ಮಧ್ಯಪ್ರದೇಶ | ಬುಡಕಟ್ಟು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ; ಗುಪ್ತಾಂಗಕ್ಕೆ ಚೂಪಾದ ವಸ್ತು ತುರುಕಿ ಕೊಂದ ವಿಕೃತಕಾಮಿಗಳು

Date:

ಬುಡಕಟ್ಟು ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿ, ಗುಪ್ತಾಂಗಕ್ಕೆ ಚೂಪಾದ ವಸ್ತು ತುರುಕಿ ಕೊಂದಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಖಲ್ವಾ ಪ್ರದೇಶದಲ್ಲಿ ನಡೆದಿದೆ. 45 ವರ್ಷದ ಮಹಿಳೆ ಮೇಲೆ 25ರಿಂದ 38 ವರ್ಷ ವಯಸ್ಸಿನ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

- Advertisement -

ವಿಕೃತಕಾಮಿಗಳು ಮಹಿಳೆಯ ಗುಪ್ತಾಂಗಕ್ಕೆ ಗಟ್ಟಿಯಾದ ಮತ್ತು ಚೂಪಾದ (ಬಹುಶಃ ಕಬ್ಬಿಣದ ರಾಡ್) ತುರುಕಿ, ಆಕೆಯ ಆಂತರಿಕ ಅಂಗಗಳಿಗೆ ಹಾನಿ ಮಾಡಿದ್ದಾರೆ. ಇದರಿಂದಾಗಿ ಮಹಿಳೆ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಇದನ್ನು ಓದಿದ್ದೀರಾ? ಅಮಾನುಷ ಕೃತ್ಯ | ದಲಿತ ಬಾಲಕಿಯ ಅಪಹರಣ, ನಿರಂತರ ಸಾಮೂಹಿಕ ಅತ್ಯಾಚಾರ

ಕೊರ್ಕು ಬುಡಕಟ್ಟು ಜನಾಂಗದವರೇ ಆದ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಮತ್ತು ಆರೋಪಿಗಳು ನೆರೆಹೊರೆಯವರಾಗಿದ್ದರು. ವಿವಾಹ ಸಮಾರಂಭವೊಂದಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಜೊತೆಯಲ್ಲೇ ಇದ್ದ ನೆರೆಹೊರೆಯ ಈ ಪುರುಷರು ತಮ್ಮ ಮನೆಗೆ ಎಂದಿನಂತೆ ಮಹಿಳೆಯನ್ನು ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ.

ಶನಿವಾರ ಬೆಳಿಗ್ಗೆ, ಮಹಿಳೆಯ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿ ಬರದ ಕಾರಣ ವಿಚಾರಿಸಲೆಂದು ನೆರೆಮನೆಗೆ ಹೋಗಿದ್ದು ತಾಯಿ ಗಂಭೀರ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ತಾಯಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋದ ಮಕ್ಕಳು ಭಯಗೊಂಡು ಯಾರಿಗೂ ಮಾಹಿತಿ ನೀಡಿಲ್ಲ, ದೂರೂ ನೀಡಿಲ್ಲ. ತೀವ್ರ ಆಂತರಿಕ ಗಾಯಗಳಿಂದಾಗಿ ಮಹಿಳೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾವನ್ನಪ್ಪಿದರು. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ತಿಳಿದಿದೆ ಎನ್ನಲಾಗಿದೆ.

ಬುಡಕಟ್ಟು ಮಹಿಳೆಯ ಮೇಲೆ ನಡೆದ ಕ್ರೂರ ಕೃತ್ಯದ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ವಿರೋಧ ಪಕ್ಷ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. “ಮಧ್ಯಪ್ರದೇಶದಲ್ಲಿ ಮೋಹನ್ ರಾಜ್ ಆಳ್ವಿಕೆಯಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಂತಾಗಿದೆ. ಖಾಂಡ್ವಾ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ನಾವು ದಿಗಿಲುಬೀಳುವಂತೆ ಮಾಡುತ್ತದೆ. ನಿಮ್ಮ ಗೃಹ ಸಚಿವರಿಗೆ (ಮುಖ್ಯಮಂತ್ರಿಯೇ ಗೃಹಸಚಿವರು) ಸ್ವಲ್ಪವಾದರೂ ನಾಚಿಗೆ ಎಂಬುವುದು ಇದೆಯೇ? ಸರ್ಕಾರಕ್ಕೆ ಈ ಅಪರಾಧಗಳನ್ನು ನಿಯಂತ್ರಿಸುವ ಯಾವುದೇ ಧೈರ್ಯವಿಲ್ಲ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಇದನ್ನು ಓದಿದ್ದಿರಾ? ಕೆ.ಆರ್.ಪೇಟೆ ದಲಿತ ಯುವಕನ ಹತ್ಯೆ ಪ್ರಕರಣ; ಮೇ 27ಕ್ಕೆ ಬೃಹತ್ ಪ್ರತಿಭಟನೆ

ದೇಶದಲ್ಲಿ ದಲಿತ, ಬುಡಕಟ್ಟು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ

ನಮ್ಮ ದೇಶದಲ್ಲಿ ಹಲವು ಶತಮಾನಗಳಿಂದಲೇ ಮಹಿಳೆಯರನ್ನು ಸರಕಾಗಿ ಕಾಣಲಾಗುತ್ತದೆ. ಅದರಲ್ಲೂ ದಲಿತ, ಬುಡಕಟ್ಟು ಮಹಿಳೆಯರನ್ನು ಸರ್ವರ್ಣಿಯರ ಮತ್ತು ಅದೇ ಜಾತಿಗೆ ಸೇರಿದ ಪುರುಷರ ಸೊತ್ತಿನಂತೆ ಈ ಪುರುಷ ಪ್ರಧಾನ ಸಮಾಜ ಪರಿಗಣಿಸುತ್ತಾ ಬಂದಿದೆ. ಎಷ್ಟೇ ಬದಲಾವಣೆಗಳಾದರೂ ಮಹಿಳೆಯರ ಮುಖ್ಯವಾಗಿ ದಲಿತ ಮಹಿಳೆಯರ ಮೇಲೆ ಜಾತಿ ಆಧಾರದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಕಡಿಮೆಯಾಗಿಲ್ಲ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ಡೇಟಾ ಪ್ರಕಾರ 2015 ಮತ್ತು 2020ರ ನಡುವೆ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಶೇಕಡ 45ರಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ಪ್ರತಿದಿನ ಸರಾಸರಿ 10 ದಲಿತ ಮಹಿಳೆಯರು ಮತ್ತು ಯುವತಿಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-2016 ಲೈಂಗಿಕ ದೌರ್ಜನ್ಯದ ಪ್ರಮಾಣವು ದಲಿತ ಮಹಿಳೆಯರ ಮೇಲೆ ಅಧಿಕವಾಗಿದೆ ಎಂದು ಹೇಳಿದೆ. ಪರಿಶಿಷ್ಟ ಪಂಗಡಗಳ (ಆದಿವಾಸಿ ಅಥವಾ ಸ್ಥಳೀಯ ಭಾರತೀಯರು) ಮಹಿಳೆಯರ ಮೇಲೆ ಶೇ.7.8ರಷ್ಟು, ಪರಿಶಿಷ್ಟ ಜಾತಿಗಳು (ದಲಿತರು) ಶೇ.7.3ರಷ್ಟು, ಹಿಂದುಳಿದ ಜಾತಿಗಳು (ಒಬಿಸಿ) ಶೇ. 5.4 ರಷ್ಟು, ಬುಡಕಟ್ಟು ಜನಾಂಗದಲ್ಲಿ ಶೇ. 4.5ರಷ್ಟು ಲೈಂಗಿಕ ದೌರ್ಜನ್ಯದ ಪ್ರಮಾಣವು ಹೆಚ್ಚಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಗೆ ಮೂವರ ಬಲಿ, 7 ಮನೆಗಳಿಗೆ ಬೆಂಕಿ

ದೀರ್ಘಕಾಲದಿಂದ ಜನಾಂಗೀಯ ಸಂಘರ್ಷಕ್ಕೆ ಈಡಾಗಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್‌ಪೋಕ್ಪಿ...

ದೆಹಲಿ ಪ್ರತಿಭಟನೆ | ವಶಕ್ಕೆ ಪಡೆದ ನೂರಾರು ಪ್ರತಿಭಟನಾಕಾರರನ್ನು ಸ್ಟೇಡಿಯಂಗೆ ದಬ್ಬಿದ ಪೊಲೀಸರು

ದೆಹಲಿಯ ವಿವಿಧ ಪ್ರದೇಶಗಳಿಂದ CJP ನೂರಾರು ಕಾರ್ಯಕರ್ತರು ಸೇರಿದಂತೆ ಹಲವು ನಾಗರಿಕರು...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ದೆಹಲಿಯಲ್ಲಿ ಮೂವರು ಮಾಜಿ ಸಿಎಂ – ಮಮತಾ, ಪಿಣರಾಯಿ, ಕೇಜ್ರಿವಾಲ್ – ಬಂಧನ

ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ ಮತ್ತು ಎಸ್‌ಐಆರ್‌ ರದ್ದತಿಗೆ ಆಗ್ರಹಿಸಿ...