ಉಡುಪಿಯಲ್ಲಿರುವ ಚಿನ್ನಾಭರಣ ತಯಾರಿಕಾ ಘಟಕವೊಂದು ರಾಸಾಯನಿಕ ಹೊಗೆಯನ್ನು ಹೊರಸೂಸುತ್ತಿದ್ದು, ನಗರದ ಜನರಲ್ಲಿ ಆತಂಕ ಸೃಷ್ಠಿಸಿದೆ.
ನಗರದ ಯೂನಿಯನ್ ಬ್ಯಾಂಕ್ ರಸ್ತೆಯಲ್ಲಿರುವ ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು, ದೇವಾಲಯ, ಮಸೀದಿ, ಸರ್ಕಾರಿ ಶಾಲೆ, ವಸತಿ ಸಮುಚ್ಛಗಳಿವೆ. ಇಲ್ಲಿನ ಪರಿಸರದಲ್ಲಿ ಕಾರ್ಖಾನೆಯ ಹೊಗೆ ಆವರಿಸಿಕೊಳ್ಳುತ್ತಿದೆ.
ರಾಸಾಯನಿಕಯುಕ್ತ ಹೊಗೆಯಿಂದ ಮೂಗು-ಕಣ್ಣು ಉರಿ, ಕೆಮ್ಮು ಕಾಣಿಸುತ್ತಿದೆ. ಪಾದಾಚಾರಿಗಳು ಕೂಡ ಮೂಗು ಮುಚ್ಚಿ ನಡೆದು ಹೋಗಬೇಕಾದ ಪರಿಸ್ಥಿತಿ ಇದೆ. ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.
ಇದೇ ರೀತಿಯ ಚಿನ್ನಾಭರಣದ ಘಟಕವೊಂದು ಕೇರಳದ ವಸತಿ ಪ್ರದೇಶದಲ್ಲಿತ್ತು. ಅದನ್ನು ಅಲ್ಲಿನ ಸ್ಥಳೀಯ ಆಡಳಿತ ಮುಚ್ಚಿಸಿತ್ತು. ಅಂತೆಯೇ, ಈ ಘಟಕವನ್ನೂ ಜಿಲ್ಲಾಡಳಿತ ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ