ತು ಕೆಇಎ ಚಾಟ್ ಬಾಟ್ ಉದ್ಘಾಟನೆ ನೆರವೇರಿಸಲಾಯಿತು. 2025-26 ಸಾಲಿನ ವೃತ್ತಿಪರ ಕೋರ್ಸುಗಳಿಗೆ ಸೀಟು ಆಯ್ಕೆ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕವಾಗಿ! ವಿದ್ಯಾರ್ಥಿಗಳು ಆಪ್ ಡೌನ್ಲೋಡ್ ಮಾಡಿ ಲಾಭ ಪಡೆದುಕೊಳ್ಳಿ” ಎಂದು ಸುಧಾಕರ್ ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿನೂತನ ಉಪಕ್ರಮಗಳು — ಕಾಲೇಜು ಪೋರ್ಟಲ್, ಕೆಇಎ ಮೊಬೈಲ್ ಆ್ಯಪ್ ಮತ್ತು ಕೆಇಎ ಚಾಟ್ ಬಾಟ್ ಉದ್ಘಾಟನೆ ನೆರವೇರಿಸಲಾಯಿತು.
— Dr MC Sudhakar (@drmcsudhakar) May 12, 2025
2025-26 ಸಾಲಿನ ವೃತ್ತಿಪರ ಕೋರ್ಸುಗಳಿಗೆ ಸೀಟು ಆಯ್ಕೆ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕವಾಗಿ!
ವಿದ್ಯಾರ್ಥಿಗಳು ಆ್ಯಪ್ ಡೌನ್ಲೋಡ್ ಮಾಡಿ ಲಾಭ ಪಡೆದುಕೊಳ್ಳಿ. pic.twitter.com/X2zHYnafBu
This is a greatful message for all students