ಅಧಿವೇಶನ | ನೋಂದಣಿ ತಿದ್ದುಪಡಿ ವಿಧೇಯಕ ಅಂಗೀಕಾರ, ನಕಲಿ ನೋಂದಣಿಗೆ 3 ವರ್ಷ ಜೈಲು

Date:

Advertisements
  • ನಕಲಿ ನೋಂದಣಿ ಮಾಡುವ ಅಧಿಕಾರಿ ವರ್ಗಕ್ಕೆ ಖಡಕ್ ಎಚ್ಚರಿಕೆ
  • ನಕಲಿ ನೋಂದಣಿ ಮಾಡಿದರೆ ಅಧಿಕಾರಿಗಳಿಗೆ ಮೂರು ವರ್ಷ ಜೈಲು

ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಥವಾ ಕಾನೂನಿನಡಿಯಲ್ಲಿ ನಿಷೇಧಿಸಲಾದ ಇತರ ದಾಖಲೆಗಳ ಆಧಾರದ ಮೇಲೆ ಆಸ್ತಿ ವಹಿವಾಟುಗಳನ್ನು ಅಧಿಕೃತಗೊಳಿಸುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಮತ್ತು ಅಂತಹ ನಕಲಿ ನೋಂದಣಿಯನ್ನು ರದ್ದುಗೊಳಿಸುವ ನೋಂದಣಿ ವಿಧೇಯಕವನ್ನು ಸಚಿವ ಕೃಷ್ಣಭೈರೇಗೌಡ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು.

ಪ್ರತಿಪಕ್ಷಗಳ ನಾಯಕರ ಗಲಾಟೆ ನಡುವೆ ಈ ಮಸೂದೆ ಸರ್ವಾನುಮತದಿಂದ ಅಂಗೀಕಾರಗೊಂಡಿತು. ಸದನದಲ್ಲಿ ಮಸೂದೆಯನ್ನು ಮಂಡಿಸಿ ಮಾತನಾಡಿದ ಸಚಿವರು, “ನೋಂದಣಿ ಕಾಯ್ದೆ 1908ರಲ್ಲಿ ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಯಾವುದೇ ಮಾಲೀಕತ್ವ ಇಲ್ಲದ, ದಾಖಲೆ ಇಲ್ಲದ ಅಥವಾ ನಿಜವಾದ ಮಾಲೀಕರಂತೆ ನಟಿಸುವ ಮೂಲಕ ಮಾಡಿದ ಮೋಸದ ನೋಂದಣಿಯನ್ನು ರದ್ದುಪಡಿಸಲು ನೋಂದಣಿ ಪ್ರಾಧಿಕಾರಕ್ಕೆ ಅಧಿಕಾರ ಇರುವುದಿಲ್ಲ” ಎಂದು ಹೇಳಿದರು.

“ನೊಂದ ಮಾಲೀಕರು ಸಿವಿಲ್ ನ್ಯಾಯಾಲಯದ ಮೂಲಕ ಮೋಸದ ನೋಂದಣಿಯನ್ನು ರದ್ದು ಮಾಡಬೇಕಿರುತ್ತದೆ. ಆದರೆ, ನ್ಯಾಯಾಂಗ ಆದೇಶ ಪಡೆಯುವ ಪ್ರಕ್ರಿಯೆ ಕನಿಷ್ಠ 10 ವರ್ಷಕ್ಕೂ ಹೆಚ್ಚಿರುತ್ತದೆ. ಇದರಿಂದಾಗಿ ಆಸ್ತಿ ಮಾಲೀಕರಿಗೆ ಕಿರುಕುಳ, ತೊಂದರೆ ಅನ್ಯಾಯವಾಗುತ್ತದೆ. ಸಾರ್ವಜನಿಕರಿಗೆ ಉಂಟಾಗುವ ಇಂತಹ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ” ಎಂದು ಮಸೂದೆಯನ್ನು ಸಮರ್ಥಿಸಿಕೊಂಡರು.

Advertisements

“ನಕಲಿ ದಾಲೆಗಳ ಮೂಲಕ ಮೋಸ ಮಾಡುವವರಿಗೆ ಸಹಾಯವಾಗುತ್ತಿತ್ತು. ಕೆಲವು ಅಧಿಕಾರಿಗಳು ತಮಗೇ ಗೊತ್ತಿಲ್ಲದೆ ನಕಲಿ ನೋಂದಣಿ ಮಾಡಿರುತ್ತಾರೆ. ಇನ್ನೂ ಕೆಲವು ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ನಕಲೀದಾರರ ಜೊತೆ ಶಾಮೀಲಾಗಿ ತಪ್ಪು ನೋಂದಣಿ ಮಾಡಿದ್ದಾರೆ. ಇಂತಹ ಹಲವು ಪ್ರಕರಣಗಳ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರಿನಲ್ಲಿ ಹುಟ್ಟಿರುವ ‘ಇಂಡಿಯಾ’ದ ದಾರಿ ಸಲೀಸಲ್ಲ

“ಪ್ರಸ್ತುತ ಶಾಸಕರಾಗಿರುವ ನರೇಂದ್ರ ಸ್ವಾಮಿ, ಅಭಯ್ ಪಾಟೀಲ್ ಅವರ ಆಸ್ತಿಯನ್ನೇ ಹೀಗೆ ನಕಲು ದಾಖಲೆಯ ಮೇಲೆ ಕಬಳಿಸಲಾಗಿತ್ತು. ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್ ಹಾಗೂ ಬಿ ಶಂಕರಾನಂದ್ ಸಹ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದರು. ಶಾಸಕರಿಗೇ ಈ ಪರಿಸ್ಥಿತಿಯಾದರೆ, ಸಾಮಾನ್ಯರ ಪರಿಸ್ಥಿತಿ ಏನು? ಹೀಗಾಗಿ ಆಡಳಿತ ಸುಧಾರಣೆ, ಆಡಳಿತ ಸರಳೀಕರಣ ಮತ್ತು ಕಚೇರಿಗಳಲ್ಲಿ ವಿಳಂಬ, ಶೋಷಣೆ, ಸುಲಿಗೆ ಇಲ್ಲದೆ ಜನರ ಕೆಲಸ ತಕ್ಷಣ ಆಗಬೇಕು ಎಂಬ ಕಾರಣದಿಂದ ಇಂದು ನೋಂದಣಿ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲಾಗಿದೆ ತರಲಾಗುತ್ತಿದೆ” ಎಂದು ಸಚಿವ ಕೃಷ್ಣಭೈರೇಗೌಡ ಸದನಕ್ಕೆ ತಿಳಿಸಿದರು.

ನೋಂದಣಿ ತಿದ್ದುಪಡಿ ಮಸೂದೆ 2023

ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಯ ಪ್ರಕಾರ, ನೋಂದಣಿ ಅಧಿಕಾರಿ (ಸಾಮಾನ್ಯವಾಗಿ ಸಬ್-ರಿಜಿಸ್ಟ್ರಾರ್) ನಕಲಿ ದಾಖಲೆಗಳನ್ನು ನೋಂದಾಯಿಸಲು ನಿರಾಕರಿಸಬೇಕು. ಯಾವುದೇ ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಕೇಂದ್ರ ಅಥವಾ ರಾಜ್ಯ ಕಾಯ್ದೆಗಳಿಂದ ನಿಷೇಧಿಸಲಾಗಿದ್ದು, ಅಂತಹ ಆಸ್ತಿಗಳ ದಾಖಲೆಗಳನ್ನು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸಬೇಕು. ಅಧಿಕಾರಿಗಳು ನಿಯಮ ಮೀರಿ ನಕಲಿ ದಾಖಲಾತಿಗಳನ್ನು ನೋಂದಾಯಿಸಿದರೆ, ಈ ಮಸೂದೆಯು ಅಧಿಕಾರಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಪ್ರಸ್ತಾಪಿಸುತ್ತದೆ. ದಾಖಲೆಗಳ ಮೋಸದ ನೋಂದಣಿಯಲ್ಲಿ ತೊಡಗಿರುವ ಕಂಪನಿಗಳನ್ನು ಶಿಕ್ಷಿಸಲು ಮಸೂದೆ ಪ್ರಸ್ತಾಪಿಸುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

Download Eedina App Android / iOS

X