ಮುನೀರ್ ಕಾಟಿಪಳ್ಳ ಮತ್ತು ಅಬ್ದುಲ್ ಸಲಾಮ್ ಪುತ್ತಿಗೆ ವಿರುದ್ಧ ಐಎಂಎ ಪುತ್ತೂರು ಕಾರ್ಯದರ್ಶಿಯಿಂದ ದಾಖಲಾಗಿರುವ ಖಾಸಗಿ ದೂರು ಮತ್ತು ಎಫ್‌ಐಆರ್‌ನ್ನು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ನಡೆದಿರುವ ದಾಳಿಯಾಗಿದ್ದು, ತಾತ್ವಿಕ ಹಾಗೂ ಸಾಮಾಜಿಕ ಹಕ್ಕುಗಳ ಪರ ಹೋರಾಟಗಾರರನ್ನು ಸುಳ್ಳು ಆರೋಪಗಳ ಮೂಲಕ ದಮನಿಸಲು ನಡೆಸಿದ ರಾಜಕೀಯ ಪ್ರೇರಿತ ನಡೆ ಎಂದು ಪರಿಗಣಿಸಲಾಗಿದೆ” ಎಂದಿದ್ದಾರೆ.
“ಮುನೀರ್ ಕಾಟಿಪಳ್ಳ ಮತ್ತು ಅಬ್ದುಲ್ ಸಲಾಮ್ ಪುತ್ತಿಗೆ ಅವರು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿಯಾಗಿದ್ದವರು. ಇವರ ವಿರುದ್ಧ ದಾಖಲಾಗಿರುವ ದೂರುಗಳು ಪುರಾವೆಗಳಿಲ್ಲದ ನಕಲಿ ಆರೋಪಗಳಾಗಿದ್ದು, ಇವು ಸಾಮಾಜಿಕ ಪರಂಪರೆಗಳಿಗೆ ಹಾನಿಕಾರಕ. ಎಸ್‌ಡಿಪಿಐ ಈ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದು, ಜನಪರ ಧ್ವನಿಯನ್ನು ಕುಗ್ಗಿಸುವ ಯಾವುದೇ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸುತ್ತದೆ”
ಎಂದು ಹೇಳಿದೆ.
ಇದನ್ನೂ ಓದಿ: ಮಂಗಳೂರು | ಮಳೆ ಅವಾಂತರ; ಮೂರು ಲಕ್ಷ ಮೌಲ್ಯದ ದಿನಸಿ ನೀರುಪಾಲು