ಯುದ್ಧ ಬಾಲಿವುಡ್ ಸಿನಿಮಾವಲ್ಲ: ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ

Date:

ಯುದ್ಧ ಬಾಲಿವುಡ್ ಸಿನಿಮಾವಲ್ಲ, ಅದು ‘ರೋಮ್ಯಾಂಟಿಕ್’ ಅಲ್ಲ ಎಂದು ಭಾರತೀಯ ಸೇನಾ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸದ್ಯ ಕದನ ವಿರಾಮ ಘೋಷಿಸಲಾಗಿದೆ. ಈ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ನರವಾಣೆ ಟೀಕಿಸಿದ್ದಾರೆ.

- Advertisement -

ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನರವಾಣೆ, “ಯುದ್ಧ ಬಾಲಿವುಡ್ ಸಿನಿಮಾವಲ್ಲ. ಆದರೆ ಯುದ್ಧದ ಆದೇಶ ಬಂದರೆ ಯುದ್ಧಕ್ಕೆ ತೆರಳುತ್ತೇನೆ. ಆದರೆ ರಾಜತಾಂತ್ರಿಕತೆ ನನ್ನ ಮೊದಲ ಆಯ್ಕೆ” ಎಂದು ಹೇಳಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರವಾಣೆ ಈ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ | ಸಿಎಂ ಸಿದ್ದರಾಮಯ್ಯ ಸೇರಿ ರಾಜಕೀಯ ನಾಯಕರಿಂದ ದಾಳಿ ಕುರಿತು ಪ್ರಶಂಸೆ

“ಶೆಲ್ ದಾಳಿಯನ್ನು ನೋಡಿದ. ರಾತ್ರಿ ವೇಳೆ ಆಶ್ರಯ ತಾಣಗಳಿಗೆ ಓಡಬೇಕಾದ ಮಕ್ಕಳು ಸೇರಿದಂತೆ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಯುದ್ಧದ ಬಗ್ಗೆ ಆಘಾತವಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ, ಆ ಆಘಾತವು ತಲೆಮಾರುಗಳವರೆಗೆ ಇರುತ್ತದೆ” ಎಂದರು.

“ಪಿಟಿಎಸ್‌ಡಿ (ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಎಂದೂ ಇದೆ. ಭಯಾನಕ ದೃಶ್ಯಗಳನ್ನು ನೋಡಿದ ಜನರು 20 ವರ್ಷಗಳ ನಂತರವೂ ನಿದ್ದೆಯಿಂದ ಬೆವತು ಭಯದಿಂದ ಎಚ್ಚರಗೊಳ್ಳುತ್ತಾರೆ. ಅವರಿಗೆ ಎಷ್ಟು ವರ್ಷ ಕಳೆದರೂ ಮನೋವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ” ಎಂದು ಯುದ್ಧದ ಮಾನಸಿಕ ಆಘಾತಗಳ ಬಗ್ಗೆ ವಿವರಿಸಿದರು.

ಯುದ್ಧ ‘ರೋಮ್ಯಾಂಟಿಕ್’ ಅಲ್ಲ

“ಯುದ್ಧವು ರೋಮ್ಯಾಂಟಿಕ್ ಅಲ್ಲ. ಇದು ನಿಮ್ಮ ಬಾಲಿವುಡ್ ಸಿನಿಮಾ ಅಲ್ಲ. ಇದು ತುಂಬಾ ಗಂಭೀರವಾದುದ್ದು. ಯುದ್ಧ ಅಥವಾ ಹಿಂಸೆ ಎಂದಿಗೂ ನಮ್ಮ ಕೊನೆಯ ಆಯ್ಕೆಯಾಗಿರಬೇಕು. ಅದೇ ಮೊದಲಾಗಬಾರದು. ಅದಕ್ಕಾಗಿಯೇ ನಮ್ಮ ಪ್ರಧಾನಿ ಇದು ಯುದ್ಧದ ಯುಗವಲ್ಲ ಎಂದು ಹೇಳಿದರು. ಅವಿವೇಕದ ಜನರು ಯುದ್ಧವನ್ನು ನಮ್ಮ ಮೇಲೆ ಯುದ್ಧದ ಒತ್ತಡ ಹೇರುತ್ತಾರೆ. ಆದರೆ ಯುದ್ಧಕ್ಕೆ ಹುರಿದುಂಬಿಸಬಾರದು” ಎಂದರು.

“ಈಗಲೂ ನಾವು ಯಾಕೆ ಯುದ್ಧ ಘೋಷಿಸಿಲ್ಲ ಎಂದು ಜನರು ಕೇಳುತ್ತಿದ್ದಾರೆ. ಒಬ್ಬ ಮಿಲಿಟರಿ ವ್ಯಕ್ತಿಯಾಗಿ, ಯುದ್ಧದ ಆದೇಶ ಬಂದರೆ ನಾನು ಯುದ್ಧಕ್ಕೆ ಹೋಗುತ್ತೇನೆ. ಆದರೆ ಅದು ನನ್ನ ಮೊದಲ ಆಯ್ಕೆಯಾಗಿರುವುದಿಲ್ಲ. ನನ್ನ ಮೊದಲ ಆಯ್ಕೆ ರಾಜತಾಂತ್ರಿಕತೆ. ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಪರಿಹರಿಸುವುದು ಆಗಿರುತ್ತದೆ” ಮಾಜಿ ಭಾರತೀಯ ಸೇನಾ ಮುಖ್ಯಸ್ಥ ಹೇಳಿದರು.

“ರಾಷ್ಟ್ರೀಯ ಭದ್ರತೆಯಲ್ಲಿ ನಾವೆಲ್ಲರೂ ಸಮಾನ ಪಾಲುದಾರರು. ದೇಶಗಳ ನಡುವೆ ಮಾತ್ರವಲ್ಲದೆ ನಮ್ಮ ನಡುವೆಯೂ, ಕುಟುಂಬಗಳಲ್ಲಿ ಅಥವಾ ರಾಜ್ಯಗಳು, ಪ್ರದೇಶಗಳು ಮತ್ತು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ನಾವು ಪ್ರಯತ್ನಿಸಬೇಕು. ಯಾವುದಕ್ಕೂ ಹಿಂಸಾಚಾರ ಉತ್ತರವಲ್ಲ” ಎಂದರು.

ಸುಮಾರು 26 ಭಾರತೀಯರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಲ್ಲಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಸದ್ಯ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದ್ಯ ದಾಳಿ ಪ್ರತಿದಾಳಿಗಳು ನಿಂತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘Instagram ಹೆಣ್ಮಕ್ಕಳಿಗೆ ಮಾತ್ರ’; ಎಲಾನ್ ಮಸ್ಕ್ ಹೀಗ್ಯಾಕಂದ್ರು?

ಟೆಕ್ ಜೈಂಟ್ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ವಿವಾದಾತ್ಮಕ ಹೇಳಿಕೆಗಳ...

ಜಂತರ್‌ ಮಂತರ್‌ನಲ್ಲಿ 500ಕ್ಕೂ ಅಧಿಕ ಮಂದಿ ಅರೆಸ್ಟ್: ‘ಗ್ಯಾನೇಶ್ ಕುಮಾರ್ ಬಂಧನವಾಗಲಿ’ ಎಂದ ನಾಯಕರು

ಎಸ್‌ಐಆರ್ ಮೊದಲಾದ ಪ್ರಕ್ರಿಯೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ...

ವಾಹ್‌ EC! 13 ಕೋಟಿ ಜನರನ್ನ ಹೊರದಬ್ಬಿ, ಈಗ ಮರುನೋಂದಣಿಯ ಕಸರತ್ತು

ರಾಷ್ಟ್ರವ್ಯಾಪಿ 'ವಿಶೇಷ ತೀವ್ರ ಪರಿಷ್ಕರಣೆ' (SIR) ಎನ್ನುವ ಭೀಕರ ಆಪರೇಷನ್ ನಡೆಸಿ,...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...