ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರ, ಬೆಂಗಳೂರು ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಭಾರತ ಸರ್ಕಾರ ಮತ್ತು ಕಲಬುರಗಿ ಜಿಲ್ಲಾ ಕೃಷಿ ಇಲಾಖೆ ಸಹಯೋಗದೊಂದಿಗೆ ಪ್ರಸ್ತುತ 2025ನೇ ಮುಂಗಾರು ಬಿತ್ತನೆ ಬೀಜ ವಿತರಣೆ ಮತ್ತು ಬೀಜೋಪಚಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಕಲಬುರಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೋಟನೂರುನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರ್‌ಸಿಐಪಿಎಂಸಿ(RCIPMC)ಯ ಜಂಟಿ ನಿರ್ದೇಶಕ ಡಾ.ಅಲಂಗೀರ್ ಸಿದ್ದೀಕಿಯವರು ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಅವರು ಭಾಗವಹಿಸಿ ರೈತರನ್ನು ಉದ್ದೇಶಿಸಿ ಮಾತನಾಡಿ, ಬೀಜೋಪಚಾರದ ಪ್ರಯೋಜನಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಆರ್‌ಸಿಐಪಿಎಂಸಿಯ ಸಿಬ್ಬಂದಿಗಳಾದ ಡಾ. ಜಯಸಿಂಹ, ಡಾ. ವಿಕಾಸ್ ಚವಾಣ್ ಮತ್ತು ದಿವ್ಯ ಅವರು ಬೀಜೋಪಚರ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಏಳು ಕಡೆ ಲೋಕಾಯುಕ್ತ ದಾಳಿ; ಲೆಕ್ಕವಿಲ್ಲದ ನಗದು, ಚಿನ್ನದ ಆಭರಣಗಳು ಪತ್ತೆ
ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ನೀಲಕ್ಕ ನಾರಸಲಾಗಿ ಹಾಗೂ ಕೃಷಿ ಅಧಿಕಾರಿಗಳದಾಂತಹ ಯಾಸ್ಮಿನ್ ಹಾಗೂ ಸುಜಾತ ರಜ್ಞಾಲ್ಕರ್ ಅವರು ರೈತರೊಂದಿಗೆ ಸಂವಾದ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
