ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ‘ಡ್ರೋನ್’ ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದ್ದು ಸದ್ಯ ಡ್ರೋನ್‌ನಲ್ಲಿ ನೇತಾಡುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಡ್ರೋನ್ ಮೂಲಕ ರಕ್ಷಿಸಲಾಗಿದೆ.
ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಮೂರು ನದಿಗಳ ಸಂಗಮವಿರುವ ಮತ್ತು 3,00,000 ನಿವಾಸಿಗಳ ನೆಲೆಯಾದ ರೊಂಗ್ಜಿಯಾಂಗ್ ಅರ್ಧದಷ್ಟು ಮುಳುಗಿದೆ. ಇದರಿಂದಾಗಿ ನಿವಾಸಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಚಾರಣೆಯನ್ನು ಚೀನಾದ ಅಧಿಕಾರಿಗಳು ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ
ಈ ವಾರದ ಆರಂಭದಲ್ಲಿ ರೊಂಗ್ಜಿಯಾಂಗ್‌ನಲ್ಲಿ ದಾಖಲೆಯ ಮಳೆಯಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. 80,000ಕ್ಕೂ ಹೆಚ್ಚು ಮಂದಿ ಮನೆ ತೊರೆದಿದ್ದಾರೆ. ಸಾಮಾನ್ಯವಾಗಿ 72 ಗಂಟೆಗಳಲ್ಲಿ ರೊಂಗ್ಜಿಯಾಂಗ್‌ನಲ್ಲಿ ಸುರಿಯುವ ಸರಾಸರಿ ಮಳೆಗಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರವಾಹ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಚೀನಾ ಡ್ರೋನ್‌ನಂತಹ ತಾಂತ್ರಿಕ ಉಪಕರಣಗಳನ್ನು ಬಳಸುತ್ತಿದೆ. ಡ್ರೋನ್ ಮೂಲಕ ವ್ಯಕ್ತಿಯೊಬ್ಬರನ್ನು ಸುರಕ್ಷಿತವಾಗಿ ಸಾಗಿಸಲಾಗುತ್ತಿದ್ದು, ಈ ಡ್ರೋನ್‌ಗಳಿಗೆ 100 ಕೆಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ ಎಂದು ವರದಿಯಾಗಿದೆ.
Unbelievable! A drone rescued a man trapped in floodwaters in China’s Guangxi. The drone can lift a 100kg weight. pic.twitter.com/KTc1ZaeffG
— Li Zexin (@XH_Lee23) June 28, 2025
ಆಶ್ಚರ್ಯ ವ್ಯಕ್ತಪಡಿಸಿದ ನೆಟ್ಟಿಗರು
ವ್ಯಕ್ತಿಯನ್ನು ಡ್ರೋನ್ ರಕ್ಷಣೆ ಮಾಡುವ ವಿಡಿಯೋವನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಚೀನಾ ಸುದ್ದಿ ಮಾಧ್ಯಮಗಳ ಮೂಲಕ ಶನಿವಾರ ರೊಂಗ್ಜಿಯಾಂಗ್‌ನಲ್ಲಿ 40,000ಕ್ಕೂ ಹೆಚ್ಚು ನಿವಾಸಿಗಳನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ. “ಚೀನಾ ಇಡೀ ವಿಶ್ವದ ಭವಿಷ್ಯ ಏನಿದೆಯೋ ಅದನ್ನು ಈಗಲೇ ಹೊಂದಿದೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
“ಚೀನಾದ ಡ್ರೋನ್‌ಗಳು ಈಗ ಅರ್ಧದಷ್ಟು ರಕ್ಷಣಾ ತಂಡಗಳು ಮಾಡಲಾಗದ ಕೆಲಸವನ್ನು ಮಾಡುತ್ತವೆ” ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. “ಡ್ರೋನ್‌ಗಳು ಸೂಪರ್‌ಹೀರೋಗಳಾಗಿವೆಯೇ” ಎಂದು ಇನ್ನೋರ್ವರು ಪ್ರಶ್ನಿಸಿದರೆ, “ನಿಜಕ್ಕೂ ನಂಬಲಾಗದು! ತಂತ್ರಜ್ಞಾನವು ಮಾನವೀಯತೆಗೆ ಬಳಕೆಯಾದಾಗ ಪವಾಡಗಳು ಸಂಭವಿಸುತ್ತವೆ” ಎಂದು ನೆಟ್ಟಿಗರು ಆಶ್ಚರ್ಯ ಸೂಚಿಸಿದ್ದಾರೆ.
