ಶ್ರೀಲಂಕಾದ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮ್ಯಾಥ್ಯೂಸ್ ತಮ್ಮ ಅಭಿಮಾನಿಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ. 2009 ರಿಂದ ಶ್ರೀಲಂಕಾದ ಟೆಸ್ಟ್ ಕ್ರಿಕೆಟ್‌ನ ಭಾಗವಾಗಿದ್ದರು.
ಏಂಜೆಲೊ ಮ್ಯಾಥ್ಯೂಸ್ 2009 ರಲ್ಲಿ ಗಾಲೆಯಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ 16 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಮ್ಯಾಥ್ಯೂಸ್ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 44.63 ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 16 ಶತಕಗಳು ಮತ್ತು 45 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 200 ರನ್ ಅವರ ಅತ್ಯುತ್ತಮ ಸ್ಕೋರ್ .
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿರುವ ಮ್ಯಾಥ್ಯೂಸ್, ತಮ್ಮ ವೃತ್ತಿಜೀವನದಲ್ಲಿ 33 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದು, ಕುಮಾರ್ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಜಗಳಕ್ಕಿಳಿದ ಅಭಿಷೇಕ್ ಶರ್ಮಾ–ದಿಗ್ವೇಶ್ ರಥಿ; ಬಿಸಿಸಿಐನಿಂದ ಒಬ್ಬರಿಗೆ ಅಮಾನತು ಶಿಕ್ಷೆ
ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಏಂಜೆಲೊ ಮ್ಯಾಥ್ಯೂಸ್, ‘ನನ್ನ ಪ್ರೀತಿಯ ಸ್ನೇಹಿತರೇ ಮತ್ತು ಕುಟುಂಬವೇ, ಈಗ ನಾನು ಆಟದ ಅತ್ಯಂತ ಪ್ರೀತಿಯ ಸ್ವರೂಪವಾದ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯ ಬಂದಿದೆ. ಕಳೆದ 17 ವರ್ಷಗಳಿಂದ ಶ್ರೀಲಂಕಾ ಪರ ಕ್ರಿಕೆಟ್ ಆಡುವುದು ನನಗೆ ಸಿಕ್ಕ ಅತ್ಯಂತ ದೊಡ್ಡ ಗೌರವ ಮತ್ತು ಹೆಮ್ಮೆ. ರಾಷ್ಟ್ರೀಯ ಜೆರ್ಸಿ ಧರಿಸಿದಾಗ ಮೂಡುವ ದೇಶಭಕ್ತಿ ಭಾವನೆಯನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ. ನಾನು ನನ್ನ ಎಲ್ಲವನ್ನೂ ಕ್ರಿಕೆಟ್‌ಗೆ ನೀಡಿದ್ದೇನೆ ಮತ್ತು ಪ್ರತಿಯಾಗಿ ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ. ಜೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ನನ್ನ ದೇಶಕ್ಕಾಗಿ ನನ್ನ ಕೊನೆಯ ರೆಡ್-ಬಾಲ್ ಪಂದ್ಯವಾಗಿರುತ್ತದೆ ಎಂದು ಏಂಜೆಲೊ ಮ್ಯಾಥ್ಯೂಸ್ ಬರೆದುಕೊಂಡಿದ್ದಾರೆ.
— Angelo Mathews (@Angelo69Mathews) May 23, 2025