ಐಪಿಎಲ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯ ಇಂದು (ಮೇ 29) ನಡೆಯುತ್ತಿದ್ದು, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಈ ನಿರ್ಣಾಯಕ ಪಂದ್ಯವನ್ನು ವೀಕ್ಷಿಸಲು ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಆಗಮಿಸಿದ್ದಾರೆ.
ಬುಧವಾರ ಮುಂಬೈಗೆ ಬಂದಿಳಿದಿರುವ ಎಬಿಡಿ, ಅಲ್ಲಿಂದ ಚಂಡೀಗಢ್ಗೆ ತೆರಳುವುದಾಗಿ ತಿಳಿಸಿದ್ದಾರೆ. ಅದರಂತೆ ಇಂದು ಮುಲ್ಲನ್ಪುರ್ನಲ್ಲಿ ಜರುಗಲಿರುವ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಎಬಿಡಿ ಕಾಣಿಸಿಕೊಳ್ಳಲಿದ್ದಾರೆ. ಇದು ಆರ್‌ಸಿಬಿ ಅಭಿಮಾನಿಗಳ ಸಂತೋಷವನ್ನು ಹೆಚ್ಚು ಮಾಡಿದೆ.
2008 ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ ಕಪ್ ಗೆದ್ದಿಲ್ಲ. ಆರ್‌ಸಿಬಿ ತನ್ನ ಇತಿಹಾಸದಲ್ಲಿ ಕ್ರಮವಾಗಿ 2009, 2011 ಮತ್ತು 2016 ರಲ್ಲಿ ಮೂರು ಬಾರಿ ಐಪಿಎಲ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಮೂರು ಬಾರಿ ಕೂಡ ಫೈನಲ್ನಲ್ಲಿ ಎಡವಿತ್ತು. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯಲ್ಲಿದೆ.

ಇದಕ್ಕೂ ಮುನ್ನ ಆರ್‌ಸಿಬಿ ತಂಡ ಕಪ್ ಗೆಲ್ಲುವ ಭರವಸೆಯನ್ನು ಎಬಿಡಿ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಾರಿ ರಾಯಲ್ ಪಡೆ ಫೈನಲ್ಗೇರಿದರೆ ಟ್ರೋಫಿ ಎತ್ತಿ ಹಿಡಿಯಲು ನಾನು ಸಹ ಹಾಜರಿರಲಿದ್ದೇನೆ ಎಂದಿದ್ದರು. ಆದರೆ, ಇದೀಗ ಪ್ಲೇಆಫ್ ಪಂದ್ಯಕ್ಕೂ ಮುನ್ನವೇ ಎಬಿಡಿ ಭಾರತಕ್ಕೆ ಆಗಮಿಸಿದ್ದು, ಈ ಮೂಲಕ ಈ ಬಾರಿ ಆರ್‌ಸಿಬಿ ತಂಡ ಕಪ್ ಗೆಲ್ಲುವುದು ಬಹುತೇಕ ಖಚಿತ ವಿಶ್ವಾಸದಲ್ಲಿ ಡಿವಿಲಿಯರ್ಸ್ ಭಾರತಕ್ಕೆ ಆಗಮಿಸಿದಂತಿದೆ.
RCB are two wins away from the title, securing a spot in Playoff 1, vs table toppers PBKS. Join me on today’s #360LIVE to talkaboutitall. https://t.co/Cy1yj2Yj8b
— AB de Villiers (@ABdeVilliers17) May 28, 2025